'ಮಾದಕ' ನಟಿಗೆ ಶುಕ್ರವಾರ ಬೆಳಗ್ಗೆಯೇ ಶಾಕ್​ !

Ragini-Dwivedi
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಮಾದಕ ನಟಿ ರಾಗಿಣಿಗೆ ಶುಕ್ರವಾರ ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದ್ದಾರೆ ಸಿಸಿಬಿ ಪೊಲೀಸರು. ಡ್ರಗ್ಸ್​ ಮಾಫಿಯಾ ಸಂಬಂಧ ರಾಗಿಣಿ ಸ್ನೇಹಿತ ರವಿಶಂಕರ್​ನನ್ನು ನಿನ್ನೆ ಬಂಧಿಸಿದ್ದ ಪೊಲೀಸರು ಇಂದು ಬೆಳಗ್ಗೆಯೇ ಯಲಹಂಕದಲ್ಲಿರುವ ರಾಗಿಣಿ ನಿವಾಸಕ್ಕೆ ತೆರಳಿದ್ದಾರೆ.

ಸರ್ಚ್​​ ವಾರೆಂಟ್​ನೊಂದಿಗೆ ತೆರಳಿರುವ ಸಿಸಿಬಿ ಪೊಲೀಸರು ಯಲಹಂಕದ ಜ್ಯುಡಿಷಿನಲ್‌ ಲೇಔಟ್ ನಲ್ಲಿರೋ ರಾಗಿಣಿಯವರ ಅಪಾರ್ಟ್ಮೆಂಟ್ ನಲ್ಲಿ ಶೋಧಕಾರ್ಯ ಶುರುಮಾಡಿದ್ದಾರೆ. ರಾಗಿಣಿ ಮನೆಯಲ್ಲೇ ಇದ್ದು, ಶೋಧ ಕಾರ್ಯಕ್ಕೆ ಸಹಕಾರ ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ.

ರಾಗಿಣಿಯ ಆಪ್ತ ರವಿಶಂಕರ್​ ಬಂಧನದ ಬೆನ್ನಿಗೆ ನಟಿ ಸಂಜನಾ ಗುರ್ಲಾನಿ ಆಪ್ತ ರಾಹುಲ್​ ಮತ್ತು ಕಾರ್ತಿಕ್ ರನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅವರಿಂದಲೂ ಮಾಹಿತಿ, ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು ಬೆಳಗ್ಗೆಯೇ ರಾಗಿಣಿ ಮನೆಯಿಂದಲೇ ಸರ್ಚ್ ಆರಂಭಿಸಿದ್ದಾರೆ. ​ಸಿಸಿಬಿ ಇನ್​ಸ್ಪೆಕ್ಟರ್ ಅಂಜುಮಾಲಾ ನಾಯಕ್​ ನೇತೃತ್ವದಲ್ಲಿ 4 ಮಹಿಳಾ, ಇಬ್ಬರು ಪುರುಷ ಅಧಿಕಾರಿಗಳು ಸೇರಿ ಹತ್ತಕ್ಕೂ ಹೆಚ್ಚು ಪೊಲೀಸರನ್ನು ಒಳಗೊಂಡ ತಂಡ ಈ ಶೋಧ ಕಾರ್ಯದಲ್ಲಿ ಭಾಗಿಯಾಗಿದೆ.

ರವಿಶಂಕರ್, ರಾಹುಲ್, ಕಾರ್ತಿಕ್​ ಜತೆ ಸಂಪರ್ಕದಲ್ಲಿದ್ದವರು, ಅವರೊಂದಿಗೆ ಪಾರ್ಟಿಗಳಿಗೆ ಹೋಗುತ್ತಿದ್ದವರಲ್ಲೀಗ ನಡುಕ ಪ್ರಾರಂಭವಾಗಿದೆ. ಬೆಂಗಳೂರು ಹೊರವಲಯದ ರೆಸಾರ್ಟ್​, ಪಂಚತಾರಾ ಹೋಟೆಲ್​, ಫಾರ್ಮ್​ಹೌಸ್​ಗಳಲ್ಲಿ ಪೇಜ್​ 3 ಪಾರ್ಟಿ ಆಯೋಜಿಸುತ್ತಿದ್ದವರ ಜತೆಗೆ ಈ ಮೂವರು ಸಂಪರ್ಕ ಹೊಂದಿರುವ ವಿಚಾರವೂ ಈಗ ಬಹಿರಂಗವಾಗಿದೆ. ರವಿಶಂಕರ್ ಮೊಬೈಲ್​ನಲ್ಲಿ ಪಾರ್ಟಿ ಆಯೋಜಕರು, ಡ್ರಗ್ಸ್​ ಪೆಡ್ಲರ್​ಗಳ ಮೊಬೈಲ್​ ನಂಬರ್​ಗಳಿದ್ದು, ಅವರೊಂದಿಗೆ ನಡೆಸಿದ ಚಾಟ್​ ಕೂಡ ಲಭ್ಯವಾಗಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net