ಪ್ರಾಜೆಕ್ಟ್ ಕೆಗೆ ದಿಶಾ; ಪ್ರಭಾಸ್​ಗೆ ಎರಡನೇ ನಾಯಕಿ?

Disha
Published on

ದಿಶಾ ಪಠಾಣಿ ಫುಲ್ ಖುಷಿಯಾಗಿದ್ದಾರೆ. ‘ಏಕ್ ವಿಲನ್ ರಿಟರ್ನ್ಸ್’, ‘ಯೋಧಾ’, ‘ಕಿತ್ನ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವ ದಿಶಾ, ಆ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಮಧ್ಯೆ, ಅವರಿಗೆ ಇನ್ನೊಂದು ದೊಡ್ಡ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅದೇ ‘ಪ್ರಾಜೆಕ್ಟ್ ಕೆ’.

ಇದು ಪ್ರಭಾಸ್ ಅಭಿನಯದ ಹೊಸ ಚಿತ್ರ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಅಮಿತಾಭ್ ಬಚ್ಚನ್ ಸಹ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಈಗ ದಿಶಾಗೂ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಸರಿ ಯಾವ ಪಾತ್ರ ಎಂಬ ಪ್ರಶ್ನೆ ಬರಬಹುದು. ಏಕೆಂದರೆ, ಈಗಾಗಲೇ ದೀಪಿಕಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಾಗಾದರೆ, ದಿಶಾ ಎರಡನೆಯ ನಾಯಕಿಯಾಗಿ ನಟಿಸುತ್ತಿದ್ದಾರಾ? ಎಂಬ ಪ್ರಶ್ನೆ ಸಹಜ. ಆ ವಿಷಯವನ್ನು ಚಿತ್ರತಂಡದವರು ಇದುವರೆಗೂ ಬಿಟ್ಟುಕೊಟ್ಟಿಲ್ಲ.

‘ಪ್ರಾಜೆಕ್ಟ್ ಕೆ’ ಚಿತ್ರದ ಚಿತ್ರೀಕರಣ ಕಳೆದ ವರ್ಷದ ಕೊನೆಯಲ್ಲಿ ಪ್ರಾರಂಭವಾಗಿತ್ತು. ನಿರ್ದೇಶಕ ನಾಗ್​ಅಶ್ವಿನ್ ಹಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಈ ಚಿತ್ರವನ್ನು ವೈಜಯಂತಿ ಮೂವೀಸ್​ನ ಅಶ್ವಿನಿ ದತ್ ನಿರ್ವಿುಸುತ್ತಿದ್ದು, ಸದ್ಯದ ಮಟ್ಟಿಗೆ ಭಾರತದ ಅತೀ ಹೆಚ್ಚು ಬಜೆಟ್​ನ ಚಿತ್ರ ಎಂಬ ಹೆಗ್ಗಳಿಕೆಗೆ ‘ಪ್ರಾಜೆಕ್ಟ್ ಕೆ’ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net