ಮಾಜಿ ಪತಿಗೆ ರಾಕ್​ಸ್ಟಾರ್​ ಎಂದ ಮೊದಲ ಪತ್ನಿ; ಆರೋಪಕ್ಕೆ ಆರತಿ ಬಜಾಜ್​ ಕೊಟ್ಟ ಉತ್ತರ ಇದು

Aarti Bajaj
Published on

ಬಾಲಿವುಡ್​: ಸದ್ಯ ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬರುತ್ತಿದೆ. ನಟಿ ಪಾಯಲ್​ ಘೋಷ್​ ಮಾಡಿರುವ ಆರೋಪಕ್ಕೆ ಕಂಗನಾ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಆದರೆ ತಮ್ಮ ವಿರುದ್ಧದ ಆರೋಪವನ್ನು ಅನುರಾಗ್​ ಕಶ್ಯಪ್​ ತಳ್ಳಿ ಹಾಕಿದ್ದಾರೆ. ಅವರ ಬೆಂಬಲಕ್ಕೂ ಹಲವು ಸೆಲೆಬ್ರಿಟಿಗಳು ನಿಂತಿದ್ದಾರೆ. ಅದರಲ್ಲೂ ಅನುರಾಗ್​ ಕಶ್ಯಪ್​ ಅವರ ಮೊದಲ ಪತ್ನಿ ಆರತಿ ಬಜಾಜ್​ ಕೂಡ ತನ್ನ ಮಾಜಿ ಪತಿಯ ವಿರುದ್ಧದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆರತಿ ಅವರು ಪೋಸ್ಟ್ ಹಾಕಿದ್ದಾರೆ. ಕಶ್ಯಪ್​ ವಿರುದ್ಧ ಎದ್ದಿರುವ ಮೀ ಟೂ ಆರೋಪ ಕೀಳುಮಟ್ಟದ್ದು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಸ್ನೇಹಿತನಿಗೆ ಹೇಳಿದ ಜೋಕ್ಸ್​ ನಿಜವಾಗೋಯ್ತು: ಒಂದೇ ದಿನದಲ್ಲಿ 12 ಕೋಟಿ ರೂ. ಒಡೆಯನಾದ ಯುವಕ!

ಅನುರಾಗ್​​ ಕಶ್ಯಪ್​..ನಾನು ನಿಮ್ಮ ಮೊದಲ ಪತ್ನಿ ಹೇಳುತ್ತಿದ್ದೇನೆ. ನೀವೊಬ್ಬ ರಾಕ್​ಸ್ಟಾರ್​. ನೀವು ಇಷ್ಟುದಿನ ಹೇಗೆ ಮಹಿಳಾ ಸಬಲೀಕರಣಕ್ಕಾಗಿ..ಅವರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಿರೋ..ಅದನ್ನು ಮುಂದುವರಿಸಿ. ನೀವು ಮಹಿಳೆಯರ ಸುರಕ್ಷತೆಗೆ ಎಷ್ಟು ಆದ್ಯತೆ ನೀಡುತ್ತೀರಿ ಎಂಬುದಕ್ಕೆ ನಮ್ಮ ಮಗಳೇ ಸಾಕ್ಷಿ ಎಂದು ಹೇಳಿದ್ದಾರೆ.

ಅನುರಾಗ್​ ವಿರುದ್ಧ ಕೀಳುಮಟ್ಟದ ಆರೋಪ ಮಾಡಲಾಗುತ್ತಿದೆ. ಲೈಂಗಿಕ ಕಿರುಕುಳದ ಆರೋಪ ಕೇಳುತ್ತಿದ್ದಂತೆ ಮೊದಲು ಸಿಟ್ಟು ಬಂತು. ನಂತರ ದೊಡ್ಡದಾಗಿ ನಕ್ಕುಬಿಟ್ಟೆ. ಆರೋಪ ಮಾಡುವವರು ತಮ್ಮ ಲೆವಲ್​ಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ನೀವು ಧೈರ್ಯವಾಗಿರಿ...ನಿಮ್ಮ ಧ್ವನಿ ಎಂದಿಗೂ ಕುಂದದಿರಲಿ..ನಾವೆಲ್ಲ ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಬರೆದಿದ್ದಾರೆ.

ಆರತಿ ಬಜಾಜ್​ ಅವರು ಅನುರಾಗ್​ ಕಶ್ಯಪ್​​ರನ್ನು 1997ರಲ್ಲಿ ವಿವಾಹವಾಗಿದ್ದರು. ನಂತರ 2009ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಇವರಿಬ್ಬರಿಗೂ ಆಲಿಯಾ ಎಂಬ ಮಗಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net