

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೇ ಸಿನಿಮಾ ದಿಲ್ ಬೇಚಾರ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ದಾಖಲೆ ಬರೆದಿರುವುದು ಗೊತ್ತಿರುವ ವಿಚಾರ. ಇದೀಗ ಇದೇ ಸಿನಿಮಾ ಚಿತ್ರಮಂದಿರಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಹಾಗೆಂದ ಮಾತ್ರಕ್ಕೆ ಈ ಸಿನಿಮಾ ಭಾರತದಲ್ಲಿ ತೆರೆಕಾಣುತ್ತಿಲ್ಲ. ಬದಲಿಗೆ ದೂರದ ಆಸ್ಟ್ರೇಲಿಯಾದಲ್ಲಿನ ಚಿತ್ರಮಂದಿರಗಳಲ್ಲಿ ಮುಖೇಶ್ ಛಾಬ್ರಾ ನಿರ್ದೇಶನದ ದಿಲ್ ಬೇಚಾರ ಸಿನಿಮಾ ಬಿಡುಗಡೆಯಾಗಲಿದೆ. ದಿನಾಂಕ ಸಹ ಹೊರಬಿದ್ದಿದ್ದು, ಅಕ್ಟೋಬರ್ 15ಕ್ಕೆ ಈ ಸಿನಿಮಾ ಅಲ್ಲಿನ ಥಿಯೇಟರ್ಗಳಲ್ಲಿ ರಿಲೀಸ್ ಆಗಲಿದೆ.
ಕೇವಲ ದಿಲ್ ಬೇಚಾರ ಸಿನಿಮಾ ಮಾತ್ರವಲ್ಲ. ಇದರ ಜತೆಗೆ ಲೂಟ್ಕೇಸ್, ಸಡಕ್ 2 ಸಿನಿಮಾಗಳೂ ಆಸ್ಟ್ರೇಲಿಯನ್ ಚಿತ್ರಮಂದಿರಗಳಲ್ಲಿ ಬಿಡುಗಡೆಗಡೆ ಆಗಲಿವೆ.
ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಿತ್ರಮಂದಿರಗಳನ್ನು ಈಗೀಗ ತೆರೆಯಲಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳ ನಡುವೆಯೇ ಸಿನಿಮಾ ಪ್ರದರ್ಶನಕ್ಕೂ ಅನುಮತಿ ನೀಡಲಾಗಿದೆ. (ಏಜೆನ್ಸೀಸ್)