ತೆರೆ ಮೇಲೆ ಅನಾವರಣವಾಗಲಿದೆ 80, 90ರ ದಶಕದ ಜಗತ್ತು … 'ದೂರದರ್ಶನ' ಟ್ರೇಲರ್​ ಬಿಡುಗಡೆ

Dooradarshan 2
Published on

ಬೆಂಗಳೂರು: ಪೃಥ್ವಿ ಅಂಬರ್​ ಮತ್ತು ಅಯಾನ ನಾಯಕ-ನಾಯಕಿಯಾಗಿರುವ 'ದೂರದರ್ಶನ' ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್​ ಆಗಿದೆ. ಚಿತ್ರವು ಮಾರ್ಚ್​ 3ಕ್ಕೆ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಟ್ರೇಲರ್​ ಬಿಡುಗಡೆಯಾಗಿದೆ.

'ದೂರದರ್ಶನ', ಸುಕೇಶ್​ ಶೆಟ್ಟಿ ಅಭಿನಯದ ಮೊದಲ ಚಿತ್ರ. ಒಂದು ಪುಟ್ಟ ಹಳ್ಳಿಗೆ 80ರ ದಶಕದಲ್ಲಿ ಟಿವಿ ಬಂದಾಗ, ಅಲ್ಲೇನಾಯಿತು ಎಂಬ ಕಥೆ ಇರುವ ಚಿತ್ರ ಇದು. ಈ ಚಿತ್ರದ ಕುರಿತು ಮಾತನಾಡುವ ಸುರೇಶ್​, 'ಈ ಚಿತ್ರ ಒಂದಷ್ಟು ವಿಷಯಗಳಿಗೆ ಸ್ಪೆಷಲ್ ಎನಿಸಿಕೊಳ್ಳುತ್ತದೆ. ರೆಗ್ಯೂಲರ್ ಸ್ಟೈಲ್ ಬಿಟ್ಟು ತುಂಬಾ ಆಪ್ತವಾಗೋ ಹಾಗೆ ಸಿನಿಮಾವನ್ನು ನರೇಟ್ ಮಾಡಲಾಗಿದೆ. ಎರಡು ಕಾಲು ಗಂಟೆ ಒಂದು ಊರೊಳಗೆ ಹೋಗಿ ಎಂಜಾಯ್ ಮಾಡಿದ ಅನುಭವವನ್ನು ಈ ಸಿನಿಮಾ ಪ್ರತಿಯೊಬ್ಬರಿಗೂ ನೀಡಲಿದೆ' ಎನ್ನುತ್ತಾರೆ.

ಈ ಸಿನಿಮಾ ಎಲ್ಲರಿಗೂ ತುಂಬಾ ಹತ್ತಿರ ಆಗುತ್ತೆ ಎನ್ನುವ ನಾಯಕ ಪೃಥ್ವಿ, 'ಒಂದು ಕಾದಂಬರಿ ಓದಿದ ಅನುಭವವನ್ನು ಈ ಸಿನಿಮಾ ಎಲ್ಲರಿಗೂ ನೀಡುತ್ತದೆ. ನಾನು ಮನು ಎಂಬ ಪಾತ್ರ ಮಾಡಿದ್ದೇನೆ. ಬಾಲ್ಯದಲ್ಲಿ ಮಾಡಿದ ತರಲೆ ಎಲ್ಲವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. 'ದೂರದರ್ಶನ' ಒಂದು ಒಳ್ಳೆಯ ಕಟೆಂಟ್ ಸಿನಿಮಾ. ಲವ್ ಸ್ಟೋರಿ, ಕಾಮಿಡಿ, ಎಮೋಷನ್ಸ್ ಎಲ್ಲವೂ ಈ ಚಿತ್ರದಲ್ಲಿದೆ' ಎನ್ನುತ್ತಾರೆ.

'ದೂರದರ್ಶನ' ಚಿತ್ರವನ್ನು ನಿರ್ಮಿಸಿರುವವರು ರಾಜೇಶ್​ ಭಟ್​. ಈ ಚಿತ್ರದಲ್ಲಿ ಪೃಥ್ವಿ ಮತ್ತು ಆಯನಾ ಜತೆಗೆ 'ಉಗ್ರಂ' ಮಂಜು, ಸುಂದರ್​ ವೀಣಾ, ಹರಿಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net