ನಾಲ್ಕು ದಿನಗಳ ಹಿಂದೆ ಪ್ರೇಮವಿವಾಹ ಮಾಡಿಕೊಂಡಿದ್ದ ಯುವತಿ ಆತ್ಮಹತ್ಯೆ!

Veena
ಯುವತಿ ಆತ್ಮಹತ್ಯೆ ಮಾಡಿಕೊಂಡ ಲಾಡ್ಜ್​
Published on

ಚಿಕ್ಕಬಳ್ಳಾಪುರ: ಪ್ರೇಮವಿವಾಹವಾಗಿದ್ದರೂ ಮದುವೆಯಾದ ನಾಲ್ಕೇ ದಿನಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಪ್ರಕರಣವೊಂದು ವರದಿಯಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಅಟ್ಟಹಳ್ಳಿ ನಿವಾಸಿ ವೀಣಾ (25) ಸಾವಿಗೀಡಾದವರು.

ಈಕೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಬಾಲಾಜಿ ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಬಂಧಿ, ಯಲಹಂಕ ಬಾಗಲೂರು ಕ್ರಾಸ್ ನಿವಾಸಿ ಪುನೀತ್ ಎಂಬಾತನನ್ನು ಪ್ರೀತಿಸಿದ್ದ ಈಕೆ ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದಳು.

ಪ್ರೇಮವಿವಾಹವಾಗಿದ್ದರೂ ಈಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬಿತ್ಯಾದಿ ಖಚಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net