ಮೂವರು ಮಾಜಿ ಮುಖ್ಯಮಂತ್ರಿಗಳಿಂದ ಪರಿಮಳಾ ಡಿಸೋಜಾ ಪೋಸ್ಟರ್ ಬಿಡುಗಡೆ

Parimala F
Published on

ಬೆಂಗಳೂರು: ಸಿನಿಮಾಗಳ ಪೋಸ್ಟರ್, ಟೀಸರ್ ಮತ್ತು ಟ್ರೇಲರ್​ಗಳನ್ನು ರಾಜಕಾರಣಿಗಳು ಬಿಡುಗಡೆ ಮಾಡುವುದು ಹೊಸ ವಿಷಯವೇನಲ್ಲ. ಈಗಾಗಲೇ ಸಾಕಷ್ಟು ರಾಜಕಾರಣಿಗಳು, ತಮ್ಮದೇ ರೀತಿಯಲ್ಲಿ ಸಿನಿಮಾಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗ ಮೂವರು ಮಾಜಿ ಮುಖ್ಯಮಂತ್ರಿಗಳು, ಒಂದೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಆ ಚಿತ್ರದ ಹೆಸರು ‘ಪರಿಮಳ ಡಿಸೋಜಾ’.

ಡಾ. ಗಿರಿಧರ್ ಎಚ್.ಟಿ. ನಿರ್ದೇಶನದ ‘ಪರಿಮಳ ಡಿಸೋಜಾ’ ಎಂಬ ಹೊಸಬರ ಚಿತ್ರದ ಪೋಸ್ಟರ್​ಅನ್ನು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

‘ಪರಿಮಳ ಡಿಸೋಜಾ’ ಚಿತ್ರವನ್ನು ವಿಲೇಜ್ ರೋಡ್ ಫಿಲಂಸ್ ಬ್ಯಾನರ್​ನಡಿ ವಿನೋದ್ ಶೇಷಾದ್ರಿ ನಿರ್ವಿುಸುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಕೋಮಲ್ ಬನವಾಸಿ, ಚಂದನಾ ಶ್ರೀನಿವಾಸ್, ‘ಉಗ್ರಂ’ ರೆಡ್ಡಿ, ಶ್ರೀನಿವಾಸ ಪ್ರಭು ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕ್ರಿಸ್ಟೋಫರ್ ಜೇಸನ್ ಸಂಗೀತ ಸಂಯೋಜಿಸಿದ್ದು, ಕೆ. ರಾಮ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವು, ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net