ರಣವೀರ್​ ಸಿಂಗ್​ ನಟನೆಯ Dhurandhar 2 ಓಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್; ಎಲ್ಲಿ ವೀಕ್ಷಿಸಬಹುದು?

Dhurandhar 2 OTT Release
Dhurandhar 2 OTT Release
Published on
Dhurandhar 2 OTT Release: ರಣವೀರ್​ ಸಿಂಗ್​ ನಟನೆಯ 'ಧುರಂಧರ್: ದಿ ರಿವೆಂಜ್ ಸಿನಿಮಾ ಸದ್ಯ ದೇಶ ಮತ್ತು ವಿದೇಶದಲ್ಲೂ ಭಾರಿ ಸಕ್ಸಸ್​ ಕಂಡಿದೆ. ವಿಶ್ವಾದ್ಯಂತ ಒಟ್ಟಾರೆಯಾಗಿ 1800 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಇತಿಹಾಸ ಸೃಷ್ಟಿಸಿದೆ. ಸದ್ಯ ಅಭಿಮಾನಿಗಳು ಅದರ OTT ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ, ಈ ಬಾರಿ Dhurandhar 2 ನೆಟ್​ಫ್ಲಿಕ್ಸ್​ನಲ್ಲಿ ಅಲ್ಲ ಜಿಯೋ ಹಾಟ್​ಸ್ಟಾರ್​ನಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ.

ದುರಂಧರ್​ ಎಲ್ಲಿ ನೋಡಬಹುದು?

ದುರಂಧರ್​ ಮೊದಲ ಭಾಗ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗಿತ್ತು. ಜನರು ಈ ಸಿನಿಮಾನ್ನು ನೆಚ್ಚಿಕೊಂಡು ಅಪ್ಪಿಕೊಂಡಿದ್ದರು. ರೀಲ್ಸ್​ನಲ್ಲಿ ಸ್ಪೈ ಬಗ್ಗೆ ಕಾಂಟೆಂಟ್ ಕ್ರಿಯೇಟ್​ ಮಾಡಿ ಗೇಲಿ ಮಾಡಿದ್ದರು. ಆದರೆ, ಈ ಬಾರಿ . ವಿಶ್ವಾದ್ಯಂತ, ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ, ಭಾರತದಲ್ಲಿ, ಭಾರತದಲ್ಲಿ ಜಿಯೋ ಹಾಟ್​ಸ್ಟಾರ್ ಸಂಸ್ಥೆ ಬರೋಬ್ಬರಿ 150 ಕೋಟಿ ರೂಪಾಯಿಗಳಿಗೆ ಒಟಿಟಿ ಹಕ್ಕನ್ನು ಖರೀದಿಸಿದೆ ಎಂದು ಮಾಹಿತಿ ಹೊರಬಿದ್ದಿದೆ.

ಎಂದು ರಿಲೀಸ್?

ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2: ದಿ ರಿವೆಂಜ್' ಪ್ರಾದೇಶಿಕ ಸಮಯ ವಲಯಗಳನ್ನು ಅವಲಂಬಿಸಿ ಮೇ 14 ಮತ್ತು 15, 2026 ರ ನಡುವೆ ನೆಟ್‌ಫ್ಲಿಕ್ಸ್‌ನಲ್ಲಿ ಅಂತರರಾಷ್ಟ್ರೀಯವಾಗಿ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ವಿದೇಶಿ ವೀಕ್ಷಕರಿಗೆ, ವೇದಿಕೆಯು ಧುರಂಧರ್: ದಿ ರಿವೆಂಜ್ (ರಾ ಆ್ಯಂಡ್ ಅನ್​​ಸಿನ್) ಎಂಬ ಪರ್ಯಾಯ ಶೀರ್ಷಿಕೆಯಡಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ ಎಂದು ವರದಿಯಾಗಿದೆ,

3 ಗಂಟೆ 52 ನಿಮಿಷ ಇರಲಿದೆ ಸಿನಿಮಾ

ಚಿತ್ರಮಂದಿರದಲ್ಲಿ 3 ಗಂಟೆ 49 ನಿಮಿಷಗಳಿದ್ದ ಧುರಂದರ್: ದಿ ರಿವೇಂಜ್ ಒಟಿಟಿಯಲ್ಲಿ 3 ಗಂಟೆ 52 ನಿಮಿಷಗಳ ಕಾಲ ಇರಲಿದೆ. ಸೆನ್ಸಾರ್ ಮಂಡಳಿಯಿಂದ ಕತ್ತರಿ ಬಿದ್ದಿದ್ದ ಹಿಂಸಾತ್ಮಕ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಈ ಆವೃತ್ತಿಯಲ್ಲಿ ಮರುಸೇರ್ಪಡೆ ಮಾಡಲಾಗಿದೆ. ಇಂದು ಸಿನಿಮಾ ಪ್ರಸಾರ ಆಗುವ ಸಾಧ್ಯತೆ ಇದೆ. ಆದರೆ, ಇನ್ನು ಈ ಬಗ್ಗೆ ಯಾವುದೇ ನಿಖರ ಮಾಹಿತಿ ಹೊರಬಿದ್ದಿಲ್ಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net