ಪರೀಕ್ಷೆ ಹಾಡು ಬಿಡುಗಡೆ; ಗಾಳಿಪಟ ಹಾರಲು ರೆಡಿಯಾಗಿದೆ..

Galipata
Published on

ಬೆಂಗಳೂರು: ಇನ್​ಫೋಸಿಸ್​ನ ಡಾ. ಸುಧಾ ಮೂರ್ತಿ ಅವರ ಜತೆಗೆ ನಿರ್ಮಾಪಕ ರಮೇಶ್ ರೆಡ್ಡಿ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದರಂತೆ. ವಾಪಸ್ಸು ಬರುವಾಗ ಸುಧಾ ಮೂರ್ತಿ ಅವರಿಗೆ ಯೋಗರಾಜ್ ಭಟ್ ಯಾವುದೋ ಕಾರಣಕ್ಕೆ ಫೋನ್ ಮಾಡಿದ್ದಾರೆ. ಫೋನ್ ಇಟ್ಟ ಮೇಲೆ ಸುಧಾ ಮೂರ್ತಿ, ರೆಡ್ಡಿಗಳಿಗೆ ಒಂದು ಮಾತು ಹೇಳಿದರಂತೆ. ‘ಭಟ್ಟರು ‘ಗಾಳಿಪಟ 2’ ಅಂತ ಕಥೆ ಮಾಡಿಟ್ಟುಕೊಂಡಿದ್ದಾರೆ. ಸಾಧ್ಯವಾದರೆ ನಿರ್ಮಾಣ ಮಾಡಿ ಎಂದರಂತೆ. ಅವರು ಹೇಳಿದ ಮೇಲೆ ಮುಗೀತು. ರೆಡ್ಡಿಗಳು ಚಿತ್ರ ನಿರ್ಮಾಣ ಮಾಡಿದ್ದಾರೆ.

‘ಈಗಾಗಲೇ ನಾಲ್ಕು ಪರೀಕ್ಷೆ (ಚಿತ್ರಗಳಲ್ಲಿ) ಫೇಲ್ ಆಗಿದ್ದೇನೆ. ಐದನೇ ಪರೀಕ್ಷೆ ಬರೆದಿದ್ದು, ನೀವೆಲ್ಲಾ ಸೇರಿ ಪಾಸ್ ಮಾಡಿಸಿ’ ಎನ್ನುತ್ತಾರೆ ರಮೇಶ್ ರೆಡ್ಡಿ. ಅಂದಹಾಗೆ, ಅವರು ಮಾತಾಡಿದ್ದು, ಚಿತ್ರದ ಪರೀಕ್ಷೆ ಹಾಡು ಬಿಡುಗಡೆಯ ಸಮಾರಂಭದಲ್ಲಿ. ಹಾಡು ಬಿಡುಗಡೆಯಾಗಿದ್ದು ಅಶೋಕಾ ಹೋಟೆಲ್​ನಲ್ಲಿ. ಇದು ಚಿತ್ರದ ಮೊದಲ ಕಾರ್ಯಕ್ರಮವವಾದ್ದರಿಂದ, ಚಿತ್ರತಂಡದವರೆಲ್ಲ ಒಟ್ಟಿಗೆ ಜಮಾಯಿಸಿದ್ದರು.

‘ಗಾಳಿಪಟ’ ಎಂದರೆ ನನಗೆ ಎಮೋಷನ್ ಅಂತಲೇ ಮಾತು ಶುರು ಮಾಡಿದರು ಗಣೇಶ್. ‘ಭಟ್ಟರು ಕಥೆ ಹೇಳಿದಾಗ ಕುತೂಹಲ ಹೆಚ್ಚಾಯಿತು. ಕುದುರೆಮುಖದ ಕಾಲೇಜ್ ಸೆಟ್​ನಲ್ಲಿ 500ಕ್ಕೂ ಹೆಚ್ಚು ಜನರೊಂದಿಗೆ ನಟಿಸಿದ್ದು, ಈಗಲೂ ಮರೆಯುವ ಹಾಗಿಲ್ಲ. ಇಲ್ಲೂ ರಂಗಾಯಣ ರಘು ನನ್ನ ಅಪ್ಪನ ಪಾತ್ರದಲ್ಲಿ ನಟಿಸಿದ್ದಾರೆ’ ಎಂದರು. ಅಂದು ವೇದಿಕೆ ಮೇಲೆ ಜಯಂತ್ ಕಾಯ್ಕಿಣಿ, ರಮೇಶ್ ರೆಡ್ಡಿ, ದಿಗಂತ್, ‘ಲೂಸಿಯಾ’ ಪವನ್, ಶರ್ವಿುಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಪದ್ಮಜಾ ರಾವ್ ಸೇರಿದಂತೆ ಹಲವರು ಹಾಜರಿದ್ದು, ಎಲ್ಲರೂ ಚಿತ್ರದ ಬಗ್ಗೆ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net