ಬೆಂಗಳೂರು: ಲಾಕ್ಡೌನ್ನಲ್ಲಿ ಸಖತ್ ಸಕ್ರಿಯರಾಗಿದ್ದರು ಹರಿಪ್ರಿಯಾ. ಬೇಬ್ನೋಸ್ ಡಾಟ್ಕಾಮ್ ಎಂಬ ಬ್ಲಾಗ್ ಮಾಡಿಕೊಂಡು, ಪ್ರತಿದಿನ ಅದರಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಬರವಣಿಗೆ ಬಹಳ ಕಡಿಮೆಯಾಗಿದೆ. ಅದಕ್ಕೆ ಕಾರಣವೇನು ಎಂದರೆ, ಕೈತುಂಬ ಕೆಲಸ ಎಂಬ ಉತ್ತರ ಹರಿಪ್ರಿಯಾ ಅವರಿಂದ ಬರುತ್ತದೆ. ‘ಈಗಾಗಲೇ ‘ಪೆಟ್ರೋಮ್ಯಾಕ್ಸ್’ ಮುಗಿದಿದೆ. ‘ಎವರು’ ಚಿತ್ರದ ಕನ್ನಡ ರಿಮೇಕ್ನ ಒಂದು ಹಂತದ ಚಿತ್ರೀಕರಣ ಶುರುವಾಗಿದೆ. ‘ಲಗಾಮು’ ಚಿತ್ರ ಸದ್ಯದಲ್ಲೇ ಶುರುವಾಗಲಿದೆ. ‘ಹ್ಯಾಪಿ ಎಂಡಿಂಗ್’ ಚಿತ್ರದ ಡಬ್ಬಿಂಗ್ ಕೆಲಸಗಳು ಮಾತ್ರ ಬಾಕಿ ಇವೆ. ಹೀಗೆ ಸತತವಾಗಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಬರವಣಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕು. ಸದ್ಯ ಅಷ್ಟು ಸಮಯ ಕೊಡೋದಕ್ಕೆ ಆಗುತ್ತಿಲ್ಲ. ಮುಂದೆ ಬಿಡುವು ಮಾಡಿಕೊಂಡು ತಿಂಗಳಿಗೆ ಮೂರು ಲೇಖನಗಳನ್ನಾದರೂ ಬರೆಯುವಾಸೆ’ ಎನ್ನುತ್ತಾರೆ ಅವರು.