ಕೂದಲು ಹರಾಜಿನಿಂದ ಟಿಟಿಡಿಗೆ ಬರುವ 1 ವರ್ಷದ ಆದಾಯ ಕೇಳಿದ್ರೆ ನೀವು ನಿಜಕ್ಕೂ ಬೆರಗಾಗ್ತೀರಿ! TTD Hair Auction Revenue

TTD Hair Auction Revenue
Published on

TTD Hair Auction Revenue : ತಿರುಪತಿಯ ತಿರುಮಲವು ಅಸಂಖ್ಯಾತ ಹಿಂದುಗಳ ಪವಿತ್ರ ಕ್ಷೇತ್ರ. ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತಿರುಮಲ ತಿಮ್ಮಪ್ಪನ ಭಕ್ತರಿದ್ದಾರೆ. ವೆಂಕಟೇಶ್ವರ ದೇವರ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಜನರು ತಿರುಮಲಕ್ಕೆ ಬರುತ್ತಾರೆ. ಭಗವಂತನನ್ನು ನೋಡಿ ಆತನ ಕೃಪೆಗೆ ಪಾತ್ರರಾಗುತ್ತಾರೆ. ಅಷ್ಟೇ ಅಲ್ಲ, ತಮ್ಮ ಜನ್ಮ ಸಾರ್ಥಕವಾಯಿತು ಅಂತ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ.

ತಿರುಮಲವು ಯಾವಾಗಲೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಹೀಗಾಗಿ ತಿರುಮಲ ಶ್ರೀನಿವಾಸನಿಗೆ ಬರುವ ಹುಂಡಿ ಆದಾಯದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಭಕ್ತರು ಹುಂಡಿಯಲ್ಲಿ ಹಾಕುವ ಕಾಣಿಕೆಗಳಿಂದ ಕೋಟಿ ಕೋಟಿ ಆದಾಯ ಬರುತ್ತದೆ. ಪ್ರತಿದಿನ ಬರುವ ಆದಾಯವೇ ಕೋಟಿಯನ್ನು ಮೀರುತ್ತದೆ. ಭಕ್ತರು ಹುಂಡಿಯಲ್ಲಿ ಹಾಕುವ ಕಾಣಿಕೆಗಳಿಂದ ಮಾತ್ರವಲ್ಲ, ಭಕ್ತಿಯಿಂದ ಅರ್ಪಿಸುವ ಕಾಣಿಕೆಗಳ ಮೂಲಕವೂ ಆದಾಯ ಹರಿದು ಬರುತ್ತಿದೆ. ಕೂದಲು ಮಾರಾಟದಿಂದಲೇ ಟಿಟಿಡಿ ( ತಿರುಮಲ ತಿರುಪತಿ ದೇವಸ್ಥಾನಂ) ಪ್ರತಿ ವರ್ಷ ಕೋಟಿಗಟ್ಟಲೆ ಆದಾಯ ಗಳಿಸುತ್ತಿದೆ.

ತಿರುಮಲ ಶ್ರೀವಾರಿಗೆ ಭೇಟಿ ನೀಡುವ ಭಕ್ತರು ಖಂಡಿತವಾಗಿಯೂ ತಮ್ಮ ಕೇಶವನ್ನು ಅರ್ಪಿಸುತ್ತಾರೆ. ಇದರ ಮೂಲಕವೂ ಟಿಟಿಡಿಗೆ ಭಾರಿ ಆದಾಯ ಬರುತ್ತದೆ. ಪ್ರತಿ ವರ್ಷ ನಡೆಯುವ ಕೂದಲು ಹರಾಜಿನಿಂದ ಟಿಟಿಡಿಗೆ ಎಷ್ಟು ಕೋಟಿ ಆದಾಯ ಬರುತ್ತಿದೆ ಗೊತ್ತಾ? ಈ ಬಗ್ಗೆ ಗೊತ್ತಾದ್ರೆ ನೀವು ನಿಜವಾಗಿಯೂ ಆಶ್ಚರ್ಯಪಡುತ್ತೀರಿ. ಕೂದಲು ಹರಾಜಿನ ಮೂಲಕವೇ ಟಿಟಿಡಿಗೆ ವರ್ಷಕ್ಕೆ 176.50 ಕೋಟಿ ರೂ. ಆದಾಯ ಬರುತ್ತದೆ.

ತಿರುಮಲಕ್ಕೆ ಪ್ರತಿದಿನ ಬರುವ ಸಾವಿರಾರು ಭಕ್ತರು ಕೂದಲನ್ನು ಅರ್ಪಿಸುತ್ತಾರೆ. ಅವರು ತಮ್ಮ ತಲೆಯನ್ನು ಬೋಳಿಸಿಕೊಂಡು ಭಗವಂತನಿಗೆ ಹರಕೆ ತೀರಿಸುತ್ತಾರೆ. ಟಿಟಿಡಿ ಈ ಕೂದಲನ್ನು ಸ್ವಚ್ಛಗೊಳಿಸಿ ಹರಾಜಿನಲ್ಲಿ ಇಡುತ್ತದೆ. ಈ ಹರಾಜಿನಿಂದ ಟಿಟಿಡಿಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಈ ಒಂದು ವ್ಯವಹಾರವು ಜಗತ್ತಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. ಇದರಲ್ಲಿ ಭಾರತವೂ ದೊಡ್ಡ ಪಾತ್ರವನ್ನು ವಹಿಸುತ್ತಿದೆ ಎನ್ನಬಹುದು. ಈ ಕೂದಲನ್ನು ಪ್ರಪಂಚದಾದ್ಯಂತ ಸೌಂದರ್ಯ ಮಾರುಕಟ್ಟೆಯಲ್ಲಿ ಬಳಸಲಾಗುತ್ತದೆ. ಇದನ್ನು ಭಾರತದಿಂದ ಇತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಟಿಟಿಡಿ ಕೂದಲನ್ನು ಶ್ರೇಣಿಗಳಾಗಿ ವಿಂಗಡಿಸಿ ಹರಾಜು ಮಾಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net