ನೋಡಲು ಥೇಟ್​ ಶಾರುಖ್​ರಂತೆ ಕಾಣುವ ಕಾಶ್ಮೀರಿ ಹುಡುಗನ ಫೋಟೋ ಹಿಂದಿನ ಅಸಲಿಯತ್ತೇ ಬೇರೆ!

Sharukh
Published on

ನವದೆಹಲಿ: ನೋಡಲು ಬಾಲಿವುಡ್​ ಬಾದ್​ಷಾ ಶಾರುಖ್ ಖಾನ್ ತದ್ರೂಪಿಯಂತಿರುವ ಹುಡುಗನೊಬ್ಬನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾಶ್ಮೀರದ ಹುಡುಗ ಶಾರುಖ್​ನಂತೆಯೇ ಕಾಣುತ್ತಿದ್ದಾರೆಂದು ಫೋಟೋ ಕುರಿತು ಹರಿಬಿಡಲಾಗಿದೆ.

ಅನೇಕ ಫೇಸ್​ಬುಕ್​ ಬಳಕೆದಾರರು ಫೋಟೋವನ್ನು ಪೋಸ್ಟ್​ ಮಾಡಿಕೊಂಡಿದ್ದಾರೆ. ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ರಂತಿರುವ ಕಾಶ್ಮೀರ ಹುಡುಗನ ಫೋಟೋ ಜಾಲತಾಣದಲ್ಲಿ ಓಡಾಡುತ್ತಿದೆ ಎಂದು ನೆಟ್ಟಿಗರು ಅಡಿಬರಹ ನೀಡಿದ್ದು, ಇದೇ ಆಧಾರದ ಮೇಲೆ ಕೆಲವು ವೆಬ್​ಸೈಟ್​ಗಳು ಸುದ್ದಿಯನ್ನೂ ಮಾಡಿವೆ.

ಆದರೆ, ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಕ್ಟ್​ಚೆಕ್​ನಲ್ಲಿ ಫೋಟೋ ಕುರಿತಾದ ಅಸಲಿಯತ್ತು ಬಯಲಾಗಿದೆ. ಶಾರುಖ್​ ಖಾನ್​ರಂತೆ ಕಾಣುವ ಫೋಟೋ ಕಾಶ್ಮೀರದ ಹುಡುಗನಲ್ಲ. ಬದಲಾಗಿ ಫೇಸ್​ಆ್ಯಪ್​ ಮೂಲಕ ಶಾರುಖ್​ ಖಾನ್​ ಫೋಟೋವನ್ನು ಎಡಿಟ್​ ಮಾಡಿ ಹರಿಬಿಡಲಾಗಿದೆ.

ವೈರಲ್​ ಫೋಟೋ ಪೋಸ್ಟ್​ ಮಾಡಿದ್ದ ಅಬಿದ್​ ಮಿರ್​ ಮಗಾಮಿಯನ್ನು ಸಹ ಇಂಡಿಯಾ ಟುಡೆ ಫ್ಯಾಕ್ಟ್​ಚೆಕ್​ ತಂಡ ಸಂಪರ್ಕಿಸಿದೆ. ಮಗಾಮಿ ಅವರ ಟ್ವಿಟರ್​ ಬಯೋ ಪ್ರಕಾರ ಅತ ಓರ್ವ ಕಾಶ್ಮೀರಿ ಸಾಮಾಜಿಕ ಕಾರ್ಯಕರ್ತ ಮತ್ತು ಸ್ಥಳೀಯ ಕಾಂಗ್ರೆಸ್​ ನಾಯಕನೂ ಹೌದು. ಆತ ಹೇಳುವ ಪ್ರಕಾರ ವೈರಲ್​ ಫೋಸ್ಟ್​ ಬಗ್ಗೆ ಯಾವುದೇ ಐಡಿಯಾ ಇಲ್ಲವಂತೆ. ಆದರೆ, ಜಾಲತಾಣದಲ್ಲಿ ಹರಿದಾಡಿದ್ದರಿಂದ ನಾನು ಪೋಸ್ಟ್​ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಕೂಡ ಶಾರುಖ್​ರಂತೆ ಕಾಣುವ ಕಾಶ್ಮೀರಿ ಹುಡುಗನನ್ನು ಹುಡುಕಲು ಪ್ರಯತ್ನಿಸಿದ್ದೇನೆ. ಆದರೆ, ಈವರೆಗೂ ಆತ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ಅನೇಕ ಜಾಲತಾಣಿಗರು ಸಹ ಫೋಟೋ ಕುರಿತು ಸಂಶಯ ವ್ಯಕ್ತಪಡಿಸಿದ್ದು, ಫೇಸ್​ಆ್ಯಪ್​ ಮೂಲಕ ಶಾರುಖ್​ ಖಾನ್​ ಫೋಟೋವನ್ನು ಎಡಿಟ್​ ಮಾಡಿದಾಗ ಸದ್ಯ ಹರಿದಾಡುತ್ತಿರುವ ಫೋಟೋ ಮಾದರಿಯಲ್ಲೇ ಎಡಿಟೆಡ್​ ಫೋಟೋ ಇದೆ. ಹೀಗಾಗಿ ಸದ್ಯ ಹರಿದಾಡುತ್ತಿರುವ ಫೋಟೋ ಶಾರುಖ್​ರಂತಿರುವ ಕಾಶ್ಮೀರಿ ಹುಡುಗನದ್ದಲ್ಲ. ಅದು ಫೇಸ್​ ಆ್ಯಪ್​ ಮೂಲಕ ಎಡಿಟ್​ ಮಾಡಲಾದ ಶಾರುಖ್​ ಎಂಬುದು ಬಯಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net