ತೇಜಸ್ವಿನಿಗೆ ಫುಲ್ ಮೀಲ್ಸ್!; ನಾಯಕಿಯ ಹುಟ್ಟುಹಬ್ಬಕ್ಕೆ ಚಿತ್ರತಂಡದ ಪೋಸ್ಟರ್ ಉಡುಗೊರೆ

full meals
Published on

ಬೆಂಗಳೂರು: ಲಿಖಿತ್ ಶೆಟ್ಟಿ ನಾಯಕನಾಗಿರುವ, ಎನ್. ವಿನಾಯಕ್ ನಿರ್ದೇಶಿಸುತ್ತಿರುವ ಚಿತ್ರ ‘ುಲ್ ಮೀಲ್ಸ್’. ಲಿಖಿತ್ ಇಲ್ಲಿ ವೆಡ್ಡಿಂಗ್ ೆಟೋಗ್ರಾರ್ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಸುತ್ತ ಕಥೆ ನಡೆಯಲಿದೆ. ಅವರಿಗೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಖುಶಿ ರವಿ ಮತ್ತು ತೇಜಸ್ವಿನಿ ಶರ್ಮಾ ನಟಿಸಿದ್ದಾರೆ.

ಇತ್ತೀಚೆಗಷ್ಟೆ ತೇಜಸ್ವಿನಿ ಹುಟ್ಟುಹಬ್ಬದಂದು ಚಿತ್ರತಂಡ ಅವರಿಗೆ ಪೋಸ್ಟರ್ ಉಡುಗೊರೆ ನೀಡಿದೆ. ‘ುಲ್ ಮೀಲ್ಸ್’ನಲ್ಲಿ ತೇಜಸ್ವಿನಿ ಮೇಕಪ್ ಕಲಾವಿದೆ ಪಾತ್ರದಲ್ಲಿ ನಟಿಸುತ್ತಿದ್ದು, ಮೇಕಪ್ ಆರ್ಟಿಸ್ಟ್‌ಗಳ ಬವಣೆಯನ್ನು ವಿಡಂಬನೆ ಮತ್ತು ಮನೋರಂಜನೆಯಿಂದ ಕೂಡಿದೆ ವಿಡಿಯೋ ಕೂಡ ಬಿಡುಗಡೆ ಮಾಡಲಾಗಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳಿಸುವ ಆಲೋಚನೆ ಚಿತ್ರತಂಡದ್ದು.

ಲಿಖಿತ್, ಖುಶಿ ರವಿ, ತೇಜಸ್ವಿನಿ ಜತೆ ರಂಗಾಯಣ ರಘು, ಸೂರಜ್, ವಿಜಯ್ ಚೆಂಡೂರ್, ಚಂದ್ರಕಲಾ ಮೋಹನ್, ರಾಜೇಶ್ ನಟರಂಗ, ರವಿಶಂಕರ್ ಗೌಡ, ಸುಜಯ್ ಶಾಸಿ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net