More

    ‘ಮದುವೆ ಆದ್ಮೇಲೆ ಎಲ್ಲರೂ ದಪ್ಪ ಆಗ್ತಾರೆ, ನಾನು ಬಹಳ ಸಣ್ಣಗಾಗಿದ್ದೀನಿ ಅಲ್ವಾ’

    ಬೆಂಗಳೂರು: ‘ಸಾಮಾನ್ಯವಾಗಿ ಮದುವೆ ಆದ್ಮೇಲೆ ಎಲ್ಲರೂ ದಪ್ಪ ಆಗ್ತಾರೆ. ನಾನು ಬಹಳ ಸಣ್ಣಗಾಗಿದ್ದೀನಿ ಅಲ್ವಾ …’ ಅಂತ ಪ್ರಶ್ನೆ ಮಾಡಿ ನಕ್ಕರು ಐಂದ್ರಿತಾ ರೇ. ಐಂದ್ರಿತಾ ಮೊದಲೇ ತೆಳ್ಳಗಿದ್ದರು. ಈಗ ಅವರು ಇನ್ನಷ್ಟು ಸಪೂರರಾಗಿದ್ದಾರೆ. ಅದಕ್ಕೆ ಕಾರಣ ಅವರು ಇತ್ತೀಚೆಗೆ ನಟನೆಗಿಂಥ ಹೆಚ್ಚಾಗಿ ಅಡ್ವೆಂಚರ್ ಸ್ಪೋರ್ಟ್ಸ್​ನಲ್ಲಿ ತೊಡಗಿಸಿಕೊಂಡಿರುವುದು.

    ಐಂದ್ರಿತಾ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಮೂಲಕ ಒಂದಿಲ್ಲೊಂದು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸೈಕ್ಲಿಂಗ್​ಗೆ ಹೋದಾಗ, ರಾಕ್ ಕ್ಲೈಂಬಿಂಗ್ ಮಾಡುವಾಗ, ಸರ್ಫಿಂಗ್ ಪಾಠಗಳನ್ನು ಕಲಿಯುವಾಗ … ಹೀಗೆ ಸಿನಿಮಾಗಿಂತ ಸಾಹಸ ಕ್ರೀಡೆಗಳ ಕುರಿತಾಗಿಯೇ ಹೆಚ್ಚು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

    ಈ ಕುರಿತು ಮಾತನಾಡುವ ಅವರು, ‘ದಿಗಂತ್ ಸಾಹಸಿ. ನನಗೆ ಸಾಹಸಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ಇರಲಿಲ್ಲ. ಎರಡು ವರ್ಷಗಳ ಹಿಂದೆ ಸೈಕ್ಲಿಂಗ್ ಮಾಡೋದಕ್ಕೆ ಶುರು ಮಾಡಿದೆ. ದಿಗಂತ್ 150ರಿಂದ 200 ಕಿಲೋಮೀಟರ್ ಸೈಕ್ಲಿಂಗ್ ಮಾಡುತ್ತಾನೆ. ನಾನು ಈಗ 50 ಕಿಲೋಮೀಟರ್​ತನಕ ಸೈಕ್ಲಿಂಗ್ ಮಾಡಬಲ್ಲೆ. ಲಾಕ್​ಡೌನ್ ನಂತರ ಸ್ನೇಹಿತರೊಬ್ಬರು ರಾಕ್​ಕ್ಲೈಂಬಿಂಗ್ ಪರಿಚಯಿಸಿದರು. ಆಮೇಲೆ ಸರ್ಫಿಂಗ್​ನಲ್ಲೂ ತೊಡಗಿಸಿಕೊಂಡೆ. ಮುಲ್ಕಿ ಬೀಚ್​ನಲ್ಲಿ ಒಬ್ಬರು ಸರ್ಫಿಂಗ್ ಕ್ಲಬ್ ಶುರು ಮಾಡಿದ್ದಾರೆ.

    ಪ್ರತಿದಿನ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ನಾನು ಇನ್ನಷ್ಟು ಸಣ್ಣಗಾಗಿದ್ದೀನಿ. ಇತ್ತೀಚೆಗೆ ನಟಿಗಿಂತ ನಾನು ಸ್ಪೋರ್ಟ್ಸ್​ವುಮನ್ ಆಗುತ್ತಿದ್ದೀನಿ’ ಎನ್ನುತ್ತಾರೆ. ಹಾಗಂತ, ನಟನೆಯಿಂದ ದೂರವಾಗಿಲ್ಲವಂತೆ ಐಂದ್ರಿತಾ. ಈಗಾಗಲೇ ಅವರು ಅಭಿನಯಿಸಿರುವ ‘ಪ್ರೇಮಂ ಪೂಜ್ಯಂ’ ಮತ್ತು ‘ಗರುಡ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆಯಂತೆ. ಇನ್ನು, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಚಿತ್ರದ ಚಿತ್ರೀಕರಣವನ್ನು ಅವರು ಮುಗಿಸಿದ್ದು, ಈ ವರ್ಷ ಆ ಚಿತ್ರ ಸಹ ಬಿಡುಗಡೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts