ಡಬ್ಬಿಂಗ್ ಚಿತ್ರಗಳ ಬಗ್ಗೆ ಮಾತಾಡಿದ ನಟ ಶ್ರೀ ಮುರಳಿ, ''ಡಬ್ಬಿಂಗ್ ಚಿತ್ರಗಳು ಯಾವತ್ತಿದ್ದರೂ ಅಪಾಯಕಾರಿಯೇ. ನಮ್ಮ ಸಿನಿಮಾಗಳು ಚೆನ್ನಾಗಿರಬೇಕು'', ಎಂದು ತಿಳಿಸಿದ್ದಾರೆ. ಇನ್ನು, ಈಗಾಗಲೇ ತೆಲುಗು, ಹಿಂದಿ, ತಮಿಳು, ಮಲಯಾಳಂ ನಂತಹ ಸಿನಿಮಾಗಳಿಗೆ ಬೇರೆ ಪ್ರದೇಶಗಳಲ್ಲಿ ಮಾರ್ಕೆಟ್ ಸಹ ಇದೆ. ಈ ಬೇರೆ ಭಾಷೆಗಳ ಚಿತ್ರಗಳು ದೊಡ್ಡ ಬಜೆಟ್ ಸಿನಿಮಾಗಳಾಗಿದ್ದು ಡಿಮ್ಯಾಂಡ್ ಸಿಕ್ಕಾಪಟ್ಟೆ ಇದೆ. ಹೀಗಿರುವಾಗ, ಪರಭಾಷೆ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾದರೆ, ನಮ್ಮ ಚಿತ್ರಗಳಿಗೆ ಹೊಡೆತ ಬಿಳುವುದು ಪಕ್ಕಾ. ತೆಲುಗಿನ 'RRR', 'ಪುಷ್ಪ', ಹಿಂದಿಯ '83' ಮತ್ತು ಹತ್ತು ಹಲವಾರು ಪರಭಾಷೆ ಚಿತ್ರಗಳ ಕನ್ನಡ ಅವತರಣೆಕೆಗಳು ಥಿಯೇಟರ್ಗಳಲ್ಲಿ ತೆರೆಕಾಣಲು ರೆಡಿಯಾಗಿವೆ.