

ಮುಂಬೈ: ಬಾಲಿವುಡ್ ನಟಿಯರು ಫ್ಯಾಶನ್ಗೆ ಹೆಚ್ಚು ಗಮನ ಕೊಡುವುದು, ಕಾಸ್ಟ್ಲಿ ಬಟ್ಟೆಗಳನ್ನು ಖರೀದಿಸುವುದು ಎಲ್ಲರಿಗೂ ಗೊತ್ತಿದೆ. ಈ ಪಟ್ಟಿಯಲ್ಲಿ ನೊರಾ ಸಹ ಒಬ್ಬರು. ಈ ನೊರಾ ಯಾರು ಅಂತ ಗೊತ್ತು ತಾನೆ? 'ರೋರ್' ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನೊರಾ ನಂತರದ ವರ್ಷಗಳಲ್ಲಿ ಸಾಕಷ್ಟು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಲಾಕ್ಡೌನ್ಗೂ ಮುನ್ನ ನೊರಾ ಅಭಿನಯದ 'ಸ್ಟ್ರೀಟ್ ಡ್ಯಾನ್ಸರ್' ಚಿತ್ರವು ಬಿಡುಗಡೆಯಾಗಿತ್ತು.
ಈಗ್ಯಾಕೆ ಆಕೆಯ ವಿಷಯ ಎಂದರೆ, ನೊರಾ ಆಗಾಗ ಹೊಸಹೊಸ ಕಾಸ್ಟ್ಯೂಮ್ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಸಹ ಅವರು ಬಿಳಿ ಡ್ರೆಸ್ನಲ್ಲಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ಅಂದಹಾಗೆ, ಆ ಕಾಸ್ಟ್ಯೂಮ್ನ ಬೆಲೆ ಎಷ್ಟು ಗೊತ್ತಾ? ಎರಡು ಲಕ್ಷದ ಮೂವತ್ತು ಸಾವಿರವಂತೆ. ಹಾಗಂತ ಅವರೆಲ್ಲೂ ಹೇಳಿಕೊಂಡಿಲ್ಲ. ಅವರ ಫೋಟೋಗಳನ್ನು ನೋಡಿರುವ ನೆಟ್ಟಿಗರು, ಅವರು ತೊಟ್ಟಿರುವ ಕಾಸ್ಟ್ಯೂಮ್ಗೆ ಬೆಲೆ ಎಷ್ಟಿರಬಹುದು ಎಂದು ತನಿಖೆ ನಡೆಸಿದ್ದಾರೆ. ಸಾಕಷ್ಟು ತನಿಖೆಯ ನಂತರ ಅದಕ್ಕೆ 2.3 ಲಕ್ಷ ರೂಪಾಯಿಗಳೆಂದು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಸುಶಾಂತ್ ಬಗ್ಗೆ ಸಿನಿಮಾ ಆಗೋದು ಯಾವಾಗ?
ಬಾಲಿವುಡ್ ನಟ-ನಟಿಯರು ತಾವು ತೊಡುವ ಬಟ್ಟೆಗಳಿಗೆ ಲಕ್ಷಲಕ್ಷ ಚೆಲ್ಲುವುದು ಇತ್ತೀಚೆಗೆ ಟ್ರೆಂಡ್ ಆಗುತ್ತಿದ್ದು, ಹಲವು ನಟ-ನಟಿಯರು ತಮ್ಮ ಕಾಸ್ಟ್ಯೂಮ್ಗಳಿಗೆಂದೇ ಪ್ರತಿ ತಿಂಗಳು ಇಂತಿಷ್ಟು ಬಜೆಟ್ ಎತ್ತಿಡುತ್ತಾರೆ ಎಂದು ಹೇಳಲಾಗುತ್ತದೆ.