

ಬೆಂಗಳೂರು: ಕೇವಲ ಕನ್ನಡ ಸಿನಿಪ್ರಿಯರಲ್ಲದೇ ತೆಲಗು ತಮಿಳು ಸಿನಿಪ್ರಿಯರಲ್ಲೂ ತೀವ್ರ ಕುತೂಹಲ ಹುಟ್ಟಿಹಾಕಿರುವ ರಾರ್ಬಟ್ ಚಿತ್ರ ಮುಂದಿನ ತಿಂಗಳು ಮಾರ್ಚ್ 11 ರಂದು ತೆರೆಗೆ ಬರಲು ಸಿದ್ದವಾಗಿದೆ.
ಈಗಾಗಲೇ ಬಿಡುಗಡೆಗೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಚಿತ್ರ ತಂಡ ತೆಲಂಗಾಣ, ಆಂಧ್ರಪ್ರದೇಶದ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಚಿತ್ರ ಬಿಡುಗಡೆಗೂ ಮುನ್ನ ಫೆ 26 ರಂದು ರಾಬರ್ಟ್, ಪ್ರಿ ರಿಲೀಸ್ ಇವೆಂಟ್ನ್ನು ಆಯೋಜಿಸಿದೆ. ಈ ಇವೆಂಟ್ ಹೈದರಾಬಾದ್ ಫಿಲ್ಮನಗರದ ಜೆಆರ್ಸಿ ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿದೆ. ಈ ವಿಷಯವನ್ನು ಸ್ವತಃ ದರ್ಶನ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಕಾರ್ಯಕ್ರಮ ಏನು, ಅದರ ರೂಪುರೇಷೆಗಳೇನು ಎಂಬುದನ್ನು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ. ಆದರೆ, ಬಿಡುಗಡೆಗೂ ಮುನ್ನ ಹೈದರಾಬಾದ್ನಲ್ಲಿ ರಾಬರ್ಟ್ ಧೂಳ್ ಎಬ್ಬಿಸಲಿದೆ. ಪೊಗರು ಚಿತ್ರತಂಡವೂ ಕೂಡ ಕಳೆದ ವಾರ ದಾವಣಗೇರೆಯಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಿ ಭರ್ಜರಿ ಮುನ್ನುಡಿ ಬರೆದಿತ್ತು. ಇದೇ ರೀತಿ ರಾಬರ್ಟ್ ಚಿತ್ರತಂಡವೂ ಸಿನಿಮಾಕ್ಕೆ ವ್ಯಾಪಕವಾದ ಪ್ರಚಾರ ಕೊಡಲು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇನ್ನು ಇಂತಹದೇ ಕಾರ್ಯಕ್ರಮವನ್ನು ಫೆ 28 ರಂದು ಹುಬ್ಬಳ್ಳಿಯಲ್ಲೂ ನಡೆಸಲು ರಾಬರ್ಟ್ ಚಿತ್ರತಂಡ ತೀರ್ಮಾನಿಸಿದೆ.