

ಮುಂಬೈ: ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುವ ‘ಫ್ಯಾಮಿಲಿ ಮ್ಯಾನ್‘ ವೆಬ್ ಸಿರೀಸ್ಗೆ ದೊಡ್ಡ ಮಟ್ಟದ ವೀಕ್ಷಕರಿದ್ದಾರೆ. ಅದು ಈಗಾಗಲೇ ಸಾಬೀತಾಗಿದೆ. ಇನ್ನೇನು ಕೆಲದಿನಗಳಲ್ಲಿ ಅದರ ಎರಡನೇ ಸೀಸನ್ ಬರಲಿದೆ. ಹೀಗಿರುವಾಗಲೇ ಮೂರನೇ ಸೀಸನ್ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಗಾಯಕಿ ಶ್ರೇಯಾ ಘೋಷಾಲ್ ಈಗ ಗಂಡು ಮಗುವಿನ ತಾಯಿ
ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿರುವ ಸೀಸನ್ 2 ಜೂ. 4ರಂದು ಪ್ರಸಾರವಾಗಲು ಸಜ್ಜಾಗಿದೆ. ಇದೀಗ ಅದಕ್ಕೂ ಮೊದಲು ಮೂರನೇ ಸೀಸನ್ ಬಗ್ಗೆ ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿದ್ದು, ಒನ್ ಲೈನ್ ಕಥೆಯೂ ಸಿದ್ಧವಾಗಿದೆಯಂತೆ. ಅಷ್ಟೇ ಅಲ್ಲ ಮೊದಲ ಮತ್ತು ಎರಡನೇ ಸೀಸನ್ಗಿಂತ ದೊಡ್ಡ ಮಟ್ಟದಲ್ಲಿ 3ನೇ ಸೀಸನ್ ಮೂಡಿಬರಲಿದೆಯಂತೆ. ಕೇವಲ ಮೇಕಿಂಗ್ ವಿಚಾರದಲ್ಲಷ್ಟೇ ಅಲ್ಲದೆ, ಹೊಸ ಹೊಸ ಸ್ಟಾರ್ಗಳು ಮೂರನೇ ಸೀಸನ್ ಫ್ಯಾಮಿಲಿ ಮ್ಯಾನ್ನ ಕಳೆ ಹೆಚ್ಚಿಸಲಿದ್ದಾರಂತೆ.
ಇದನ್ನೂ ಓದಿ: ಕಂಗನಾ ಬಾಡಿಗಾರ್ಡ್ ಮೇಲೆ ಅತ್ಯಾಚಾರ ಆರೋಪ
ದಿ ಫ್ಯಾಮಿಲಿ ಮ್ಯಾನ್ನಲ್ಲಿ ಮನೋಜ್ ಬಾಜ್ಪೇಯಿ, ನ್ಯಾಷನಲ್ ಇಂಟಲಿಜೆನ್ಸ್ ಏಜನ್ಸಿಯ ಏಜೆಂಟ್ ಆಗಿ ನಟಿಸಿದ್ದರು. ಈ ಸೀಸನ್ 2ನಲ್ಲೂ ಅವರು ಭಯೋತ್ಪಾದಕರ ವಿರುದ್ಧ ಹೋರಾಡಲಿದ್ದಾರೆ. ಎರಡನೇ ಸೀಸನ್ನಲ್ಲಿ ವಿಶೇಷ ಆಕರ್ಷಣೆ ಎಂದರೆ ಅದು ಟಾಲಿವುಡ್ ನಟಿ ಸಮಂತಾ. ಈ ಬಾರಿ ಅವರು ಸೂಸೈಡ್ ಬಾಂಬರ್ ಆಗಿ ಕಾಣಿಸಿಕೊಂಡಿದ್ದು, ಅವರನ್ನು ತಡೆಯುವುದಕ್ಕೆ ಮನೋಜ್ ಬಾಜ್ಪೇಯಿ ಏನೆಲ್ಲಾ ಮಾಡುತ್ತಾರೆ ಎಂಬುದು ಈ ಸೀಸನ್ನ ಹೈಲೈಟ್ ಆಗಲಿದೆ. -ಏಜೆನ್ಸೀಸ್