Item Song : ಈ ಹಿಂದೆ ಐಟಂ ಡಾನ್ಸ್ ಮಾಡಲೆಂದೇ ಕೆಲ ನಿರ್ದಿಷ್ಟ ಕಲಾವಿದೆಯರು ಇರುತ್ತಿದ್ದರು. ಆದರೆ, ಕಾಲ ಬದಲಾದಂತೆ ಅಂದರೆ ಟ್ರೆಂಡ್ಗೆ ತಕ್ಕಂತೆ ಖ್ಯಾತ ನಟಿಯರು ಕೂಡ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಮಾಡಲು ಶುರು ಮಾಡಿದರು. ಈ ಟ್ರೆಂಡ್ ಇಂದು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಸ್ಟಾರ್ ನಟಿಯರೇ ಐಟಂ ಹಾಡಿಗೆ ಸೊಂಟ ಬಳುಕಿಸುತ್ತಿದ್ದಾರೆ. ಈಗಾಗಲೇ ಅನೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ಆದರೆ, ಐಟಂ ಹಾಡಿಗೆ ಸೊಂಟ ಬಳುಕಿಸಲು ನಟಿಯರಿಗೆ ಎಷ್ಟು ಸಂಭಾವನೆ ನೀಡಲಾಗುತ್ತದೆ ಅನ್ನೋದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಈ ಗ್ಲಾಮರಸ್ ಮತ್ತು ಸ್ಟೈಲಿಶ್ ಹಾಡಿನ ದೃಶ್ಯಗಳಿಗೆ ನಟಿಯರಿಗೆ ಎಷ್ಟು ಸಂಭಾವನೆ ಸಿಗುತ್ತದೆ? ಮತ್ತು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಯಾರಿದ್ದಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.