ಬಾಲಿವುಡ್​ನಲ್ಲಿನ ತಾರತಮ್ಯದ ಬಗ್ಗೆ ಮಾತನಾಡಿದ್ದ ಅಭಯ್​ಗೆ, ಫರ್ಹಾನ್​ ಹೇಳಿದ್ದೇನು?

7625-farhan-akhtar-and-abhay-deol
Published on

ಜಿಂದಗಿ ನಾ ಮಿಲೇಗಿ ದುಬಾರಾ ಸಿನಿಮಾದಲ್ಲಿ ಹೃತಿಕ್​ ರೋಷನ್​, ಫರ್ಹಾನ್​ ಅಖ್ತರ್​ ಮತ್ತು ಅಭಯ್​ ಡಿಯೋಲ್​ ಮುಖ್ಯಭೂಮಿಕೆ ನಿಭಾಯಿಸಿದ್ದರು. ಹೀಗಿರುವಾಗಲೇ ಅವಾರ್ಡ್​ ಕಾರ್ಯಕ್ರಮದಲ್ಲಿ ಅಭಯ್​ಗೆ ಮತ್ತು ಫರ್ಹಾನ್​ಗೆ ಪೋಷಕ ನಟರು ಎಂದು ಕರೆಯಲಾಗಿತ್ತು. ಅದೇ ರೀತಿ ಮುಖ್ಯಭೂಮಿಕೆ ಪಟ್ಟ ಹೃತಿಕ್​ ಮತ್ತು ಕತ್ರಿನಾಗೆ ನೀಡಲಾಗಿತ್ತು. ಬಾಲಿವುಡ್​ನಲ್ಲಿ ಇದೆಲ್ಲ ಒಂದು ದೊಡ್ಡ ಲಾಬಿ. ಈ ತಾರತಮ್ಯದ ಬಗ್ಗೆ ಇತ್ತೀಚೆಗಷ್ಟೇ ಅಭಯ್ ಬಹಿರಂಗವಾಗಿ ಮಾತನಾಡಿದ್ದರು. ಇದೀಗ ಅದೇ ಅಭಯ್​ ಮಾತಿಗೆ ಫರ್ಹಾನ್ ಚಾಟಿ ಬೀಸಿದ್ದಾರೆ.

‘ಸಿನಿಮಾ ಕ್ಷೇತ್ರದಲ್ಲಿ ಎಲ್ಲರೂ ಅವರವರ ಅಸ್ತತ್ವ ಕಾಯ್ದುಕೊಳ್ಳುವಿಕೆಗಾಗಿ ರೇಸ್​ನಲ್ಲಿ ಹೋರಾಡುತ್ತಿರುತ್ತಾರೆ. ಆದರೆ, ಅದು ಎಲ್ಲರಿಗೂ ದಕ್ಕುವುದಿಲ್ಲ. ಹಾಗಾಗಿ ನಮ್ಮತನದ ಮೇಲೆ ನಾವು ನಂಬಿಕೆ ಇಡಬೇಕು. ಶಿಸ್ತುಬದ್ಧವಾಗಿ ಕಟ್ಟುನಿಟ್ಟಿನ ಕೆಲಸದ ಮೂಲಕ ನಮ್ಮತನವನ್ನು ತೋರಿಸಬೇಕು. ಈ ಸಿನಿಮಾ ಬಂದ ಮೇಲೆ ಎಷ್ಟು ಮ್ಯಾಗಜೀನ್​ಗಳಿಗೆ ನೀನು ಕವರ್​ ಪೇಜ್​ನಲ್ಲಿ ಕಾಣಿಸಿಕೊಂಡಿದ್ದೀಯಾ, ಪತ್ರಿಕೆ ಮುಖಪುಟದಲ್ಲಿ ಬಂದಿದ್ದೀಯಾ?’ ಎಂದಿದ್ದಾರೆ.

‘ನನಗನಿಸಿದ ಮಟ್ಟಿಗೆ ನೀನು ತಪ್ಪಾದ ವೃತ್ತಿಯನ್ನು ಆಯ್ದುಕೊಂಡಿದ್ದೀಯಾ. ನೀನು ಇಲ್ಲಿರಬಾರದಿತ್ತು. ನೀನು ಇಲ್ಲಿ ನಟ, ನಿರ್ದೇಶಕ, ಸಿಂಗರ್​, ಸಂಗೀತ ನಿರ್ದೇಶಕ ಆಗಲು ಬಂದಿದ್ದೀಯಾ ಅಥವಾ ರಿಯಾಲಿಟಿ ಸ್ಟಾರ್ ಆಗುವ ಉದ್ದೇಶವಾ?’ ಹೀಗೆ ಅಭಯ್​ಗೆ ಒಂದಷ್ಟು ಕಿವಿ ಮಾತು ಹೇಳಿದ್ದಾರೆ.

ಅಂದಹಾಗೆ, ಅಭಯ್​ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡ ಒಂದಷ್ಟು ಸಾಲುಗಳು ಇಲ್ಲಿವೆ. ‘ಬಹುತೇಕ ಎಲ್ಲಾ ಪ್ರಶಸ್ತಿ ಕಾರ್ಯಕ್ರಮಗಳು ನನ್ನನ್ನು ಮತ್ತು ಫರ್ಹಾನ್ ಅವರನ್ನು ಮುಖ್ಯ ಪಾತ್ರಗಳಿಂದ ಕೆಳಗಿಳಿಸಿವೆ. ನಮ್ಮಿಬ್ಬರನ್ನು ‘ಪೋಷಕ ನಟರು’ ಎಂದು ನಾಮಕರಣ ಮಾಡಿವೆ. ಹೃತಿಕ್ ಮತ್ತು ಕತ್ರಿನಾ ಅವರನ್ನು ‘ಪ್ರಮುಖ ಪಾತ್ರದಲ್ಲಿ ನಟರು’ ಎಂದು ನಾಮಿನೇಟ್​ ಮಾಡಲಾಯಿತು. ಹಾಗಾದರೆ, ಚಿತ್ರದಲ್ಲಿ ಆತನ ಸ್ನೇಹಿತರಾದ ಮಾತ್ರಕ್ಕೆ ನಾವೇಕೆ ಪೋಷಕ ನಟರಾಗಬೇಕು? ಇದೆಲ್ಲದರ ಹಿಂದೆ ದೊಡ್ಡ ಲಾಬಿ ನಡೆಯುತ್ತಿದೆ’ ಎಂದು ಸುದೀರ್ಘ ಪತ್ರವೊಂದನ್ನು ಬರೆದುಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net