ಪ್ರೖೆಮ್​ನಲ್ಲಿ ಹೊಸತನ: 40 ಹೊಸ ಚಿತ್ರಗಳು ಮತ್ತು ವೆಬ್​ಸೀರೀಸ್

Amazon
Published on

ಇದುವರೆಗೂ ಯಾವೊಂದು ಒಟಿಟಿ ಸಹ ಏಕಕಾಲಕ್ಕೆ ಇಷ್ಟೊಂದು ಹೊಸ ಘೋಷಣೆಯನ್ನು ಮಾಡಿರಲಿಲ್ಲ. ಈ ನಿಟ್ಟಿನಲ್ಲಿ ಅಮೇಜಾನ್ ಪ್ರೖೆಮ್ ಹೊಸ ದಾಖಲೆಯನ್ನೇ ಮಾಡಿದೆ. ಮುಂದಿನ ಎರಡು ವರ್ಷಗಳಲ್ಲಿ ಅಮೇಜಾನ್ ಪ್ರೖೆಮ್ಲ್ಲಿ 40 ಹೊಸ ವೆಬ್​ಸೀರೀಸ್ ಮತ್ತು ಚಿತ್ರಗಳು ಬಿಡುಗಡೆಯಾಗಲಿವೆ. ಇದು ಬರೀ ಹಿಂದಿಗೆ ಮಾತ್ರ ಸೀಮಿತವಲ್ಲ, ತೆಲುಗು ಮತ್ತು ತಮಿಳಿನ ಚಿತ್ರಗಳು ಮತ್ತು ವೆಬ್​ಸೀರೀಸ್​ಗಳನ್ನು ಬಿಡುಗಡೆ ಮಾಡುವುದಕ್ಕೆ ಅಮೇಜಾನ್ ಪ್ರೖೆಮ್ ಮುಂದಾಗಿದೆ. ಈ ನಿಟ್ಟಿನಲ್ಲಿ ಹಲವು ನಿರ್ಮಾಣ ಸಂಸ್ಥೆಗಳೊಂದಿಗೆ ಅಮೇಜಾನ್ ಪ್ರೖೆಮ್ ಕೈಡೋಜಿಸಿದೆ. ಅಷ್ಟೇ ಅಲ್ಲ, ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುತ್ತಿದೆ. ಕರಣ್ ಜೋಹರ್ ನಿರ್ವಣದ ಮೂರು ಚಿತ್ರಗಳ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೇಜಾನ್ ಪ್ರೖೆಮ್ ಪಡೆದಿದ್ದು, ಆ ಸಂಸ್ಥೆಯ ಜತೆಗೆ ನಾಲ್ಕು ಹೊಸ ವೆಬ್​ಸೀರೀಸ್​ಗಳನ್ನು ನಿರ್ವಿುಸುತ್ತಿದೆ.

ಇದಲ್ಲದೆ ‘ದಿ ಫ್ಯಾಮಿಲಿ ಮ್ಯಾನ್’, ‘ಮಿರ್ಜಾಪುರ್’, ‘ಫೋರ್ ಮೋರ್ ಶಾಟ್ಸ್ ಪ್ಲಿಸ್’, ‘ಮುಂಬೈ ಡೈರೀಸ್’, ‘ಪಾತಾಳ್ ಲೋಕ್’, ‘ಮೇಡ್ ಇನ್ ಹೆವನ್’ ಮುಂತಾದ ವೆಬ್​ಸರಣಿಗಳ ಮುಂದುವರೆದ ಭಾಗಗಳನ್ನು ಸಹ ಇದೇ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ. ಇದರ ಜತೆಗೆ ಶಾಹಿದ್ ಕಪೂರ್ ಮತ್ತು ವಿಜಯ್ ಸೇತುಪತಿ ನಟನೆಯ ‘ಫರ್ಜಿ’, ರೋಹಿತ್ ಶೆಟ್ಟಿ’ ನಿರ್ದೇಶನದ ‘ಇಂಡಿಯನ್ ಪೊಲೀಸ್ ಫೋರ್ಸ್’, ನಾಗಚೈತನ್ಯ ಅಭಿನಯದ ‘ಧೂತ’, ಸೋನಾಕ್ಷಿ ಸಿನ್ಹಾ ಅಭಿನಯದ ‘ದಾಹಡ್’ ಮುಂತಾದ ಹೊಸ ಸರಣಿಗಳನ್ನು ಘೋಷಿಸಿದೆ. ಮಾಧುರಿ ದೀಕ್ಷಿತ್ ಅಭಿನಯದ ‘ಮಜಾ ಮ’, ಅಕ್ಷಯ್ ಕುಮಾರ್ ಅಭಿನಯದ ‘ರಾಮ್ ಸೇತು’, ನವಾಜುದ್ದೀನ್ ಸಿದ್ದೀಖಿ ಅಭಿನಯದ ‘ಟೀಕು ವೆಡ್ಸ್ ಶೇರು’, ವಿದ್ಯಾ ಬಾಲನ್ ಅವರ ‘ನೀಯತ್’ ಮುಂತಾದ ಚಿತ್ರಗಳನ್ನು ಚಿತ್ರಮಂದಿರಗಳಿಗಿಂತ ಮುಂಚಿತವಾಗಿ ಅಮೇಜಾನ್​ನಲ್ಲಿ ನೇರವಾಗಿ ಸ್ಟ್ರೀಮ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net