ಸ್ವಚ್ಛ ಭಾರತ್​ನಲ್ಲಿ ಏಕಲವ್​ಯು!

EKA LAVYA
Published on

ಬೆಂಗಳೂರು:  ಕೇಂದ್ರ ಸರ್ಕಾರ ‘ಸ್ವಚ್ಛ ಭಾರತ್ ಅಭಿಯಾನ’ ಹಮ್ಮಿಕೊಂಡ ಮೇಲೆ ಎಂಥೆಂಥವರೆಲ್ಲ ಎಲ್ಲೆಂದರಲ್ಲಿ ಪೊರಕೆ ಹಿಡಿದು ಸ್ವಚ್ಛ ಮಾಡಿದ್ದನ್ನು ಸಾರ್ವಜನಿಕರು ಕಂಡಿದ್ದಾರೆ. ಇದೀಗ ಅಂಥದ್ದೊಂದು ಪ್ರಯತ್ನ ಚಿತ್ರತಂಡವೊಂದರಿಂದಲೂ ಆಗಿರುವುದು ವಿಶೇಷ.

ಜೋಗಿ ಪ್ರೇಮ್ ನಿರ್ದೇಶನ, ರಕ್ಷಿತಾ ಪ್ರೇಮ್ ನಿರ್ವಣದ ‘ಏಕಲವ್​ಯು’ ಸಿನಿಮಾ ತಂಡ ಶೂಟಿಂಗ್ ಸ್ಪಾಟ್​ನಲ್ಲೂ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಪರಿಸರ ಕಾಳಜಿ ಮೆರೆದಿದೆ. ಊಟಿಯಲ್ಲಿ ಚಿತ್ರೀಕರಣ ನಿರತವಾಗಿರುವ ಚಿತ್ರತಂಡ ಅಲ್ಲಿನ ಸುಂದರ ಪರಿಸರದಲ್ಲಿ ಬಿದ್ದಿದ್ದ ಕಸವನ್ನು ಎತ್ತಿ ಸ್ವಚ್ಛಗೊಳಿಸಿದೆ.

‘ಸುಂದರ ತಾಣದಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ. ಆದರೆ ಇಲ್ಲಿ ಇಷ್ಟೊಂದು ಕಸ ಇರುವುದನ್ನು ಕಂಡು ಬೇಸರಗೊಂಡು ನಮ್ಮ ತಂಡ ಸ್ವಚ್ಛಗೊಳಿಸಿದೆ. ಇಂಥ ಸುಂದರ ಪರಿಸರದ ಪ್ರದೇಶಗಳನ್ನು ನೋಡಿ ಅನುಭವಿಸುವ ಜತೆಗೆ ಅವುಗಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು ಕೂಡ ನಮ್ಮ ಜವಾಬ್ದಾರಿ ಆಗಬೇಕು’ ಎನ್ನುವ ಪ್ರೇಮ್ ಪರಿಸರ ಸ್ವಚ್ಛತೆಯ ವಿಷಯದಲ್ಲಿ ಎಲ್ಲರೂ ಕಾಳಜಿ ತೋರಬೇಕು ಎಂದು ಕೋರಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net