ತಮನ್ನಾ-ವಿಜಯ್​ ವರ್ಮ ಸಂಬಂಧದ ಬಗ್ಗೆ ನಾಲಿಗೆ ಹರಿಬಿಟ್ಟ ವಿಮರ್ಶಕ: ಅಶ್ಲೀಲ ಮಾತು, ಅಭಿಮಾನಿಗಳ ಆಕ್ರೋಶ

Tamannah
Published on

ಹೈದರಾಬಾದ್​: ಸ್ವಯೋ ಘೋಷಿತ ಸಿನಿಮಾ ವಿಮರ್ಶಕ ದುಬೈ ಮೂಲದ ಉಮೈರ್​ ಸಂಧು, ಸೆಲಿಬ್ರಿಟಿಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೇ ಹೆಚ್ಚು ಕುಖ್ಯಾತಿ ಪಡೆದಿದ್ದಾನೆ. ಕನ್ನಡದ ನಟ ಸುದೀಪ್​ ಹಾಗೂ ಯಶ್​ ಸೇರಿದಂತೆ ವಿವಿಧ ಇಂಡಸ್ಟ್ರಿಯ ನಟ, ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಆಗಾಗ ನೀಡುತ್ತಿರುತ್ತಾನೆ. ಈ ಮೂಲಕ ಅಭಿಮಾನಿಗಳ ಭಾವನೆಗೆ ಧಕ್ಕೆ ತರುವುದು ಉಮೈರ್​ ಸಂಧು ಖಯಾಲಿ ಆಗಿದೆ. ಇದೀಗ ಮಿಲ್ಕಿ ಬ್ಯೂಟಿ ತಮನ್ನಾ ಬಗ್ಗೆ ನಾಲಿಗೆ ಹರಿಬಿಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ತಮನ್ನಾ ಮತ್ತು ಅವರ ಬಾಯ್​ಫ್ರೆಂಡ್ ಎಂದು ಹೇಳಲಾದ ವಿಜಯ್​ ವರ್ಮ ನಟನೆಯ "ಲಸ್ಟ್​ ಸ್ಟೋರಿ" ವೆಬ್​ಸರಣಿಯ ಟ್ರೈಲರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಇನ್ನೇನು ಒಟಿಟಿಗೆ ಲಗ್ಗೆ ಇಡಲಿದೆ. ಈ ಸರಣಿಯಲ್ಲಿ ತಮನ್ನಾ, ವಿಜಯ್​ ವರ್ಮ ಜತೆ ಇಂಟಿಮೇಟ್​ ದೃಶ್ಯಗಳಲ್ಲಿ ಕಾನಿಸಿಕೊಂಡಿದ್ದಾರೆ. ಕೆಲವರು ಈ ಬಗ್ಗೆ ಟೀಕೆ ಸಹ ಮಾಡುತ್ತಿದ್ದಾರೆ. ಇದೀಗ ಉಮೈರ್​ ಸಂಧು ಟ್ವೀಟ್​ ಮೂಲಕ ಅಶ್ಲೀಲವಾಗಿ ಮಾತನಾಡಿದ್ದು, ಭಾರೀ ಚರ್ಚೆಯಾಗಿದೆ.

ತಮನ್ನಾ ಅವರು ತಮ್ಮ ಎಲ್ಲ ಮಿತಿಗಳನ್ನು ಮೀರುತ್ತಿದ್ದಾರೆ. ಒಂದರ ಹಿಂದೆ ಒಂದಂತೆ ಸೆಕ್ಸ್​ ವೆಬ್​ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಯಸ್ಕರ ಸೀರಿಸ್​ ಅವರ ಮೊದಲ ಆದ್ಯತೆ ಆಗಿದೆ. ಅವರ ಬಾಯ್​ಫ್ರೆಂಡ್​ ವಿಜಯ ವರ್ಮ ಹಗಲು ಮತ್ತು ರಾತ್ರಿ ತಮನ್ನಾ ಜೊತೆ ಎಂಜಾಯ್​ ಮಾಡುತ್ತಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನೊಂದು ಟ್ವೀಟ್​ ಮಾಡಿರುವ ಉಮೈರ್​ ಸಂಧು, ತಮನ್ನಾ ಇದೀಗ ಭಾರತದ ಸನ್ನಿ ಲಿಯೋನ್​ ಆಗಿದ್ದಾರೆ. ಅತಿ ಹೆಚ್ಚು ಟ್ರೆಂಡಿಂಗ್​ನಲ್ಲಿರುವ ಬೆತ್ತಲೆ ನಟಿಯಾಗಿದ್ದಾರೆ. 40ನೇ ವಯಸ್ಸಿನಲ್ಲಿ ಎಲ್ಲ ಮಿತಿಗಳನ್ನು ಮೀರಿದ್ದಾರೆ. ಆಂತರಿಕ ಮಾಹಿತಿ ಪ್ರಕಾರ ಕೋವಿಡ್​ ಸಂದರ್ಭದಲ್ಲಿ ತಮನ್ನಾ ದಿವಾಳಿ ಆಗಿದ್ದಾರೆ ಎಂದು ಉಮೈರ್​ ಸಂಧು ಮನಸ್ಸಿಗೆ ಬಂದಂತೆ ಟ್ವೀಟ್​ ಮಾಡಿದ್ದಾರೆ.

ಉಮೈರ್​ ಸಂಧು ಮಾಡಿರುವ ಟ್ವೀಟ್​ ವೈರಲ್​ ಆಗಿದ್ದು, ತಮನ್ನಾ ಅವರ ಅಭಿಮಾನಿಗಳು ಉಮೈರ್​ ಸಂಧು ವಿರುದ್ಧ ಗರಂ ಆಗಿದ್ದು, ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

ಮಹೇಶ್​ ಬಾಬು ವಿರುದ್ಧ ಟ್ವೀಟ್​

ಈ ಹಿಂದೆ ಮಹೇಶ್​ ಬಾಬು ಬಗ್ಗೆ ಮಾತನಾಡಿದ್ದ ಉಮೈರ್​ ಸಂಧು ಮಹೇಶ್​ ಬಾಬು ಅವರ ಪ್ರಕಾರ ವಿದೇಶಿ ಮಹಿಳೆಯರ ಜತೆಗಿನ ಸಂಭೋಗವೇ ಅವರನ್ನು ಯಂಗ್​ ಹಾಗೂ ಸೆಕ್ಸಿಯಾಗಿ ಕಾಣುವಂತೆ ಮಾಡುತ್ತದೆಯಂತೆ ಎಂದಿದ್ದರು.

ಚಿರಂಜೀವಿ ಅಂಕಲ್​ ಎಂದಿದ್ದರು

ಈ ಹಿಂದೆ ಉಮೈರ್​ ಸಂಧು ಅವರು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಗುರಿಯಾಗಿಸಿಕೊಂಡಿದ್ದರು. ಚಿರಂಜೀವಿ ಅವರನ್ನು ಅಂಕಲ್​ ಎಂದು ಸಂಭೋದಿಸಿದ್ದರು. ಚಿರಂಜೀವಿ ಅಂಕಲ್ ಯಂಗ್ ಆಗಿ ಕಾಣುವ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಿ. ನಿಮಗೆ ಈಗ 70 ವರ್ಷ ವಯಸ್ಸಾಗಿದೆ ಎಂದು ನೆನಪಿಸಿಕೊಳ್ಳಿ’ ಎಂದು ಟ್ವೀಟ್ ಮಾಡಿದ್ದರು. ಇದು ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿ, ಚಿರಂಜೀವಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಓರ್ವ ಹೆಣ್ಣುಬಾಕ

ಪವನ್ ಕಲ್ಯಾಣ್ ಬಗ್ಗೆಯೂ ಉಮೈರ್​ ಸಂಧು ಟ್ವೀಟ್ ಮಾಡಿದ್ದರು. ಪವನ್ ಕಲ್ಯಾಣ್ ಓರ್ವ ಹೆಣ್ಣುಬಾಕ. ಅವರು ಈಗಾಗಲೇ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಹೀಗಿದ್ದರೂ ಈಗಾಗಲೇ ಅನೇಕ ಸ್ಟಾರ್ ಹೀರೋಯಿನ್‌ಗಳೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ ಎಂದು ಆರೋಪ ಮಾಡಿದ್ದರು.

ಇತ್ತೀಚೆಗೆ ಉಮೈರ್ ಸಂಧು, ಅನನ್ಯ ಪಾಂಡೆ ಗುರಿಯಾಗಿಸಿ, ಆಕೆ ಸೆಕ್ಸ್​ ವ್ಯಸನಿಯಾಗಿದ್ದಾರೆ ಎಂದು ಹೇಳಿದ್ದರು. ಲೈಗರ್ ಚಿತ್ರದಲ್ಲಿನ ಕೆಟ್ಟ ನಟನೆಗಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಟೀಕೆಗೆ ಒಳಗಾಗಿರುವ ಈ ಚೆಲುವೆ ತನ್ನ ಗೆಳೆಯ ಆದಿತ್ಯ ರಾಯ್ ಕಪೂರ್ ಜೊತೆ ಹಗಲು ರಾತ್ರಿ ಕಳೆಯುತ್ತಿದ್ದಾರೆ ಎಂದಿದ್ದರು. ಉಮೈರ್​ ಸಂಧು ಹೀಗೆ ಸೆಲೆಬ್ರಿಟಿಗಳ ವಿರುದ್ಧ ಏನಾದರೊಂದು ಹೇಳುತ್ತಲೇ ಇರುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net