‘ಆರ್​ಆರ್​ಆರ್’ ಕುರಿತು ಹೇಳಿದಂತೆ ನಡೆಯುತ್ತಾರಾ ರಾಜಮೌಳಿ?

Rajamouli
Published on

ಅಕ್ಟೋಬರ್ 13, 2021

ಈ ದಿನಾಂಕದಂದು ‘ಆರ್​ಆರ್​ಆರ್’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ರಾಜಮೌಳಿ ಘೋಷಿಸಿದ್ದರು. ಆದರೆ, ಹಾಡುಗಳ ಚಿತ್ರೀಕರಣ ಬಾಕಿ ಇರುವುದರಿಂದ ಘೋಷಿಸಿದ ದಿನದಂದೇ ಬಿಡುಗಡೆಯಾಗುತ್ತದಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಮೂಲಗಳ ಪ್ರಕಾರ, ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಎರಡು ಹಾಡುಗಳನ್ನು ಜೋಡಿಸಿದರೆ ಚಿತ್ರದ ಕೆಲಸಗಳು ಸಂಪೂರ್ಣವಾಗುತ್ತದಂತೆ. ಮೇಲಾಗಿ, ಚಿತ್ರಮಂದಿರಗಳು ಪ್ರಾರಂಭವಾದರೆ, ಜನರನ್ನು ಚಿತ್ರಮಂದಿರಗಳತ್ತ ಕರೆತರುವುದಕ್ಕೆ ‘ಆರ್​ಆರ್​ಆರ್’ನಂತಹ ಒಂದು ದೊಡ್ಡ ಚಿತ್ರ ಬೇಕು ಎಂದು ವಿತರಕರು ಮತ್ತು ಪ್ರದರ್ಶಕರು ರಾಜಮೌಳಿ ಹಿಂದೆ ಬಿದ್ದಿರುವುದರಿಂದ, ಅದೇ ದಿನದಂದು ಬಿಡುಗಡೆ ಮಾಡುವುದಕ್ಕೆ ರಾಜಮೌಳಿ ನಿರ್ಧರಿಸಿದ್ದಾರಂತೆ.

ಅದೇ ಕಾರಣಕ್ಕೆ, ಬೇರೆಲ್ಲ ಚಿತ್ರತಂಡಗಳು ಲಾಕ್​ಡೌನ್ ಅನಿಶ್ಚಿತತೆಯ ನಡುವೆ ತಮ್ಮ ಚಿತ್ರಗಳನ್ನು ಮುಂದೂಡುತ್ತಿದ್ದರೆ, ರಾಜಮೌಳಿ ಮಾತ್ರ ಅಕ್ಟೋಬರ್​ನಲ್ಲೇ ಚಿತ್ರ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿ, ಹಗಲು-ರಾತ್ರಿ ಕೆಲಸ ಮಾಡಿ, ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದಾರಂತೆ. ಆದರೆ, ರಾಜಮೌಳಿ ಪ್ರಯತ್ನಗಳಿಗೆ ಕರೊನಾ ಮೂರನೇ ಅಲೆ ಬಿಡುತ್ತದಾ? ಎಂದು ಗೊತ್ತಾಗಬೇಕಿದ್ದರೆ, ಇನ್ನಷ್ಟು ದಿನ ಕಾಯಬೇಕು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net