

ಬೆಂಗಳೂರು: ನಟ ‘ದುನಿಯಾ’ ವಿಜಯ್ ಸದ್ಯ ‘ಸಲಗ’ ಗೆಲುವಿನ ಖುಷಿಯಲ್ಲಿ ದ್ದಾರೆ. ಅವರ ಮೊದಲ ನಿರ್ದೇಶನಕ್ಕೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಆ ಸಂಭ್ರಮದ ನಡುವೆಯೇ ವಿಜಯ್ಗೆ ಟಾಲಿವುಡ್ನಿಂದಲೂ ಬುಲಾವ್ ಬಂದಿದೆ. ಸುದ್ದಿಗಳ ಪ್ರಕಾರ, ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಚಿತ್ರದಲ್ಲಿ ವಿಲನ್ ಅವತಾರದಲ್ಲಿ ವಿಜಯ್ ಕಾಣಿಸಿಕೊಳ್ಳಲಿದ್ದಾರಂತೆ. ಹಾಗಾದರೆ, ಯಾವ ರೀತಿಯ ಚಿತ್ರವಿದು? ಏನು ಕಥೆ? ಎಂಬೆಲ್ಲ ಪ್ರಶ್ನೆಗಳು ಬರುವುದು ಸಹಜ.
ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾ ಸಂಪೂರ್ಣ ರಾಯಲಸೀಮಾ ಪ್ರಾಂತ್ಯಕ್ಕೆ ಸಂಬಂಧಿಸಿದ ಕಥೆಯಾಗಿದ್ದು, ಆ ಪ್ರಾಂತ್ಯದ ಖಡಕ್ ವಿಲನ್ ಆಗಿ ‘ದುನಿಯಾ’ ವಿಜಯ್ ನಟಿಸಲಿದ್ದಾರಂತೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ಮೂಡಿಬರಲಿದ್ದು, ಗೋಪಿಚಂದ್ ಮಲಿನೇನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ವಿಶೇಷ ಏನೆಂದರೆ, ಈ ಚಿತ್ರವನ್ನು ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ವಿುಸುತ್ತಿದೆ. ಚಿತ್ರಕಥೆ ಕೆಲಸ ಸಂಪೂರ್ಣ ಮುಗಿಸಿಕೊಂಡಿರುವ ತಂಡ, ಪಾತ್ರವರ್ಗದ ಆಯ್ಕೆಯಲ್ಲಿ ಬಿಜಿಯಾಗಿದೆ.