

| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಪೌಡರ್
ನಿರ್ದೇಶನ: ಜನಾರ್ದನ್ ಚಿಕ್ಕಣ್ಣ
ನಿರ್ಮಾಣ: ಕೆಆರ್ಜಿ ಸ್ಟುಡಿಯೋಸ್ ಮತ್ತು ಟಿವಿಎಫ್
ತಾರಾಗಣ: ದಿಗಂತ್, ಶರ್ಮಿಳಾ ಮಾಂಡ್ರೆ, ಧನ್ಯಾ ರಾಮಕುಮಾರ್, ಅನಿರುದ್ಧ್ ಆಚಾರ್ಯ, ರಂಗಾಯಣ ರು, ನಾಗಭೂಷಣ, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು.
"ಸಿನಿಮಾ ನೋಡಿ ಹೈ ಆಗಿ, ಡ್ರಗ್ಸ್ ತಗೊಂಡಲ್ಲ' ಎಂಬ ಸೂಚನೆಯೊಂದಿಗೆ "ಪೌಡರ್' ಸಿನಿಮಾ ಪ್ರಾರಂಭವಾಗುತ್ತದೆ. ಸಿನಿಮಾ ಸಾಗಿದಂತೆ ಆ ಸೂಚನೆಯೂ ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ಯಾಕೆಂದರೆ, "ಪೌಡರ್' ಪ್ರೇಕ್ಷಕರಲ್ಲಿ "ಲಾಜಿಕ್ ಇಲ್ಲದೇ, ಕಾಮಿಕ್' ಮೂಲಕ ಮನರಂಜನೆಯ ನಶೆಯೇರಿಸುವ ಸಿನಿಮಾ! ಆದರೆ, ನಟ ಜಗ್ಗೇಶ್ ಅವರು ಹಿನ್ನೆಲೆಯಲ್ಲಿ, "ಕಥೆನ ಸುತ್ತೀಬಳಸಿ ಹೇಳಿದ್ರೂ, ನೀವು ಬುದ್ಧಿ ಬಳಸಿ ಅರ್ಥ ಮಾಡಿಕೋತೀರಾ' ಹೇಳಿದಂತೆ ಅತ್ತಿತ್ತ ಗಮನಹರಿಸದೆ 131 ನಿಮಿಷಗಳ ಕಾಲ ಸ್ಕ್ರೀನ್ನತ್ತ ಗಮನವಿದ್ದರೆ ಸಾಕು…
ಆತ ಸೂರ್ಯ (ದಿಗಂತ್), ಮೈಸೂರಿನ ಸೂಪರ್ ಮಾರ್ಕೆಟ್ನಲ್ಲಿ ಕೆಲಸ. ಅವನ ಗರ್ಲ್ಫ್ರೆಂಡ್ ನರ್ಸ್ ನಿತ್ಯಾ (ಧನ್ಯಾ). ಸೂರ್ಯನ ಗೆಳೆಯ ಕರ್ಣ (ಅನಿರುದ್ಧ್), ಅಡ್ಡದಾರಿ ಐಡಿಯಾಗಳ ಕುಖ್ಯಾತಿ ಅವನದು. ಚೀನಾದಲ್ಲಿ ಹೊಸ ಡ್ರಗ್ಸ್ ತಯಾರಿಸುವ ಡಾನ್ ಬ್ರೂಸ್ ಲೀ, ಅದನ್ನು ಭಾರತದ ಹ್ಯಾಂಡ್ಲರ್ ಜೀವ್ಸ್ ಮೂಲಕ ಕರ್ನಾಟಕದ ಪೆಡ್ಲರ್ ಅಣ್ಣಾಚಿಗೆ (ರು) ಡ್ರಗ್ಸ್ ಕಳುಹಿಸುತ್ತಾನೆ. ಇವರಿಗೆ ಕಳುಹಿಸುವ ಡ್ರಗ್ಸ್ ಅದ್ಹೇಗೋ ಸೂರ್ಯ, ನಿತ್ಯಾ ಮತ್ತು ಕರ್ಣನಿಗೆ ಸಿಗುತ್ತದೆ. ಅದನ್ನು ಮಾರಿ ಹಣ ಗಳಿಸುವ ಪ್ಲ್ಯಾನ್ ಇವರದು. ಆ ಐಡಿಯಾ ಕೆಲಸ ಮಾಡುತ್ತಾ? ಅಥವಾ ಅಣ್ಣಾಚಿ ಅದಕ್ಕೆ ಅಡ್ಡಗಾಲು ಹಾಕುತ್ತಾನಾ? ಮುಂದೆ ಏನಾಗುತ್ತದೆ ಎಂಬುದೇ "ಪೌಡರ್' ಮ್ಯಾಟರ್!
ಡ್ರಗ್ಸ್ ಸೇವಿಸದೆಯೂ ಹೈ ಆಗಬಹುದು ಎಂಬುದನ್ನು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಈ ಚಿತ್ರದಿಂದ ತೋರಿಸಿದ್ದಾರೆ. ಮಾದಕ ವಸ್ತುಗಳ ನಶೆಯೇರಿದರೆ ಯಾವುದೋ ಲೋಕದಲ್ಲಿ ಸಂಚರಿಸುವಂತೆ ಭಾಸವಾಗುತ್ತದೆಯೋ ಆ ಎಲ್ಲ ಲೋಕಗಳ ದರ್ಶನ ಮಾಡಿಸಿದ್ದಾರೆ. ಹೀಗಾಗಿಯೇ ಚಿತ್ರದಲ್ಲಿ ವಿಎ್ಎಕ್ಸ್ ಮತ್ತು ಆ್ಯನಿಮೇಷನ್ ಕೂಡ ಹೇರಳವಾಗಿವೆ. ಅದನ್ನು ದೊಡ್ಡ ತೆರೆಯ ಮೇಲೆ ನೋಡುವುದೇ ಚಂದ. ಮೊದರ್ಲಧದಲ್ಲಿ ವೇಗವಾಗಿ ಸಾಗುವ ಕಥೆ, ದ್ವೀತಿಯಾರ್ಧದಲ್ಲಿ ನಶೆಯ ಲೋಕಕ್ಕೆ ಕೊಂಡೊಯ್ಯುತ್ತದೆ. ಆಗ ಸ್ವಲ್ಪ ನಿಧಾನವೆನಿಸಿದರೂ ಸಿನಿಮಾ ಬೋರ್ ಅನ್ನಿಸುವುದಿಲ್ಲ. ದಿಗಂತ್, ಧನ್ಯಾ, ಶರ್ಮಿಳಾ, ಅನಿರುದ್ಧ್, ರಂಗಾಯಣ ರು, ರವಿಶಂಕರ್, ನಾಗಭೂಷಣ, ಗೋಪಾಲ್ ದೇಶಪಾಂಡೆ ನಗಿಸುವಲ್ಲಿ ಎಲ್ಲರೂ ಲೀಲಾಜಾಲ. "ಚಿತ್ರದಲ್ಲಿ ಲಾಜಿಕ್ ಇಲ್ಲ ಬರೀ ಮ್ಯಾಜಿಕ್' ಅಂತ ಚಿತ್ರತಂಡ ಮೊದಲೇ ಹೇಳಿತ್ತು. ಅದರಂತೆ "ಪೌಡರ್'ನಲ್ಲಿ ಯಾವುದೇ ಮೆಸೇಜ್ ಇಲ್ಲ, ಹಾಗಂತ ಮನರಂಜನೆಗೆ ಕೊರತೆಯಿಲ್ಲ.