ದಿವ್ಯಾ ಸುರೇಶ್ ನಿರ್ಗಮನ: ನಾಲ್ಕು ದಿನಗಳಿರುವಾಗ ಬಿಗ್ ಬಾಸ್​ನಿಂದ ಹೊರಕ್ಕೆ

Divya Suresh
Published on

ಬೆಂಗಳೂರು: ‘ಬಿಗ್ ಬಾಸ್’ ಗ್ರಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಫಿನಾಲೆಗೂ ಮುನ್ನ ನಡೆಯುತ್ತಿರುವ ಕಟ್ಟಕಡೆಯ ಎವಿಕ್ಷನ್ ಪ್ರಕ್ರಿಯೆಯಲ್ಲಿ ಬುಧವಾರ ದಿವ್ಯಾ ಸುರೇಶ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ಈ ಕಡೆಯ ಎವಿಕ್ಷನ್ ಪ್ರಕ್ರಿಯೆಯು ಹಂತಹಂತವಾಗಿ ನಡೆಯುತ್ತಿದ್ದು, ಮನೆಯಲ್ಲಿ ಉಳಿದಿರುವ ಆರು ಸ್ಪರ್ಧಿಗಳಿಗೆ ಹಲವು ಟಾಸ್ಕ್​ಗಗಳನ್ನು ನೀಡಲಾಗುತ್ತಿದೆ. ಈ ಟಾಸ್ಕ್​ಗಳಲ್ಲಿ ಎಲ್ಲ ಸ್ಪರ್ಧಿಗಳು ಭಾಗವಹಿಸಬೇಕಿದ್ದು, ಆ ಟಾಸ್ಕ್​ಗಳಲ್ಲಿ ಯಾರ ಹೆಸರು ಬರುತ್ತದೋ ಅವರು ಮುಂದುವರೆಯುತ್ತಾರೆ. ಈ ಪೈಕಿ, ದಿವ್ಯಾ ಸುರೇಶ್ ಹೆಸರು ಬಾರದ ಹಿನ್ನೆಲೆಯಲ್ಲಿ ಅವರು ಮನೆಯಿಂದ ಹೊರನಡೆದಿದ್ದಾರೆ.

‘ಬಿಗ್ ಬಾಸ್’ ಮನೆಯಿಂದ ದಿವ್ಯಾ ಸುರೇಶ್ ಹೊರನಡೆದ ಮೇಲೆ, ವೈಷ್ಣವಿ, ಮಂಜು ಪಾವಗಡ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ ಮತ್ತು ಅರವಿಂದ್ ಕೆ.ಪಿ ಮಾತ್ರ ಉಳಿದಿದ್ದಾರೆ. ಈ ಐವರ ಪೈಕಿ ಕೊನೆಯ ಸುತ್ತಿಗೆ ಇಬ್ಬರು ಮಾತ್ರ ತಲುಪಲಿದ್ದು, ಅವರಲ್ಲಿ ಒಬ್ಬರು ವಿಜೇತರಾಗಿ ಆಯ್ಕೆಯಾದರೆ, ಇನ್ನೊಬ್ಬರು ರನ್ನರ್​ಅಪ್ ಆಗಲಿದ್ದಾರೆ. ಕಾರ್ಯಕ್ರಮ ಮುಕ್ತಾಯಕ್ಕೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದ್ದು, ಈ ನಾಲ್ಕು ದಿನಗಳಲ್ಲಿ ಮೂವರು ಸ್ಪರ್ಧಿಗಳು ಹಂತಹಂತವಾಗಿ ಮನೆಯಿಂದ ಹೊರಬರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net