ನಟ ವಿನೋದ್​ರಾಜ್ ಹೆಸರಲ್ಲಿ ನಕಲಿ ಖಾತೆ; ಅಶ್ಲೀಲ ಫೋಟೋ ಅಪ್​ಲೋಡ್​

Vinod raj
Published on

ಬೆಂಗಳೂರು: ಕಿಡಿಗೇಡಿಗಳು ಫೇಸ್​ಬುಕ್​ನಲ್ಲಿ ನಟ ವಿನೋದ್​ರಾಜ್ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಅಶ್ಲೀಲ ಫೋಟೋಗಳನ್ನು ಅಪ್​ಲೋಡ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ವಿನೋದ್​ರಾಜ್ ದೂರು ನೀಡಿದ್ದು, ಉತ್ತರ ವಿಭಾಗದ ಸೈಬರ್​ಕ್ರೖೆಂ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣದ ದಾಖಲಿಸಿದ್ದಾರೆ.

ಅಪರಿಚಿತರು ಉದ್ದೇಶಪೂರ್ವಕವಾಗಿ ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ಅದರಲ್ಲಿ ಪ್ರತಿದಿನ ಅಸಭ್ಯ ಬರಹಗಳಿರುವ ಅಶ್ಲೀಲ ಫೋಟೋಗಳನ್ನು ಅಪ್​ಲೋಡ್ ಮಾಡುತ್ತಿದ್ದಾರೆ. ತಪ್ಪಿತಸ್ಥರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ವಿನೋದ್​ರಾಜ್ ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net