ಅಪ್ಪು ಅಭಿಮಾನಿಯನ್ನು ಭೇಟಿಯಾದ ಧ್ರುವ ಸರ್ಜಾ! ವಿಡಿಯೋ ವೈರಲ್...

Published on
ಇತ್ತೀಚೆಗೆ, 3350 ಕಿಮೀ ಸೈಕಲ್ ಯಾತ್ರೆ ಮಾಡಿದ್ದಾರೆ ಎಂಬ ಅಪ್ಪು ಅಭಿಮಾನಿಯೊಬ್ಬರ ಸುದ್ದಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಹೌದು, ಅಪ್ಪು ಅಭಿಮಾನಿಯಾದ ಚಾರಣಕಾರ ಗುರುಪ್ರಕಾಶ್ ಪುನೀತ್​​​ಗೆಂದು 3,350 ಕಿಲೋ. ಮೀಟರ್ ಸೈಕಲ್ ಯಾತ್ರೆ ಡಿ.10 ರಂದು ಆರಂಭಿಸಿ ಜನವರಿ 20 ರಂದು ತಮ್ಮ ಯಾತ್ರೆ ಮುಗಿಸಿ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯನ್ನು ತಲುಪಿದ್ದರು.
ಹಿಮಾಚಲ ಪ್ರದೇಶದ ಮಣಿಕರಣ್​ದಿಂದ ಆರಂಭಿಸಿ ಕರ್ನಾಟಕದ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯವರೆಗೆ 'ಮೌಂಟ್​ನೇರ್ ಗುರುಪ್ರಕಾಶ್'ರ ಅಭಿಮಾನದ ಬೈಸಿಕಲ್ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಅಪ್ಪು ಸಮಾಧಿಗೆ ಭೇಟಿ ನೀಡಿದ ಗುರು ಅವರನ್ನು ಸ್ವಾಗತಿಸಿ ದೊಡ್ಮನೆ ಕುಟುಂಬ ಸನ್ಮಾನಿಸಿತ್ತು. ನಂತರ, ಶಿವರಾಜ್ ಕುಮಾರ್ ಅವರು ಕುಡ ಗುರು ಅವರನ್ನು ತಮ್ಮ ಮನೆಯಲ್ಲಿ ಭೇಟಿ ಮಾಡಿ ಅಭಿನಂದಿಸಿದ್ದಾರೆ.
ಇದೀಗ, ಗುರು ಪ್ರಕಾಶ್ ಗೌಡ ಅವರನ್ನು ತಮ್ಮ ಮನೆಯ ಬಳಿ ಭೇಟಿ ಮಾಡಿದ ನಟ ಧ್ರುವ ಸರ್ಜಾ ಅವರು ಕೂಡ, ಈ ಅಪ್ಪು ಅವರ ಅಪರೂಪದ ಅಭಿಮಾನಿಯನ್ನು ಅಭಿನಂದಿಸಿದ್ದಾರೆ. ನಟ ಧ್ರುವ ಸರ್ಜಾ ಅವರು ಗುರು ಪ್ರಕಾಶ್ ಗೌಡ ಅವರನ್ನು ಭೇಟಿ ಮಾಡಿದ ಫೋಟೋಗಳು ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಇನ್ನು, ನಟ ಧ್ರುವ ಸರ್ಜಾ ಅಭಿಮಾನಿಯನ್ನು ತಬ್ಬಿಕೊಂಡು ಗುರು ಅವರ ಸೈಕಲ್ ಜತೆ ಫೋಟೋವೊಂದನ್ನು ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಗುರು ಪ್ರಕಾಶ್ ಗೌಡ ಅವರ ಜತೆ ಮಾತಾಡುತ್ತಿರುವಾಗ ಕೆಲ ಹೊತ್ತು ಭಾವುಕರಾಗಿ ಸೈಕಲ್​ಗೆ ಇರುವ ಅಪ್ಪು ಫೋಟೋವನ್ನು ಮುಟ್ಟಿದ್ದಾರೆ ನಟ ಧ್ರುವ ಸರ್ಜಾ. ಕೊನೆಯಲ್ಲಿ, ಗುರು ಅವರಿಗೆ ಧ್ರುವ ಒಂದು ಪ್ರೀತಿ ತುಂಬಿದ ಹೈಫೈ ಕೊಟ್ಟಿದ್ದು, ಈ ಅಭಿಮಾನಿಯ ಮುಂದಿನ 46,000 ಕಿಮೀ. ಪುನೀತ್ ಯಾತ್ರೆಗೆ ಶುಭಹಾರೈಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net