ಧ್ರುವ ತಮ್ಮ ಕೂದಲನ್ನು ಏನು ಮಾಡಿದರು ಗೊತ್ತಾ?

Dhruva Sarja - Final
Published on

ಬೆಂಗಳೂರು: ಎರಡು ವರ್ಷಗಳ ನಂತರ ಧ್ರುವ ಸರ್ಜಾ ಕೊನೆಗೂ ತಮ್ಮ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ. 'ಪೊಗರು' ಚಿತ್ರಕ್ಕಾಗಿ ಅವರು ಇಷ್ಟುದ್ಧ ಕೂದಲು ಬಿಟ್ಟಿದ್ದರು. ಅದೇ ಹೇರ್​ಸ್ಟೈಲ್​ನಲ್ಲಿ ಅವರು ಮದುವೆಯಾಗಿದ್ದರು. ಇದೀಗ 'ಪೊಗರು' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿರುವ ಅವರು, ತಮ್ಮ ಕೂದಲಿಗೆ ಶುಕ್ರವಾರ ಕತ್ತರಿ ಹಾಕಿಸಿದ್ದಾರೆ.

ಧ್ರುವ ತಮ್ಮ ಕೂದಲನ್ನು ಏನು ಮಾಡಿದ್ದಾರೆ ಗೊತ್ತಾ? ಕ್ಯಾನ್ಸರ್​ ಪೇಶಂಟ್​ಗಳಿಗಾಗಿ ವಿಗ್​ ಮಾಡುವುದಕ್ಕೆ ತಮ್ಮ ಕೂದಲನ್ನು ಕೊಟ್ಟಿದ್ದಾರೆ. ಈ ಕುರಿತು ಒಂದು ವಿಡಿಯೋ ಮಾಡಿರುವ ಅವರು, ಅದರಲ್ಲಿ ತಮ್ಮ ಕೂದಲನ್ನು ಏತಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ''ಪೊಗರು' ಚಿತ್ರೀಕರಣ ಮುಗಿದಿದೆ. ಹೇರ್​ಕಟ್​ ಮಾಡಿಸಬೇಕು ಎಂದು ಹೊರಟಾಗ ಸ್ನೇಹಿತರು ತಿಳಿಹೇಳಿದರು. 10 ಇಂಚಿಗಿಂಥ ಉದ್ಧವಿರುವ ಕೂದಲನ್ನು ಕತ್ತರಿಸಿ ಬಿಸಾಕುವ ಬದಲು, ಕ್ಯಾನ್ಸರ್​ ಪೇಶಂಟ್​ಗಳಿಗೆ ದಾನ ಮಾಡು ಎಂದರು. ಈಗಾಗಲೇ ಸಾಕಷ್ಟು ತಮ್ಮ ಕೂದಲನ್ನು ಹೀಗೆ ದಾನ ಮಾಡಿದ್ದಾರೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ಯಾನ್ಸರ್​ ಪೇಶಂಟ್​ಗಳಿಗೆ ವಿಗ್​ ಮಾಡಿಸುವ ಸಲುವಾಗಿ ನಾನು ನನ್ನ ಕೂದಲನ್ನು ದಾನ ಮಾಡುತ್ತಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

ತಾವು ದಾನ ಮಾಡಿದ್ದಷ್ಟೇ ಅಲ್ಲ, ಇತರರಿಗೂ ದಾನ ಮಾಡುವುದಕ್ಕೆ ಹೇಳಿರುವ ಧ್ರುವ, ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಅಂದಹಾಗೆ, 'ದುಬಾರಿ' ಚಿತ್ರದ ಮುಹೂರ್ತ ಈಗಾಗಲೇ ಮುಗಿದಿದ್ದು, ಡಿಸೆಂಬರ್​ನಿಂದ ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರವನ್ನು ನಂದಕಿಶೋರ್​ ನಿರ್ದೇಶನ ಮಾಡುತ್ತಿದ್ದು, ಉದಯ್​ ಮೆಹ್ತಾ ನಿರ್ಮಾ ಮಾಡುತ್ತಿದ್ದಾರೆ. ಚಂದನ್​ ಶೆಟ್ಟಿ, ಈ ಚಿತ್ರದ ಸಂಗೀತ ನಿರ್ದೇಶಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net