ಇಂದಿರಾ ಗಾಂಧಿ ಪಾತ್ರದಲ್ಲಿ ಫಾತಿಮಾ ಸನಾ ಶೇಖ್​

Fathima
Published on

ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಪಾತ್ರ ಇದುವರೆಗೂ ಹಲವು ಚಿತ್ರಗಳಲ್ಲಿ ಬಂದು ಹೋಗಿದೆ. ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಮ್ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ, ‘ಇಂದು ಸರ್ಕಾರ್’ ಚಿತ್ರದಲ್ಲಿ ಸುಪ್ರಿಯಾ ವಿನೋದ್, ‘ಠಾಕ್ರೆ’ ಚಿತ್ರದಲ್ಲಿ ಆವಂತಿಕಾ ಅಕೇರ್​ಕರ್ ಹಾಗೂ ‘ಪಿಎಂ ನರೇಂದ್ರ ಮೋದಿ’ ಚಿತ್ರದಲ್ಲಿ ಕಿಶೋರಿ ಶಹಾನೆ, ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇಷ್ಟೆಲ್ಲ ಪೀಠಿಕೆ ಯಾಕೆ ಎಂದರೆ, ಈಗ ಮತ್ತೊಬ್ಬ ನಟಿ ಹೊಸ ಚಿತ್ರವೊಂದರಲ್ಲಿ ಇಂದಿರಾ ಗಾಂಧಿ ಅಗಲು ಹೊರಟಿದ್ದಾರೆ. ಈ ಬಾರಿ ಇಂದಿರಾ ಆಗುತ್ತಿರುವುದು ‘ದಂಗಲ್’ ಖ್ಯಾತಿಯ ಫಾತಿಮಾ ಸನಾ ಶೇಖ್. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ ಅವರ ಜೀವನ್ನಾಧರಿಸಿ, ‘ಸ್ಯಾಮ್ ಬಹದ್ದೂರ್’ ಎಂಬ ಚಿತ್ರ ಬಾಲಿವುಡ್​ನಲ್ಲಿ ತಯಾರಾಗುತ್ತಿದೆ. ಸ್ಯಾಮ್ ಬಹದ್ದೂರ್ ಪಾತ್ರವನ್ನು ವಿಕ್ಕಿ ಕೌಶಾಲ್ ಮಾಡುತ್ತಿದ್ದು, ಇಂದಿರಾ ಗಾಂಧಿ ಅವರ ಪಾತ್ರಕ್ಕೆ ಫಾತಿಮಾ ಸನಾ ಶೇಖ್ ಆಯ್ಕೆಯಾಗಿದ್ದಾರೆ. ಈ ಪಾತ್ರ ನಿರ್ವಹಿಸು ತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿರುವ ಫಾತಿಮಾ, ‘ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮಹಿಳೆಯ ಪಾತ್ರವನ್ನು ನಿರ್ವಹಿಸುವುದಕ್ಕೆ ಖುಷಿಯಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net