ಬದುಕಿದ್ದ ವೃದ್ಧೆಯನ್ನೇ ಕಚ್ಚಿ ಕಚ್ಚಿ ತಿಂದ ಬೀದಿನಾಯಿಗಳು!; ಸಾರ್ವಜನಿಕರಿಂದ ಅಂತ್ಯಸಂಸ್ಕಾರ..

Pub crime
Published on: 

ಕಲಬುರಗಿ: ಇಂಥ ಸಾವು ಯಾರಿಗೂ ಬರಬಾರದು ಎಂಬಂಥ ಸಾವೊಂದು ಸಂಭವಿಸಿದೆ. ಇಲ್ಲೊಬ್ಬರು ವೃದ್ಧೆಯನ್ನು ಜೀವಂತ ಇರುವಾಗಲೇ ಬೀದಿನಾಯಿಗಳು ತಿಂದು ಹಾಕಿವೆ. ಕಲಬುರಗಿ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ದೇವಲಗಾಣಗಾಪುರದಲ್ಲಿ ಈ ಘಟನೆ ನಡೆದಿದೆ. ದೇವಲಗಾಣಗಾಪುರದ ಗಾಂಧಿನಗರದ ಬಳಿ ನಿನ್ನೆ ರಾತ್ರಿ ಮಲಗಿದ್ದ ವೃದ್ಧೆಯನ್ನು ಬೀದಿನಾಯಿಗಳು ಕಚ್ಚಿ ಕಚ್ಚಿ ತಿಂದು ಹಾಕಿವೆ.

ಈ ವೃದ್ಧೆಗೆ ಮೂರು ನಾಲ್ಕು ದಿನಗಳ ಹಿಂದೆ ಟಂಟಂ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಆಗ ಈಕೆಯ ಕಾಲಿಗೆ ಗಾಯವಾಗಿತ್ತು. ಆಸ್ಪತ್ರೆಗೆ ತೋರಿಸಿದ್ದ ಟಂಟಂ ಚಾಲಕ, ಬಳಿಕ ದೇವಲಗಾಣಗಾಪುರದ ಗಾಂಧಿನಗರದ ರಸ್ತೆ ಪಕ್ಕದಲ್ಲಿ ಹಾಕಿ ಹೋಗಿದ್ದ.

ಹೀಗಾಗಿ ಅಲ್ಲೇ ಮಲಗಿದ್ದ ವೃದ್ಧೆಯನ್ನು ಬೀದಿನಾಯಿಗಳು ತಿಂದು ಹಾಕಿದ್ದು, ಸಾವಿಗೀಡಾದ ವೃದ್ಧೆಗೆ ದೇವಲಗಾಣಗಾಪುರ ಗ್ರಾಮಸ್ಥರು ಹಾಗೂ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ. ಈಕೆಯ ಹೆಸರು ಇತ್ಯಾದಿ ವಿವರ ಇನ್ನೂ ತಿಳಿದುಬಂದಿಲ್ಲ. ದೇವಲಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.