ತ್ರಿಮೂರ್ತಿ ಸನ್ನಿಧಿಯಲ್ಲಿ 'ವಿಧಿಬರಹ' ಆರಂಭ

WhatsApp Image 2020-10-18 at 9.02.49 AM
Published on

ಬೆಂಗಳೂರು: ನಾಡಹಬ್ಬ ದಸರಾ ಮೊದಲ ದಿನ‌ 'ವಿಧಿಬರಹ' ಚಿತ್ರದ ಮುಹೂರ್ತ ಸಮಾರಂಭ ಕನಕಪುರ ರಸ್ತೆಯಲ್ಲಿರುವ ತ್ರಿಮೂರ್ತಿ ದೇವಸ್ಥಾನದಲ್ಲಿ ನೆರವೇರಿತು. ‌ಮೊದಲ‌ ಸನ್ನಿವೇಶಕ್ಕೆ ನಿರ್ಮಾಪಕ ಮಂಜುನಾಥ್. ಈ ಅರಂಭ ಫಲಕ ತೋರಿದರು.

ಎಲ್ಲರ ಜೀವನದದಲ್ಲೂ ವಿಧಿ ಒಂದಲ್ಲ ಒಂದು ರೀತಿ ಆಟವಾಡುತ್ತದೆ ಎಂಬ ಕಥಾಹಂದರ 'ವಿಧಿಬರಹ' ಚಿತ್ರದಲ್ಲಿದೆ. ರಘುವರ್ಮ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಎರಡು ಚಿತ್ರಗಳ ನಿರ್ದೇಶಿಸಿ ಅನುಭವವಿರುವ ರಘುವರ್ಮ‌ ನಿರ್ದೇಶನದ ಮೂರನೇ ಚಿತ್ರವಿದು.

ದೀಪ ಕ್ರಿಯೇಷನ್ಸ್ ಲಾಂಛನದಲ್ಲಿ ಮಂಜುನಾಥ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಕ್ಟೋಬರ್ 30 ರಿಂದ ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.‌

ಆರು ಹಾಡುಗಳಿದ್ದು, ಲಯ ಕೋಕಿಲ ಸಂಗೀತ ನೀಡುತ್ತಿದ್ದಾರೆ. ಎಸ್.ಎಲ್.ವಿ‌ ರವಿ ಛಾಯಾಗ್ರಹಣ ಹಾಗೂ ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಶೋಭ್ ರಾಜ್, ಲಯಕೋಕಿಲ, ರಾಜೇಶ್ ನಟರಂಗ, ಟೆನ್ನಿಸ್ ಕೃಷ್ಣ, ಮೋಹನ್ ಜುನೇಜ, ಪದ್ಮಜ, ರಾಜೇಶ್ ಗಟ್ಟಿಮೇಳ ಮುಂತಾದವರು 'ವಿಧಿಬರಹ' ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net