ಹಸಿದ ಸಿಂಹಗಳಂತೆ ನಮ್ಮ ಸುತ್ತಲೂ ಸುತ್ತುತ್ತಿದ್ರು... ಬಾಲಿವುಡ್​ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟಿ ಕುನಿಕಾ! Kunika Sadanand

Kunika Sadanand
Published on

Kunika Sadanand : ಬಾಲಿವುಡ್ ನಟಿ, ಪಾಪ್ ಗಾಯಕಿ ಹಾಗೂ ಉದ್ಯಮಿ ಎಂದೇ ಹೆಸರುವಾಸಿಯಾದ ಕುನಿಕಾ ಸದಾನಂದ್, ಭಾರತೀಯ ಸಿನಿಮಾ ರಂಗದಲ್ಲಿ ತಮ್ಮ ವೈವಿಧ್ಯಮಯ ಪಾತ್ರಗಳಿಂದಲೇ ಛಾಪು ಮೂಡಿಸಿದ್ದಾರೆ. ಸಿನಿಮಾಗಳಿಗಾಗಿ ಮುಂಬೈಗೆ ಸ್ಥಳಾಂತರವಾಗುವ ಮುನ್ನ ಕುನಿಕಾ ಅವರ ನಟನಾ ವೃತ್ತಿಜೀವನ ದೆಹಲಿಯಿಂದಲೇ ಪ್ರಾರಂಭವಾಯಿತು. ಅಲ್ಲಿ ಅವರು ಹಲವಾರು ಟಿವಿ ಸರಣಿಗಳಲ್ಲಿ ಕಾಣಿಸಿಕೊಂಡರು.

ಟಿವಿ ಸರಣಿಯಲ್ಲಿ ಅದ್ಭುತ ಪಾತ್ರಗಳೊಂದಿಗೆ ಗಮನ ಸೆಳೆದ ಕುನಿನಾ, ನಂತರದಲ್ಲಿ ಸಿನಿಮಾ ತಾರೆಯಾದರು. ಸುಮಾರು 125 ಚಿತ್ರಗಳಲ್ಲಿ ನಟಿಸಿದ್ದಾರೆ. ಗುಮ್ರಾ ಮತ್ತು ಬೇಟಾದಂತಹ ಚಿತ್ರಗಳಲ್ಲಿ ಅವರು ಖಳನಾಯಕಿಯಾಗಿಯೂ ಪ್ರಭಾವ ಬೀರಿದ್ದಾರೆ. ಚಲನಚಿತ್ರ ಯಶಸ್ಸಿನ ಜೊತೆಗೆ, ತಮ್ಮ ಖಾಸಗಿ ಆಲ್ಬಮ್‌ಗಳ ಮೂಲಕ ಗಾಯಕಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ಕುನಿಕಾ ಅವರು ಹಲವಾರು ಯಶಸ್ವಿ ಕಂಪನಿಗಳ ಸ್ಥಾಪಕಿ ಮತ್ತು ಸಾಮಾಜಿಕ ಕಾರ್ಯಕರ್ತೆಯೂ ಹೌದು.

ಮುಂಬೈನ ಗೋರೆಗಾಂವ್ ಉಪನಗರಗಳಲ್ಲಿ, ವೈಟ್ ಇಟಾಲಿಯನ್ ಕೆಫೆ, ಜಿಂಗ್‌ಕ್ಯಾಫ್ ಮೆಜೆಸ್ಟಿಕಾ ದಿ ರಾಯಲ್ ಬ್ಯಾಂಕ್ವೆಟ್ ಹಾಲ್ ಮತ್ತು ಎಕ್ಸೇಲ್ ಸ್ಪಾವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗಿನಿಂದಲೂ ಕುನಿಕಾ ಭಾರಿ ಸುದ್ದಿಯಲ್ಲಿದ್ದಾರೆ. ಆ ಕಾರ್ಯಕ್ರಮದಲ್ಲಿ, ಗಾಯಕ ಕುಮಾರ್ ಸಾನು ಅವರೊಂದಿಗಿನ ತಮ್ಮ ಪ್ರೇಮ ಸಂಬಂಧದ ಬಗ್ಗೆ ಕುನಿಕಾ ಮುಕ್ತವಾಗಿ ಹೇಳಿಕೊಂಡರು. ಅಲ್ಲದೆ, ಹಲವಾರು ನಾಯಕಿಯರ ಜತೆ ಬಾಲಿವುಡ್ ನಾಯಕ ಅಕ್ಷಯ್ ಕುಮಾರ್ ಹೊಂದಿದ್ದ ಸಂಬಂಧಗಳ ಬಗ್ಗೆಯೂ ಮಾತನಾಡಿದರು. ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್ ಬಗ್ಗೆಯೂ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಇದಿಷ್ಟೇ ಅಲ್ಲದೆ, ಲೈಟ್‌ಮೆನ್ ಸೇರಿದಂತೆ ಟೆಕ್ನಿಷಿಯನ್​ಗಳು ನಾಯಕಿಯರನ್ನು ಸೆಳೆಯಲು ಹೇಗೆ ಪ್ರಯತ್ನಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದರು. ಹೀಗಾಗಿ ಅವರ ಸಂದರ್ಶನದ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾಯಕಿಯರ ಜತೆ ಅಕ್ಷಯ್​ ಕುಮಾರ್​ ಸಂಬಂಧಗಳ ಬಗ್ಗೆ ಮಾತನಾಡಿದ ಕುನಿಕಾ, ಅಕ್ಷಯ್​ ತುಂಬಾ ಸುಂದರವಾಗಿದ್ದಾರೆ ಮತ್ತು ನನಗಿಂತ ಒಂದು ವರ್ಷ ಚಿಕ್ಕವರಾಗಿದ್ದರೂ, ಅವರಿನ್ನೂ ಫಿಟ್ ಆಗಿದ್ದಾರೆ. ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್ ಮಟ್ಟಗಳು ಸಕ್ರಿಯವಾಗಿದ್ದಾಗ ಪುರುಷರು ಉತ್ತಮ ಫಿಟ್ನೆಸ್ ಹೊಂದಿರುವುದು ಸಾಮಾನ್ಯ ಎಂದು ಹೇಳಿದರು. ಅಂದರೆ, ಮಹಿಳೆಯರು ಫಿಟ್ನೆಸ್‌ಗೆ ಆಕರ್ಷಿತರಾಗುತ್ತಾರೆ. ಅಂತಹ ಸಂಬಂಧಗಳು ಫಿಟ್​ನೆಸ್​ನಿಂದಲೇ ಉದ್ಭವಿಸುತ್ತವೆ ಎಂದರು.

ಇದೇ ಸಮಯದಲ್ಲಿ ತಮ್ಮ ಪ್ರೇಮ ಸಂಬಂಧದ ಬಗ್ಗೆ ಕುನಿಕಾ ಮಾತನಾಡಿದರು. ತಮ್ಮ ನಟನಾ ವೃತ್ತಿಜೀವನದ ಆರಂಭದಲ್ಲಿ ಬಾಲಿವುಡ್‌ನ ಟಾಪ್ ಗಾಯಕ ಕುಮಾರ್ ಸಾನು ಅವರನ್ನು ಭೇಟಿಯಾದರಂತೆ, ಮೊದಲ ನೋಟದಲ್ಲೇ ಅವರನ್ನು ಇಷ್ಟಪಟ್ಟಿದ್ದರಿಂದ ಅದು ತ್ವರಿತ ಆಕರ್ಷಣೆಯಂತೆ ಭಾಸವಾಯಿತು. ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕುನಿಕಾ ಊಟಿಯಲ್ಲಿದ್ದಾಗ, ಕುಮಾರ್ ಸಾನು ಅದೇ ಸಮಯದಲ್ಲಿ ತನ್ನ ಸಹೋದರಿ ಮತ್ತು ಸೋದರಳಿಯನೊಂದಿಗೆ ರಜೆಯಲ್ಲಿದ್ದರು ಮತ್ತು ಅವರಿಬ್ಬರ ನಡುವೆ ಬಲವಾದ ಬಂಧವು ರೂಪುಗೊಂಡಿತು ಎಂದರು.

ಬಾಲಿವುಡ್​ ಚಿತ್ರೋದ್ಯಮದ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಹಿಂದೆ, ಗೌರವಾನ್ವಿತ ಕುಟುಂಬಗಳ ಮಹಿಳೆಯರು ಚಲನಚಿತ್ರಗಳಲ್ಲಿ ವೃತ್ತಿಜೀವನವನ್ನು ಅಪರೂಪವಾಗಿ ಆರಿಸಿಕೊಳ್ಳುತ್ತಿದ್ದರು. ಅದಕ್ಕೆ ಪರಿಸ್ಥಿತಿಗಳು ಸೂಕ್ತವಾಗಿರಲಿಲ್ಲ. ಲೈಂಟಿಂಗ್​ ತಂತ್ರಜ್ಞರು ಸಹ ನಟಿಯರ ಬಗ್ಗೆ ಅನುಚಿತ ಆಲೋಚನೆಗಳನ್ನು ಹೊಂದಿದ್ದರು. ತಮ್ಮ ಕೈಯಲ್ಲಿ ಸುಗಂಧ ದ್ರವ್ಯವನ್ನು ಹಚ್ಚಿಕೊಂಡು ಬರುತ್ತಿದ್ದರು ಮತ್ತು ನಾಯಕಿಯ ಕಡೆಗೆ ಅದನ್ನು ಹರಡುತ್ತಿದ್ದರು ಮತ್ತು ನಾಯಕಿಯರ ಕಿವಿಯಲ್ಲಿ ಅಶ್ಲೀಲವಾಗಿ ಪಿಸುಗುಟ್ಟುತ್ತಿದ್ದರು. ಈ ಸಂದರ್ಭದಲ್ಲಿ, ಜಾಗರೂಕರಾಗಿರುವುದು ಬಹಳ ಮುಖ್ಯ. ಅಂತಹ ಸಂದರ್ಭಗಳಿಂದ ತನ್ನನ್ನು ತಾನು ಹೇಗೆ ರಕ್ಷಿಸಿಕೊಂಡೆ ಎಂಬುದನ್ನು ಕುನಿಕಾ ವಿವರಿಸಿದರು.

ಶೂಟಿಂಗ್ ಮುಗಿದ ನಂತರ, ಹಸಿದ ಸಿಂಹಗಳು ಹೊರಬಂದು ನಾಯಕಿಯರ ಸುತ್ತಲೂ ಸುತ್ತಾಡುತ್ತಿದ್ದರು. ಕೆಲವರು ತುಂಬಾ ವಿನಮ್ರವಾಗಿ ಕರೆ ಮಾಡಿ, ಸಂಜೆ ಭೇಟಿಯಾಗುತ್ತೀರಾ ಎಂದು ಕೇಳುತ್ತಿದ್ದರು ಆದರೆ, ಇನ್ನು ಕೆಲವರು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದರು. ಅಂತಹ ಸಮಯದಲ್ಲಿ ತನ್ನ ಕೇಶ ವಿನ್ಯಾಸಕಿ ತನ್ನನ್ನು ರಕ್ಷಿಸಲು ಆಗಾಗ್ಗ ತನ್ನ ಕೋಣೆಯಲ್ಲಿಯೇ ಇರುತ್ತಿದ್ದರು. ತನ್ನ ಕೇಶ ವಿನ್ಯಾಸಕಿ ತಾನು ಲಭ್ಯವಿಲ್ಲ ಅಥವಾ ಊಟಕ್ಕೆ ಹೊರಗೆ ಹೋಗಿದ್ದೇನೆ ಎಂದು ಹೇಳಿ ಅವರನ್ನು ಜಾಣತನದಿಂದ ತಪ್ಪಿಸುತ್ತಿದ್ದರು ಎಂದು ಕುನಿಕಾ ನೆನಪಿಸಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net