ಇಂಟರ್ವೆಲ್​​ ವೇಳೆಗೆ ಸಾಕೆನಿಸುವ 'EK DIN; ನ್ಯಾಚ್ಯುರಲ್​ ಬ್ಯೂಟಿ ನಟನೆಯ ಸಿನಿಮಾ 1 ದಿನದಲ್ಲಿ ಗಳಿಸಿದ್ದು ಇಷ್ಟೇನಾ?

Ek Din
Ek Din
Published on

ಪ್ರಮುಖ ಮುಖ್ಯಾಂಶಗಳು

  • ಏಕ್​ ದಿನ್​ ಸಿನಿಮಾಗೆ ನೀರಸ ಪ್ರತಿಕ್ರಿಯೆ ಒಂದೇ ದಿನದಲ್ಲಿ ಕೇವಲ 1.5 ಕೋಟಿ ಗಳಿಕೆ
  • ಮಿಸ್ಟರ್​ ಪರ್ಫೆಕ್ಟ್​ ಸಿನಿಮಾ ನಿರ್ಮಾಣದಲ್ಲಿ ಎಡವಿದ್ರಾ ಎಂದು ಅಭಿಮಾನಿಗಳಿಂದ ಪ್ರಶ್ನೆ
  • ತಾಳ್ಮೆಯಿಂದ ಸಿನಿಮಾ ಪೂರ್ತಿ ಕಾದು ನೋಡುವಂತೆ ಎಲ್ಲಿಯೂ ಯಾವ ದೃಶ್ಯವೂ ಇಲ್ಲ ಎನ್ನುತ್ತಿರುವ ಪ್ರೇಕ್ಷಕರು
Ek Din:
ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​ ಅಮೀರ್​ ಖಾನ್​ ಅವರು ನಿರ್ದೇಶನ, ನಟನೆ, ನಿರ್ಮಾಣಕ್ಕೂ ಸೈ ಎನಿಸಿಕೊಂಡಿದ್ದರು. ಆದರೆ, ಏಕ್​ ದಿನ್​ ಸಿನಿಮಾ ನಿರ್ಮಾಣದಲ್ಲಿ ಏಕೆ ಎಡವಿದ್ರು ಎನ್ನುವುದು ಅವರ ಪ್ಯಾನ್ಸ್​ಗಳಿಂದ ಕೇಳಿ ಬರುತ್ತಿರುವ ಪ್ರಶ್ನೆಯಾಗಿದೆ. ಸುನಿಲ್ ಪಾಂಡೆ ನಿರ್ದೇಶನದ ಈ ಚಿತ್ರವು ನೋಡುಗರನ್ನು ಭಾವುಕರನ್ನಾಗಿಸಲು ವಿಫಲವಾಗಿದೆ ಎನ್ನುವುದಕ್ಕೆ ಸಿನಿಮಾ ಒಂದು ದಿನದಲ್ಲಿ ಗಳಿಸಿದ ಹಣವೇ ಸಾಕ್ಷಿಯಾಗಿದೆ.

ಚಿತ್ರತಂಡ ಗಳಿಸಿದ್ದೆಷ್ಟು?

ಹೌದು, ಬಹುನಿರೀಕ್ಷಿತ ನಟಿ ಸಾಯಿ ಪಲ್ಲವಿ ಮತ್ತು ಜುನೈದ್ ಖಾನ್ ಅಭಿನಯದ 'ಏಕ್ ದಿನ್'ಸಿನಿಮಾ ಮೇ 1 ರಂದು ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣುವಲ್ಲಿ ವಿಫಲವಾಗಿದೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬಂದ ಈ ಚಿತ್ರವು ಮೊದಲ ದಿನ ಅತ್ಯಂತ ನಿಧಾನಗತಿಯ ಆರಂಭವನ್ನು ಪಡೆದುಕೊಂಡಿದೆ.

ಏಕ್​ ದಿನ್​ ಚಿತ್ರಕ್ಕೆ, ರಿತೇಶ್ ದೇಶಮುಖ್ ಅವರ ರಾಜಾ ಶಿವಾಜಿ ಮತ್ತು ಮೆರಿಲ್ ಸ್ಟ್ರೀಪ್-ಆನ್ ಹ್ಯಾಥ್ವೇ ಅವರ ದಿ ಡೆವಿಲ್ ವೇರ್ಸ್ ಪ್ರಾಡಾ 2 ಸಿನಿಮಾಗಿಂತ ಕಡಿಮೆ ಗಳಿಕೆಯನ್ನು ಕಂಡಿದೆ. ಉದ್ಯಮ ಟ್ರ್ಯಾಕರ್ ಸಕ್ನಿಲ್ಕ್ ಪ್ರಕಾರ, ಏಕ್​ ದಿನ್​ ಚಿತ್ರವು ತನ್ನ ಮೊದಲ ದಿನದಂದು ಸುಮಾರು 1.15 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.

ಮಿಸ್ಟರ್​ ಪರ್ಫೆಕ್ಟ್ ಎಡವಿದ್ದೆಲ್ಲಿ?

ಅಮೀರ್​ ಖಾನ್​ ನಿರ್ದೇಶನದ ಸಿನಿಮಾಗಳಾದ ಲಾಪತಾ ಲೇಡೀಸ್, ಲಗಾನ್​, ತಾರೆ ಜಮೀನ್​ ಪರ್​​, ದಂಗಲ್​​, ದೆಹಲಿ ಬೆಲ್ಲಿ, ಪಿಕೆಯಂತಹ ಸಿನಿಮಾಗಳು ಬ್ಲಾಕ್​​ ಬ್ಲಸ್ಟರ್​​ ಹಿಟ್​ ಕೊಟ್ಟಿತ್ತು. ಈ ಸಿನಿಮಾಗಳ ಮುಂದೆ ಏಕ್​ ದಿನ ಸಿನಿಮಾ ನಿರ್ಮಾಣದಲ್ಲಿ ಅಮೀರ್​ ಖಾನ್​ ಹೀಗೆ ಮಾಡಿದ್ಯಾಕೆ ಎನ್ನುವುದು ಹಲವರಲ್ಲಿ ಕಾಡುತ್ತಿದೆ.

ಕಥಾ ಹಂದರ ಏನು?

ಥಾಯ್​ ಚಲನ ಚಿತ್ರದ ಒನ್​ ಡೇ ಸಿನಿಮಾ ರಿಮೇಕ್​ ಏಕ್​ ದಿನ್​.

ಮೀರಾ ರಂಗನಾಥನ್​​ (ಸಾಯಿ ಪಲ್ಲವಿ), ದಿನೇಶ್​ ಹೆಸರಿನಲ್ಲಿ ಅಮೀರ್​ ಖಾನ್​ರ ಮಗ ಜುನೈದ್​ ಖಾನ್​ ನಟಿಸಿದ್ದಾರೆ. ಮೊದಲಿಗೆ ಅಜಯ್​ ದೇವಗನ್​ಪೊಲೀಸ್ ವೇಷದಲ್ಲಿ ಎಂಟ್ರಿ ಕೊಡುವ ಮೂಲಕ ಇದ್ಯಾವ ಸಿನಿಮಾ ಎನ್ನುವುದು ಪ್ರೇಕ್ಷಕರ ತಲೆಗೆ ಹುಳ ಬಿಟ್ಟಂತೆ ಮಾಡುತ್ತದೆ. ಆನಂತರ ಜುನೈದ್​ ಖಾನ್​ ಅವರು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹಾಗೇ ಅವರನ್ನು ಅವರೇ ಇಂಟ್ರುಡ್ಯೂಸ್ ಮಾಡಿಕೊಳ್ಳುತ್ತಾರೆ. ತನಗೆ ಆಫೀಸಿನಲ್ಲಿ ಸಕರಾತ್ಮಕ ಎನರ್ಜಿ ತುಂಬೋದು ಮೀರಾ ಎಂದಾಗ ಸಾಯಿಪಲ್ಲವಿ ಎಂಟ್ರಿ ನೀಡುತ್ತಾರೆ.

ನಕುಲ್​ ಐಟಿ ಕಂಪನಿಯ ಮ್ಯಾನೇಜರ್​ ಆತನಿಗೆ ಮೀರಾ ಜೊತೆಗ ಅಕ್ರಮ ಸಂಬಂಧವಿರುತ್ತದೆ, ಆತ ತನ್ನ ಪತ್ನಿ ರಿತುಗೆ ಡಿವೋರ್ಸ್​ ಕೊಡೋದಾಗಿ ನಂಬಿಸಿರುತ್ತಾನೆ. ಆದರೆ, ಆಫೀಸ್​ ಟೀಂ ಜಪಾನ್​ಗೆ ಪ್ರವಾಸಕ್ಕೆ ತೆರಳಿದ್ದಾಗ ಆತನ ನಿಜವಾದ ಬಣ್ಣ ಬಯಲಾಗುತದ್ದೆ. ಇದೇ ನೋವಲ್ಲಿ ಆಕೆ ಕುಡಿದು ತೂರಾಡಿ ಹಿಮದ ಮಧ್ಯೆ ಬಿದ್ದಿರುತ್ತಾಳೆ ಆಕೆಯನ್ನು ಹೀರೋನಂತೆ ಕಾಪಾಡುವುದೇ ದಿನೇಶ್ ಆನಂತರ ಆಕೆಗೆ ಒಂದು ದಿನದ ಮರೆವು ಕಾಡುತ್ತದೆ. ಆತನ ಗಂಡ ಎಂದು ವೈದ್ಯರೇ ಪರಿಚಯಿಸುತ್ತಾರೆ. ಒಂದು ದಿನದ ನಂತರ ಸಾಯಿ ಪಲ್ಲವಿ ಅಂದರೆ ಮೀರಾಗೆ ವಿಚಾರ ತಿಳಿದು ಆಕೆ ಕೈಗೊಳ್ಳುವ ನಿರ್ಧಾರ ಏನು ಎನ್ನುವುದೇ ಕತೆ ಮುಂದಿನ ತಿರುವು. ಇಲ್ಲಿಯವರೆಗೂ ಪ್ರೇಕ್ಷಕರನ್ನು ತಡೆದು ಕೂರಿಸುವ ಶಕ್ತಿ ಚಿತ್ರಕ್ಕಿಲ್ಲ. ಪೈಸಾ ವಸೂಲ್​ ಚಿತ್ರವೂ ಅಲ್ಲವೇ ಅಲ್ಲ ಎನ್ನುತ್ತಿದ್ದಾರೆ ಪ್ರೇಕ್ಷಕರು.


ಸಿನಿಮಾ ಪೂರ್ತಿ ವಾವ್​ ಎನಿಸುವ ಯಾವ ಕ್ಷಣಗಳು ಇಲ್ಲ. ಕಥಾ ನಾಯಕ ದಿನೇಶ್​ಗೆ ಮೀರಾ ಮೇಲೆ ಪ್ರೀತಿ ಇದೆ ಎಂತಲೂ ಅನಿಸೋದಿಲ್ಲ. ಸಿನಿಮಾ ಪೂರ್ತಿ ಧಾರವಾಹಿಯಂತೆ ಎಳೆದಾಡುವಂತಿದೆ. ವಾಕರಿಕೆ ಬರುವಂತಹ ಕಾಮಿಡಿಗಳು ಇಲ್ಲಿವೆ. ಇಷ್ಟವಾಗುವುದು ಸಾಯಿಪಲ್ಲವಿ ಹೇರ್​ಸ್ಟೈಲ್​​, ಡ್ರೆಸ್ಸಿಂಗ್​ ಸೆನ್ಸ್, ಆಕೆಯ ಜಪಾನ್​ ಪ್ರವಾಸದ ಪಟ್ಟಿಯ ಚಿತ್ರವೂ ಗಮನ ಸೆಳೆಯುತ್ತದೆ. ಹಾಡುಗಳು ಸಹ ಮನ ತಣಿಸುವಂತೆ ಇಲ್ಲ.

ಏಕ್​ ದಿನ್​ ನಿರ್ಮಾಣಕ್ಕೆ ವೆಚ್ಚವಾಗಿದ್ದು​ ಎಷ್ಟು?

ಏಕ್​ ದಿನ್​ ಸಿನಿಮಾ ನಿರ್ಮಾಣಕ್ಕೆ 15 ಕೋಟಿ ರೂ ವೆಚ್ಚಾಗಿದೆ. ಈ ಬಜೆಟ್ ಚಿತ್ರಕ್ಕೆ ಸಂಬಂಧಿಸಿದ ನಿರ್ಮಾಣ ವೆಚ್ಚಗಳನ್ನು ಪ್ರತಿಬಿಂಬಿಸುತ್ತದೆ, ಇದರಲ್ಲಿ ಪಾತ್ರವರ್ಗದ ಸಂಬಳ, ಸ್ಥಳ ವೆಚ್ಚಗಳು ಮತ್ತು ಮಾರ್ಕೆಟಿಂಗ್ ಪ್ರಯತ್ನಗಳು ಸೇರಿವೆ.

ಮಹಿಳೆಯರಿಗಾಗಿ ಪ್ರಮುಖ ಪಾತ್ರವಿದ್ದರೆ ಮಾತ್ರ ಸಿನಿಮಾ ಆರಿಸಿಕೊಳ್ಳುವ ನಟಿ ಸಾಯಿ ಪಲ್ಲವಿ ಅವರು ಈ ಸಿನಿಮಾವನ್ನು ಆಯ್ದು ಕೊಂಡಿದ್ಯಾಕೆ. ಅವರಿಗೆ ಯಾವ ಸಿನಿಮಾದ ಕತೆಗಳು ಸಿಗುತ್ತಿಲ್ಲವೇ. ಹೀಗಾಗಿ ಸಿಕ್ಕಿದ್ದನ್ನು ಕತೆ ಇರದೇ ಇರುವುದಕ್ಕೆ ಸಹಿ ಹಾಕಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆಯೇ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net