ಚುಟು ಚುಟು ಹಾಡಿಗೆ ಕೋಟಿ ಜನರು ಫಿದಾ!

cutu cutu feb 20
Published on

ಬೆಂಗಳೂರು: 2018ರ ಮೇ ತಿಂಗಳಲ್ಲಿ ‘ರ‍್ಯಾಂಬೊ  2’ ಸಿನಿಮಾ ಬಿಡುಗಡೆ ಆಗಿತ್ತು. ಸೂಪರ್ ಹಿಟ್ ಸಿನಿಮಾ ಪಟ್ಟಿಯಲ್ಲೂ ಸ್ಥಾನ ಪಡೆದಿತ್ತು. ಶರಣ್ ಕಾಮಿಡಿ, ಆಶಿಕಾ ಗ್ಲಾಮರ್, ಕಲರ್​ಫುಲ್ ಹಾಡುಗಳು ಚಿತ್ರದ ಅಂದವನ್ನು ಹೆಚ್ಚಿಸಿದ್ದವು.

ಈಗ ಇದೇ ಸಿನಿಮಾ, ಹಾಡಿನ ವಿಚಾರವಾಗಿ ಮತ್ತೆ ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾದ ‘ಚುಟು ಚುಟು ಅನತೈತಿ..’ ಹಾಡು ಇಲ್ಲಿಯವರೆಗೂ 100 ಮಿಲಿಯನ್​ಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಹೀಗೆ ಒಂದು ಕೋಟಿ ವೀಕ್ಷಣೆಯನ್ನು ಕಂಡ ಕನ್ನಡದ ಮೊದಲ ಹಾಡು ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ.

ಇತ್ತೀಚೆಗಷ್ಟೇ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಮತ್ತು ಆನಂದ್ ಈ ಸಾಧನೆ ಪ್ರಯುಕ್ತ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಇಡೀ ತಂಡ ಮತ್ತೊಮ್ಮೆಎದುರಾಗಿ ವಿಶೇಷ ಸ್ಮರಣಿಕೆ ಪಡೆದು ಖುಷಿಯ ಪಾಲುದಾರರಾದರು. ಸಾಹಿತ್ಯ ಬರೆದ ಶಿವು ಬೆರಗಿ, ಗಾಯಕಿ ಶಮಿತಾ ಮಲ್ನಾಡ್, ರವೀಂದ್ರ ಸೊರಗಾವಿ, ಅಟ್ಲಾಂಟ ನಾಗೇಂದ್ರ, ಮೋಹನ್ ಬಿ. ಕೆರೆ, ಪ್ರೊಡಕ್ಷನ್ ಮ್ಯಾನೇಜರ್ ನರಸಿಂಹ, ಕಾಸ್ಟೂ್ಯಮ್ ಡಿಸೈನರ್ ಸೆಚಿನಾ ಹೆಗ್ಗಾರ್, ನೃತ್ಯ ನಿರ್ದೇಶಕ ಭೂಷಣ್, ಛಾಯಾಗ್ರಾಹಕ ಸುಧಾಕರ್, ಎಡಿಟರ್ ಕೆ.ಎಂ. ಪ್ರಕಾಶ್, ನಿರ್ದೇಶಕ ಅನಿಲ್ ಕುಮಾರ್, ನಟ-ನಿರ್ವಪಕ ಚಿಕ್ಕಣ್ಣ, ತರುಣ್ ಸುಧೀರ್, ಶರಣ್, ಆಶಿಕಾ ರಂಗನಾಥ್ ಸೇರಿ ಇನ್ನೂ ಹಲವರಿಗೆ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅತಿಥಿಯಾಗಿ ಆಗಮಿಸಿ ಸ್ಮರಣಿಕೆ ನೀಡಿದರು. ಹಾಡಿಗೆ ಸಿಕ್ಕ ಈ ಯಶಸ್ಸಿನ ಬಗ್ಗೆ ಇಡೀ ತಂಡ ಮತ್ತೊಮ್ಮೆ ಮಾತನಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net