

ಬೆಂಗಳೂರು: ಪ್ರತಿಯೊಬ್ಬರೂ ಏನಾದರೂ ಒಂದು ಅಂದುಕೊಂಡಿರುತ್ತಾರೆ. ಮಾತ್ರವಲ್ಲ, ಅಂದುಕೊಂಡಿದ್ದು ಇಷ್ಟು ಸಮಯದಲ್ಲಿ ಸಂಭವಿಸಬಹುದು ಎಂಬ ಕನಸನ್ನು ಕಾಣುತ್ತಾರೆ. ಕೆಲವರ ಬದುಕಲ್ಲಿ ಅಂದುಕೊಂಡಂತೆ ನಡೆಯುವುದೇ ಇಲ್ಲ. ಇನ್ನು ಕೆಲವರ ಜೀವನದಲ್ಲಿ ಅಂದುಕೊಂಡಿದ್ದು ಅಂದುಕೊಂಡಿದ್ದಕ್ಕಿಂತಲೂ ಬೇಗ ಸಂಭವಿಸಿಬಿಡುತ್ತದೆ. ಅಂಥದ್ದೊಂದು ವಿದ್ಯಮಾನ ನಟ ಅಲ್ಲು ಅರ್ಜುನ್ ಜೀವನದಲ್ಲಿ ಇಂದು ಸಂಭವಿಸಿದೆ.
ತೆಲುಗು ಚಿತ್ರನಟ ಅಲ್ಲು ಅರ್ಜುನ್ ಹಾಗೂ ಅವರ ಪುತ್ರಿ ಅರ್ಹ ಇಬ್ಬರೂ ಶೂಟಿಂಗ್ ವೇಳೆ ಭೇಟಿಯಾಗಿದ್ದಾರೆ. ಇಬ್ಬರೂ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ನಲ್ಲಿದ್ದು, ಎರಡರ ಚಿತ್ರೀಕರಣವೂ ಒಂದೇ ಸ್ಥಳದಲ್ಲಿ ನಡೆಯುತ್ತಿದ್ದುದರಿಂದ ಕಾಕತಾಳೀಯ ಎಂಬ ರೀತಿಯಲ್ಲಿ ಇಬ್ಬರ ಭೇಟಿ ನಡೆದಿದೆ.
ಇವತ್ತು ನಾನು ಹಾಗೂ ನನ್ನ ಮಗಳು ಇಬ್ಬರೂ ಒಂದೇ ಸ್ಥಳದಲ್ಲಿ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿದ್ದೆವು. ಈ ಸಂದರ್ಭದಲ್ಲಿ ಅವಳ ಸೆಟ್ಗೆ ಹೋಗಿ ನಾನು ಭೇಟಿಯಾದೆ. ಬಹುಶಃ ಇಂಥದ್ದೊಂದು ಭೇಟಿ ಇನ್ನು 15-20 ವರ್ಷಗಳಲ್ಲಿ ಸಂಭವಿಸಬಹುದು ಅಂತ ಅಂದುಕೊಂಡಿದ್ದೆ. ಆದರೆ ಅದು ಅತಿಬೇಗ ಆಗಿಹೋಗಿದೆ. ಪುಷ್ಪ ಮೀಟ್ ಭರತ ಇನ್ ಶಾಕುಂತಲಂ, ಎಂತಹ ಕಾಕತಾಳೀಯ ಎಂದು ಅವರು ಹೇಳಿಕೊಂಡಿದ್ದಾರೆ. ಅಂದಹಾಗೆ ಅಲ್ಲು ಅರ್ಜುನ್ ಪುಷ್ಪ ಚಿತ್ರದಲ್ಲಿ ಹಾಗೂ ಅವರ ಪುತ್ರಿ ಶಾಕುಂತಲಂ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್)