'೦% ಲವ್‌' ನಿರ್ಮಾಪಕರಾಯ್ತು; ಈಗ ನಿರ್ದೇಶಕರೂ ಕರೋನಾಗೆ ಬಲಿ

Abhiram - Manjunath - Final
Published on

ಬೆಂಗಳೂರು: ಕರೊನಾ ಎರಡನೇ ಅಲೆಗೆ ಬಲಿಯಾದ ಚಿತ್ರರಂಗಕ್ಕೆ ಸಂಬಂಧಿಸಿದ ಮೊದಲ ವ್ಯಕ್ತಿ ಎಂದರೆ ಅದು ನಟ-ನಿರ್ಮಾಪಕ ಮಂಜುನಾಥ್​. ಈಗ '೦% ಲವ್‌' ಚಿತ್ರದ ನಿರ್ದೇಶಕ ಅಭಿರಾಮ್​ ಸಹ ಕರೊನಾದಿಂದ ಇನ್ನಿಲ್ಲವಾಗಿದ್ದಾರೆ.

ಮಂಜುನಾಥ್​ ಮತ್ತು ಅಭಿರಾಮ್​ ಇಬ್ಬರೂ ಜತೆಯಾಗಿ ಚಿತ್ರರಂಗಕ್ಕೆ ಬಂದವರು. 'ಸಂಯುಕ್ತಾ 2' ಚಿತ್ರವನ್ನು ಮಂಜುನಾಥ್​ ನಿರ್ಮಿಸುವುದರ ಜತೆಗೆ ಒಂದು ಪ್ರಮುಖ ಪಾತ್ರ ವಹಿಸಿದರೆ, ಅಭಿರಾಮ್​ ಆ ಚಿತ್ರವನ್ನು ನಿರ್ದೇಶಿಸಿದ್ದರು. ಆ ನಂತರ ಮಂಜುನಾಥ್​ 'ಕೆಮಿಸ್ಟ್ರಿ ಆಫ್​ ಕರಿಯಪ್ಪ' ಚಿತ್ರವನ್ನು ಇನ್ನೊಬ್ಬರ ನಿರ್ದೇಶನದಲ್ಲಿ ತೆರೆಗೆ ತಂದರು.

ಇದಾದ ಮೇಲೆ, '೦% ಲವ್‌' ಚಿತ್ರದಲ್ಲಿ ಮಂಜುನಾಥ್​ ಮತ್ತು ಅಭಿರಾಮ್​ ಮತ್ತೆ ಜತೆಯಾದರು. ಅಭಿರಾಮ್​ ಈ ಚಿತ್ರವನ್ನು ನಿರ್ದೇಶಿಸಿದರೆ, ಮಂಜುನಾಥ್​ ನಿರ್ಮಾಣದ ಜತೆಗೆ ನಾಯಕರಾಗಿಯೂ ಅಭಿನಯಿಸಿದರು. ಈಗ ಆ ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುನ್ನವೇ ಅವರಿಬ್ಬರೂ ಕರೊನಾದಿಂದ ನಿಧನರಾಗಿದ್ದಾರೆ.

ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಶುಕ್ರವಾರ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಕನಸಿಟ್ಟು ರೂಪಿಸಿದ ಸಿನಿಮಾ ತೆರೆಗೆ ಬರುವ ಮುನ್ನವೇ ಚಿತ್ರದ ಹೀರೋ ಮತ್ತು ಡೈರೆಕ್ಟರ್‌ ಇಬ್ಬರನ್ನೂ ಕೊರೋನಾ ನುಂಗಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net