ಬೆಂಗಳೂರು: 'ಪೊಗರು' ಚಿತ್ರದ ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾದ ಶೂಟಿಂಗ್ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಇದ್ದಾರೆ. ಸ್ಟಾರ್ ನಟರು ಹೀಗೆ ಬ್ಯೂಸಿಯಾಗಿರುವುದು ಸಹಜ. ಹೀಗಿರುವಾಗ, ಅವರಿಗೆ ತಮ್ಮ ಕುಟುಂಬದ ಜೊತೆ ಕಾಲ ಕಳೆಯಲೇ ಸಮಯ ಸಿಗುವುದಿಲ್ಲ. ಮತ್ತೆ, ಅಡುಗೆ ಎಲ್ಲಿ ಮಾಡುತ್ತಾರೆ ಅನಿಸುತ್ತೆ. ಆದರೆ, 'ಮಾರ್ಟಿನ್' ಸಿನಿಮಾದ ಶೂಟಿಂಗ್ನಲ್ಲಿ ಬ್ಯೂಸಿಯಾಗಿದ್ದರೂ ನಟ ಧ್ರುವ ಸರ್ಜಾ ನಾಟಿ ಶೈಲಿಯಲ್ಲಿ ಚಿಕನ್ ಧಮ್ ಬಿರಿಯಾನಿ ಮಾಡಿದ್ದಾರೆ. ಇದೀಗ, ಅವರು ಅಡುಗೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.