ಅಲ್ಲಾನ ಲೋಕದಲ್ಲಿ ಸ್ವಲ್ಪ ಸುಖ ಸಿಕ್ಕಾಗ ಕಣ್ಣೀರಾಕುತ್ತಾ ಹೋದಳು... ನಟಿ ನಜ್ರಿಯಾ ವಿರುದ್ಧ ನೆಟ್ಟಿಗರ ಕಿಡಿ | Nazriya Nazim

Nazriya Nazim
Published on

Nazriya Nazim : ತುಂಡುಡುಗೆ ಧರಿಸಿದ ಕಾರಣಕ್ಕೆ ನಟಿ ನಜ್ರಿಯಾ ನಸೀಮ್ ಸೈಬರ್​ ದಾಳಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ನಜ್ರಿಯಾ ಅವರನ್ನು ಕಟುವಾಗಿ ನಿಂದಿಸುತ್ತಿದ್ದಾರೆ.

ನಜ್ರಿಯಾ ಮತ್ತು ಬಾಸಿಲ್ ಜೋಸೆಫ್ ಅಭಿನಯದ 'ಸೂಕ್ಷ್ಮದರ್ಶಿನಿ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದೆ. ಎಲ್ಲ ಆನ್‌ಲೈನ್ ಮಾಧ್ಯಮಗಳು ಸಿನಿತಂಡದ ಸಂದರ್ಶನಗಳನ್ನು ಮಾಡಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕಾಮೆಂಟ್ ವಿಭಾಗದಲ್ಲಿ ಕೆಲವರು ನಜ್ರಿಯಾರ ಮುದ್ದಾದ ನಗುವನ್ನು ಅಣಕಿಸುತ್ತಿದ್ದರೆ, ಇತರರು ನಜ್ರಿಯಾಳ ಉಡುಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಜ್ರಿಯಾ ಅವರು ಕೆಲವು ಸಂದರ್ಶನಗಳಲ್ಲಿ ತಿಳಿಗುಲಾಬಿ ಬಣ್ಣದ ಪಾರದರ್ಶಕ ಉಡುಗೆಯಲ್ಲಿ ಕಾಣಿಸಿಕೊಂಡರು. ಆ ಡ್ರೆಸ್​ ಮೊಣಕಾಲಿನವರೆಗೆ ಮಾತ್ರ ಇತ್ತು. ಹೀಗಾಗಿ ಒಂದು ವರ್ಗ ಜನರನ್ನು ಈ ಉಡುಗೆ ಕೆರಳಿಸಿದೆ. ಆದ್ದರಿಂದ ಕಾಮೆಂಟ್​ ವಿಭಾಗದಲ್ಲಿ ನಜ್ರಿಯಾ ವಿರುದ್ಧ ಹರಿಹಾಯ್ದಿದ್ದಾರೆ.

ಪವಿತ್ರ ರಂಜಾನ್ ಮಾಸದಲ್ಲಿ ಟಿವಿಯಲ್ಲಿ ಬಂದು ದೀನ್ ಕಲಿಸಿದ ಮಹಿಳೆಯ ಸದ್ಯದ ಸ್ಥಿತಿ ಕರುಣಾಜನಕವಾಗಿದೆ ಎಂದು ಕೆಲ ಇಸ್ಲಾಂ ಮೂಲಭೂತವಾದಿಗಳು ಕಾಮೆಂಟ್ ಮಾಡಿದ್ದಾರೆ. ಅಲ್ಲಾನ ಲೋಕದಲ್ಲಿ ಸ್ವಲ್ಪ ಸುಖ ಸಿಕ್ಕಾಗ ನಜ್ರಿಯಾ ಕಣ್ಣೀರು ಹಾಕುತ್ತಾ ಹೋದಳು ಎಂದೂ ಟೀಕಿಸುತ್ತಿದ್ದಾರೆ. ಮುಸಲ್ಮಾನನಾಗಿ ಹುಟ್ಟುವುದಕ್ಕಿಂತ ಮುಸ್ಲಿಮನಾಗಿ ಬದುಕುವುದು ಮತ್ತು ಸಾಯುವುದು ಉತ್ತಮ ಎಂದು ಕೆಲವರು ನಜ್ರಿಯಾ ವಿರುದ್ಧ ಕಿಡಿಕಾರಿದ್ದಾರೆ. ಫಹಾದ್ ಫಾಜಿಲ್ ಅವರು ಇದಕ್ಕೆಲ್ಲ ಹೇಗೆ ಒಪ್ಪುತ್ತಾರೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

Nazriya Nazim 1

ಅಂದಹಾಗೆ ನಜ್ರಿಯಾ, ನಟ ಫಹಾದ್​ ಫಾಜಿಲ್​ ಅವರ ಪತ್ನಿ. ಇಬ್ಬರು ಮಲಯಾಳಂ ಸಿನಿಮಾ ರಂಗದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ನಜ್ರಿಯಾ ತಮಿಳಿನಲ್ಲೂ ಅಭಿನಿಯಸಿದ್ದರೆ, ಫಹಾದ್​ ಮಾತ್ರ ಎಲ್ಲ ಭಾಷೆಗಳಲ್ಲೂ ತಮ್ಮ ಪ್ರತಿಭೆಯ ಅನಾವರಣ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net