ಅಭಿಮಾನಿಗಳ ಸತತ ಜೈಕಾರದ ನಡುವೆಯೂ ಅಪ್ಪು-ಚಿರುವನ್ನು ಮರೆಯದ ಧ್ರುವ ಸರ್ಜಾ!

1204437
Published on

ಬೆಂಗಳೂರು: 'ಲವ್ ಯೂ ರಚ್ಚು' ಸಿನಿಮಾದ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದ ನಟ ಧ್ರುವ ಸರ್ಜಾ, ತಮ್ಮ ಅಭಿಮಾನಿಗಳ ಸತತ ಜೈಕಾರದ ನಡುವೆಯೂ, ಪುನೀತ್ ರಾಜ್‌ಕುಮಾರ್ ಮತ್ತು ತಮ್ಮ ಸೋದರ ಚಿರಂಜೀವಿ ಸರ್ಜಾ ಅವರನ್ನು ಮರೆಯಲಿಲ್ಲ ಎಂಬುದು ಗಮನಾರ್ಹ.

ಪುನೀತ್ ರಾಜ್‌ಕುಮಾರ್ ಅವರನ್ನು ಹಲವಾರು ಸಲ ಭೇಟಿಯಾಗಿದ್ದೆ. ಅವರನ್ನು ಭೇಟಿಯಾದಾಗಲೆಲ್ಲ ಮಾತನಾಡುತ್ತಿದ್ದ ಮಾತುಗಳು ಡಾನ್ಸ್ ಬಗ್ಗೆಯೇ ಹೆಚ್ಚಾಗಿ ಇರುತ್ತಿದ್ದವು. ಫೋರ್ ಸ್ಟೆಪ್ ಯಾವುದು ಮಾಡಿದ್ರಿ ಸರ್ ಎಂದು ನಾನು ಕೇಳುತ್ತಿದ್ದೆ, ನೀನು ಯಾವುದು ಮಾಡಿದೆ ಕಣೋ ಅಂತ ನನ್ನನ್ನು ವಿಚಾರಿಸುತ್ತಿದ್ದರು.. ಎಂದು ಅಪ್ಪು ಕುರಿತ ನೆನಪುಗಳನ್ನು ಧ್ರುವ ಸರ್ಜಾ ಮೆಲುಕು ಹಾಕಿದರು.

ಯಾವುದೇ ಸಮಸ್ಯೆ ಇದ್ದರೂ ನಮ್ಮಂತಹ ಚಿಕ್ಕವರಿಗೆ ಸಪೋರ್ಟ್ ಮಾಡುತ್ತಿದ್ದರು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಎಂದೆಂದಿಗೂ ಅಮರ ಮತ್ತು ಚಿರಂಜೀವಿ ಎಂದು ಧ್ರುವ ಸರ್ಜಾ ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net