ಭಾರತವನ್ನು, ಭಾರತದ ಮಹಿಳೆಯರನ್ನು ಹಾಡಿ ಹೊಗಳಿದ 'ಹ್ಯಾರಿ ಪಾಟರ್' ನಟಿ ಎಮ್ಮಾ ವ್ಯಾಟ್ಸನ್! ಕಾರಣ?

Published on
ಚಿಪ್ಕೋ ಚಳುವಳಿ ಅಥವಾ ಚಿಪ್ಕೋ ಆಂದೋಲನ ನಮ್ಮ ಭಾರತದಲ್ಲಿ ಮೊದಲ ಬಾರಿಗೆ 1970 ರಲ್ಲಿ ಪ್ರಾರಂಭವಾಯಿತು. ಈ ಆಂದೋಲನವನ್ನು ನಮ್ಮ ದೇಶದಲ್ಲಿ ಮರಗಳು ಮತ್ತು ಕಾಡುಗಳನ್ನು ರಕ್ಷಿಸಲು ಹಳ್ಳಿ ಜನರು ಪ್ರಾರಂಭಿಸಿದರು. ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶ ಹಾಗೂ ಮರ ಕಡಿಯಲು ಸರ್ಕಾರ ಆದೇಶ ನೀಡಿದಾಗ, ಆಗ ಹಲವರಲ್ಲಿ ಆತಂಕ ಮತ್ತು ಕೋಪವಿತ್ತು. ಇಂತಹ ಸಮಯದಲ್ಲಿ ಮರ ಕಡಿಯಲು ಯಾರು ಬಂದರು ಹಳ್ಳಿ ಜನರು ಮರಗಳನ್ನು ತಬ್ಬಿಕೊಂಡು ರಕ್ಷಿಸಲು ಮುಂದಾಗಿದ್ದರು. ಈ ಆಂದೋಲನ ಮರಗಳನ್ನು ರಕ್ಷಿಸಿಕೊಳ್ಳಲು ಎಲ್ಲರಿಗೂ ಒಂದು ಸ್ಪೂರ್ತಿಯಾಗಿದೆ. ಇಂದು, ಒಬ್ಬರು ಖ್ಯಾತ ಹಾಲಿವುಡ್ ನಟಿ ಸಹ ಇದೇ ಚಿಪ್ಕೋ ಚಳುವಳಿಯನ್ನು ಹಾಡಿ ಹೊಗಳಿದ್ದಾರೆ.
ಹೌದು, 'ಹ್ಯಾರಿ ಪಾಟರ್' ಸಿನಿಮಾದ ನಟಿ ಎಮ್ಮಾ ವ್ಯಾಟ್ಸನ್ ಅವರು ನಮ್ಮ ಭಾರತದ ಚಿಪ್ಕೊ ಚಳುವಳಿಯಲ್ಲಿ ಮಹಿಳೆಯರು ಮರಕ್ಕೆ ಅಂಟಿಕೊಂಡಿರುವ ಫೋಟೋವೊಂದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ನಟಿ ಎಮ್ಮಾ, ''ನಮ್ಮ ಕಾಡುಗಳು ಮತ್ತು ಮರಗಳನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು!'', ಎಂದು ಬರದುಕೊಂಡಿದ್ದಾರೆ. ''ಇಲ್ಲಿ ಕಾಣಿಸುತ್ತಿರುವ ಮಹಿಳೆಯರು ಚಿಪ್ಕೋ ಚಳುವಳಿಯ ಭಾಗವಾಗಿದ್ದರು. 1970ರ ದಶಕದಲ್ಲಿ ಭಾರತದಲ್ಲಿ ಹಳ್ಳಿಯವರು, ವಿಶೇಷವಾಗಿ ಮಹಿಳೆಯರು ಸಾಮಾಜಿಕ ಮತ್ತು ಪರಿಸರ ಕಾಳಜಿಯನ್ನು ಹೊಂದಿದ್ದರು. ಇನ್ನು, ಈ ಸಂದರ್ಭದಲ್ಲಿ ಸರ್ಕಾರಿ ಆದೇಶದಿಂದ ಮರಗಳನ್ನು ರಕ್ಷಿಸುತ್ತಿರುವುದು ಕಂಡುಬಂದಿದೆ. ಚಿಪ್ಕೊ ಎಂಬ ಹಿಂದಿ ಪದದ ಅರ್ಥ ತಬ್ಬಿಕೊಳ್ಳುವುದು ಅಥವಾ ಅಂಟಿಕೊಂಡಿರುವುದು ಅಂತ'', ಎಂದು ತಮ್ಮ ಫೋಟೋಗೆ ಕ್ಯಾಪ್ಷನ್ ಕೂಡ ನೀಡಿದ್ದಾರೆ.
ಚಿಪ್ಕೋ ಚಳುವಳಿಯು 1970 ರಿಂದ ಪ್ರಪಂಚದಾದ್ಯಂತದ ಪರಿಸರ ಕಾರ್ಯಕರ್ತರನ್ನು ತುಂಬಾನೆ ಪ್ರೇರೇಪಿಸಿದೆ. ಇದಕ್ಕೆ, ಉತ್ತರ ಇಷ್ಟು ವರ್ಷಗಳ ನಂತರವೂ ಹಾಲಿವುಡ್ ನಟಿ ಒಬ್ಬರು ಚಿಪ್ಕೋ ಚಳುವಳಿಯನ್ನು ನೆನಪಿಸಿಕೊಂಡಿರುವುದು ಎಂದೇ ಹೇಳಬೇಕು. ಸದ್ಯ, ನಟಿ ತಮ್ಮ ಸಾಮಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ಇದೀಗ ಎಲ್ಲಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿಯ ಈ ಪೋಸ್ಟ್ ಮೇಲೆ ಬರೀ ಕಾಮೆಂಟ್​ಗಳೆ 7000ಕ್ಕೂ ಹೆಚ್ಚು ಇರುವುದು ಗಮರ್ನಾಹ ಮತ್ತು 20 ಲಕ್ಷಕ್ಕೂ ಹೆಚ್ಚು ಲೈಕ್ಸ್​​ಗಳು ಸಹ ಈ ಪೋಸ್ಟ್ ಗಿಟ್ಟಿಸಿಕೊಂಡಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net