ಹಾಸ್ಯ ನಟ ಚಿಕ್ಕಣ್ಣನಿಗೆ ‘ಉಪಾಧ್ಯಕ್ಷ’ ಪಟ್ಟ

collage (11)
Published on

ಬೆಂಗಳೂರು: ಹಾಸ್ಯನಟರು ನಾಯಕರಾಗಿ ಮಿಂಚಿದ್ದಾರೆ. ಕೋಮಲ್​, ಶರಣ್​ ಸೇರಿ ಹಲವರು ಆ ಸಾಲಿನಲ್ಲಿದ್ದಾರೆ. ಇದೀಗ ಅದೇ ರೀತಿ ಚಿಕ್ಕಣ್ಣ ಹೀರೋ ಆಗಿ ಎಂಟ್ರಿಕೊಡುವ ಸಿದ್ಧತೆಯಲ್ಲಿದ್ದಾರೆ.

ಈ ಮೊದಲೇ ಈ ವಿಚಾರ ಹೊರಬಿದ್ದಿತ್ತಾದರೂ, ಸಿನಿಮಾ ಶೀರ್ಷಿಕೆ ಏನು ಎಂಬಿತ್ಯಾದಿ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಆ ವಿಚಾರವನ್ನು ಚಿತ್ರತಂಡ, ಹೇಳಿಕೊಂಡಿದೆ. ಚಿತ್ರಕ್ಕೆ ಉಪಾಧ್ಯಕ್ಷ ಎಂಬ ಟೈಟಲ್​ ಫಿಕ್ಸ್ ಆಗಿದೆ.

ಹೌದು, ಉಮಾಪತಿ ಶ್ರೀನಿವಾಸ್​ ನಿರ್ಮಾಣದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ಚಿಕ್ಕಣ್ಣ ನಾಯಕನಾಗಿ ನಟಿಸಲಿದ್ದು, ಅ. 19ರ ಬೆಳಗ್ಗೆ 8ಗಂಟೆಗೆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಂದ್ರಮೋಹನ್​ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸ್ಮಿತಾ ಉಮಾಪತಿ ಮತ್ತು ನಿರ್ಮಲಾ ಶ್ರೀನಿವಾಸ್​ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.


ಈ ಮೊದಲು ಶರಣ್​ ಅಧ್ಯಕ್ಷ ಸಿನಿಮಾ ಮಾಡಿದ್ದರು. ಆ ಚಿತ್ರದಲ್ಲಿ ಉಪಾಧ್ಯಕ್ಷರಾಗಿ ಚಿಕ್ಕಣ್ಣ ನಟಿಸಿದ್ದರು. ಇದೀಗ ಆ ಪಟ್ಟವನ್ನೇ ಈ ಚಿತ್ರಕ್ಕೆ ಇಡಲಾಗಿದೆ. ಸದ್ಯ ಸ್ಕ್ರಿಪ್ಟ್​ ಕೆಲಸಗಳು ಮುಗಿದಿದ್ದು, ಶೀಘ್ರದಲ್ಲಿ ಚಿತ್ರೀಕರಣವೂ ಶುರುವಾಗಲಿದೆ.

ಉಮಾಪತಿ ಫಿಲಂಸ್​ ಅರ್ಪಿಸುತ್ತಿರುವ ಈ ಚಿತ್ರವನ್ನು ಡಿಎನ್​ ಸಿನಿಮಾಸ್​ ನಿರ್ಮಾಣದ ಹೊಣೆ ಹೊತ್ತಿದೆ. ಈ ಮೊದಲು ಇದೇ ಬ್ಯಾನರ್​ನಿಂದ ಒಂದಲ್ಲ ಎರಡಲ್ಲ ಚಿತ್ರ ನಿರ್ಮಾಣವಾಗಿತ್ತು. ಸುಧಾಕರ್​ ಎಸ್​.ರಾಜ್​ ಛಾಯಾಗ್ರಹಣ, ಅರ್ಜುನ್​ ಜನ್ಯ ಸಂಗೀತ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net