

ಬೆಂಗಳೂರು: ಶಿವರಾಜಕುಮಾರ್ ಅಭಿನಯದ 124ನೇ ಚಿತ್ರ ‘ನೀ ಸಿಗೋವರೆಗೂ’ ಕಳೆದ ತಿಂಗಳೇ ಪ್ರಾರಂಭವಾಗಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಸಹ ಮುಗಿದಿದೆ. ಇನ್ನೊಂದು ಹಂತದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಬೇಕಿದ್ದು, ಅಷ್ಟರಲ್ಲೇ ಚಿತ್ರತಂಡದವರು ಒಂದು ಸರ್ಪ್ರೖೆಸ್ ಕೊಟ್ಟಿದ್ದಾರೆ.
‘ನೀ ಸಿಗೋವರೆಗೂ’ ಚಿತ್ರದಲ್ಲಿ ಶಿವರಾಜಕುಮಾರ್, ಆರ್ವಿು ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ವಿಷಯ ಹೊಸದೇನಲ್ಲ. ಈಗಾಗಲೇ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆದರೆ, ಆರ್ವಿು ಸಮವಸ್ತ್ರದಲ್ಲಿ ಶಿವಣ್ಣ ಹೇಗೆ ಕಾಣಿಸುತ್ತಾರೆ ಎಂಬ ವಿಷಯವನ್ನು ಚಿತ್ರತಂಡ ಬಹಿರಂಗಗೊಳಿಸಿರಲಿಲ್ಲ. ಫೋಟೋಶೂಟ್ ಆಗಿದ್ದರೂ, ಆ ಫೋಟೋಗಳನ್ನು ರಹಸ್ಯವಾಗಿ ಇಡಲಾಗಿತ್ತು. ವಿಜಯದಶಮಿ ಹಬ್ಬದ ಅಂಗವಾಗಿ ಈ ಲುಕ್ ಬಿಡುಗಡೆಯಾಗಿದೆ. ಭಾವನಾತ್ಮಕ ಪ್ರೇಮಕಥೆ ಇರುವ ‘ನೀ ಸಿಗೋವರೆಗೂ’ ಚಿತ್ರವನ್ನು ರಾಮ್ ಧೂಲಿಪುಡಿ ನಿರ್ದೇಶಿಸುವುದರ ಜತೆಗೆ ಕಥೆ-ಚಿತ್ರಕಥೆಯನ್ನು ಸಹ ರಚಿಸಿದ್ದಾರೆ.
ನರಾಲ ಶ್ರೀನಿವಾಸ್ ರೆಡ್ಡಿ ಶ್ರೀಕಾಂತ್ ಧುಲಿಪುಡಿ ಹಾಗೂ ಸ್ವಾತಿ ವನಪಲ್ಲಿ ಜಂಟಿಯಾಗಿ ನಿರ್ವಿುಸುತ್ತಿರುವ ಈ ಚಿತ್ರದಲ್ಲಿ ಶಿವರಾಜಕುಮಾರ್ಗೆ ನಾಯಕಿಯಾಗಿ ಮೆರ್ಹೀನ್ ಫಿರ್ಜಾದ ನಟಿಸುತ್ತಿದ್ದು, ಮಿಕ್ಕಂತೆ ನಾಜರ್, ಸಾಧು ಕೋಕಿಲ, ಸಂಪತ್ ಕುಮಾರ್, ಮಂಗ್ಲಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವರಾಜಕುಮಾರ್ ಆಆರ್ವಿು ಅಧಿಕಾರಿಯಾಗಿ ನಟಿಸಲಿರುವ ದೃಶ್ಯಗಳನ್ನು ಕಾಶ್ಮೀರದಲ್ಲಿ ಸೆರೆಹಿಡಿಯಲಾಗುತ್ತಿದ್ದು, ಅದಕ್ಕಾಗಿ ಚಿತ್ರತಂಡ ಸದ್ಯದಲ್ಲೇ ಅಲ್ಲಿಗೆ ಪ್ರಯಾಣ ಬೆಳೆಸಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ವಣವಾಗುತ್ತಿರುವ ಈ ಚಿತ್ರಕ್ಕೆ ಚರಣ್ರಾಜ್ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.