ಅಣ್ಣನ ಅಶೀರ್ವಾದ, ಮಾವನ ಸಹಕಾರದಿಂದ ಗುಣಮುಖ ... ಧ್ರುವ ವರದಿ ನೆಗೆಟಿವ್​

Dhruva - Final
Published on

ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಇತ್ತೀಚೆಗಷ್ಟೇ ಕೋವಿಡ್​ ಪಾಸಿಟಿವ್​ ಆಗಿದ್ದು ಗೊತ್ತೇ ಇದೆ. ಕಳೆದ ಕೆಲವು ದಿನಗಳಿಂದ ಕ್ವಾರಂಟೈನ್​ನಲ್ಲಿದ್ದ ಅವರು, ಇದೀಗ ಗುಣಮುಖರಾಗಿದ್ದು, ವರದಿ ನೆಗೆಟಿವ್​ ಬಂದಿದೆ.

ಕಳೆದ ವಾರವಷ್ಟೇ, ಧ್ರುವ ಮತ್ತು ಪ್ರೇರಣಾ ಅವರ ಟೆಸ್ಟ್​ ಪಾಸಿಟಿವ್​ ಬಂದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಒಂದೇ ದಿನಕ್ಕೆ ಮನೆಗೆ ಶಿಫ್ಟ್​ ಆಗಿದ್ದರು. ಮನೆಯಲ್ಲೇ ಕ್ವಾರಂಟೈನ್​ ಮಾಡಿಕೊಂಡ ನಂತರ, ಬುಧವಾರ ಮತ್ತೊಮ್ಮೆ ಟೆಸ್ಟ್​ ಮಾಡಿಸಿದ್ದಾರೆ. ಈ ಟೆಸ್ಟ್​ನಲ್ಲಿ ನೆಗೆಟಿವ್​ ಬಂದಿದ್ದು, ಗುಣಮುಖರಾಗಿದ್ದಿಕ್ಕೆ ಧ್ರುವ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ನಾನು ಮತ್ತು ನನ್ನ ಪತ್ನಿ ಇವತ್ತು ಟೆಸ್​ ಮಾಡಿಸಿಕೊಂಡಿದ್ದು, ನೆಗೆಟಿವ್​ ಬಂದಿದೆ. ನಾವು ಗುಣಮುಖರಾಗುವುದಕ್ಕೆ ಪ್ರಾರ್ಥಿಸಿದ ಮತ್ತು ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಅಣ್ಣ ಚಿರು ಆಶೀರ್ವಾದ, ಮಾವ ಅರ್ಜುನ್​ ಸರ್ಜಾ ಅವರ ಸಹಕಾರ ಮತ್ತು ಸಲಹೆ, ಡಾಕ್ಟರ್​ ಸುರ್ಜಿತ್​ ಪಾಲ್​ ಸಿಂಗ್​ ಅವರ ಚಿಕಿತ್ಸೆಯಿಂದ ಗುಣಮುಖರಾಗಿದ್ದೇವೆ' ಎಂದು ಧ್ರುವ ಹೇಳಿಕೊಂಡಿದ್ದಾರೆ.

'ಪೊಗರು' ಚಿತ್ರದಲ್ಲಿ ಧ್ರುವ ನಟಿಸುತ್ತಿದ್ದು, ಲಾಕ್​ಡೌನ್​ ಕಾರಣಕ್ಕೆ ಬ್ರೇಕ್​ ಬಿದ್ದಿತ್ತು. ಈ ಮಧ್ಯೆ, ಲಾಕ್​ಡೌನ್​ ಮುಗಿದು, ಚಿತ್ರೀಕರಣ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದ್ದಂತೆಯೇ, ಅಣ್ಣನ ನಿಧನ ಮತ್ತು ಅನಾರೋಗ್ಯದಿಂದ ಧ್ರುವ ಚಿತ್ರೀಕರಣದಲ್ಲಿ ಭಾಗವಹಿಸಲು ಇನ್ನೂ ಸಾಧ್ಯವಾಗಿಲ್ಲ. 'ಪೊಗರು' ಚಿತ್ರಕ್ಕೆ ಹಾಡಿನ ಚಿತ್ರೀಕರಣ ಬಾಕಿ ಇದ್ದು, ಕರೊನಾ ಹಾವಳಿ ಸ್ವಲ್ಪ ತಗ್ಗುತ್ತಿದ್ದಂತೆಯೇ, ಧ್ರುವ ಚಿತ್ರೀಕರಣದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net