ಅಪ್ಪು ಫೋಟೋ ಹಿಡಿದು ಜಾಗರಣೆ ಮಾಡಿದ ಅಭಿಮಾನಿಗಳು! ಧರ್ಮಸ್ಥಳದಲ್ಲಿ ಅಪರೂಪದ ದೃಶ್ಯ...

Published on
ಮಂಗಳೂರು: ನಟ ಪುನೀತ್ ರಾಜ್‌ಕುಮಾರ್ ನಿಧನವನ್ನು ಯಾರಿಗೂ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ, ಅಪ್ಪು ಅವರನ್ನು ನೆನಪುಗಳಲ್ಲಿ ಜೀವಂತವಾಗಿಡಲು ಸಾಧ್ಯವಾಗುವು ಎಲ್ಲಾ ಕೆಲಸ, ಪ್ರಯತ್ನಗಳ ಮೂಲಕ ಮಾಡುತ್ತಲೇ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಅಪ್ಪು ಅವರನ್ನು ತುಂಬಾ ಹಚ್ಚಿಕೊಂಡಿರುವ ಅಭಿಮಾನಿ ದೇವರುಗಳು, ಶಬರಿಮಲೆಗೆ ಮತ್ತು ಬೇರೆ ಬೇರೆ ದೇವಸ್ಥಾನಗಳಿಗೆ ಹೋದಾಗ ಅಪ್ಪು ಭಾವಚಿತ್ರವನ್ನು ತೆಗೆದುಕೊಂಡು ಹೋಗಿ ದೇವರ ದರ್ಶನ ಮಾಡಿಸುತ್ತಿರುವು ಕಂಡುಬಂದಿದೆ.
ಬಳಿಕ, ದೇವಸ್ಥಾನಗಳಲ್ಲಿ ಅಪ್ಪು ಫೋಟೋವನ್ನು ಇಟ್ಟು ಪೂಜಿಸಿವುದು ಕಂಡುಬಂದಿದೆ. ಜಾತ್ರೆಗಳಲ್ಲಿ, ಹಬ್ಬದ ಸಂಭ್ರಮಗಳಲ್ಲಿ ಪುನೀತ್ ಅವರ ಫೋಟೋಗಳು ರಾರಾಜಿಸುತ್ತಿದ್ದವು. ಇದೀಗ, ಎಲ್ಲರಿಗೂ ತಿಳಿದಿರುವ ಹಾಗೆ ನೆನ್ನೆ ನಡೆದ ಶಿವರಾತ್ರಿ ಜಾಗರಣೆ ಸಂದರ್ಭದಲ್ಲಿ ಕೂಡಾ ಕರುನಾಡಲ್ಲಿ ಹಲವು ಕಡೆ ಅಪ್ಪು ಫೋಟೋಗಳು ಮಿಂಚುತ್ತಿದ್ದವು. ಹೌದು, ಜಾಗರಣೆಯ ವೇಳೆ ಪುನೀತ್ ಅವರ ಕಟ್ಟಾಭಿಮಾನಿಗಳು ಇಡೀ ರಾತ್ರಿ ಅಪ್ಪು ಫೋಟೋ ಹಿಡಿದು ಕೂತಿರುವುದು ಕಂಡು ಅಲ್ಲಿರುವ ಎಲ್ಲರೂ ತುಂಬಾನೇ ಭಾವುಕರಾಗಿದ್ದಾರೆ.
ಅಂದಹಾಗೆ, ಇಂತಹ ದೃಶ್ಯಗಳು ಹೆಚ್ಚು ಕಂಡುಬಂದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ. ನಿನ್ನೆ ನಡೆದ ಶಿವರಾತ್ರಿ ಭಜನೆ, ಜಾಗರಣೆಯ ವೇಳೆ ಅಪ್ಪು ಅಭಿಮಾನಿಗಳು ಫೋಟೋಗಳು ಹಿಡಿದು ಜಾಗರಣೆಯಲ್ಲಿ ಭಾಗವಹಿಸಿದ್ದರು ಎಂದು ವರದಿಗಳು ಹೇಳುತ್ತಿವೆ. ಶಿವರಾತ್ರಿಯ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೋಟೋ ಹಿಡದು ಅಭಿಮಾನಿಗಳು ಜಾಗರಣೆ ಮಾಡಿದ್ದು ತುಂಬಾನೆ ವಿಶೇಷ ವಾಗಿತ್ತು ಎನ್ನಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net