ಆ ವೀರಭದ್ರನೇ ತಕ್ಕ ಶಾಸ್ತಿ ಮಾಡುವಂತಾಗಲೀ … ಧನಂಜಯ್ ವಿರುದ್ಧ ನೆಟ್ಟಿಗರ ಆಕ್ರೋಶ

Head Bush 1
Published on

ಬೆಂಗಳೂರು: ಧನಂಜಯ್ ಅಭಿನಯದ ಹೆಡ್​ ಬುಷ್​ ಚಿತ್ರವು ಕಳೆದ ವಾರವಷ್ಟೇ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಈ ಮಧ್ಯೆ, ಚಿತ್ರದಲ್ಲಿನ ಒಂದು ಪ್ರಮುಖ ದೃಶ್ಯವು ವಿವಾದಕ್ಕೀಡಾಗಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.

ಚಿತ್ರದಲ್ಲೊಂದು ಕರಗದ ದೃಶ್ಯವಿದೆ. ಈ ಸಂದರ್ಭದಲ್ಲಿ ಜಯರಾಜ್​ ಪಾತ್ರ ಮಾಡಿರುವ ಧನಂಜಯ್​ ಮೇಲೆ ವೀರಗಾಸೆ ನೃತ್ಯ ಮಾಡುವವರ ಗೆಟಪ್​ನಲ್ಲಿರುವ ರೌಡಿಗಳ ಗುಂಪೊಂದು ಅಟ್ಯಾಕ್ ಮಾಡುತ್ತದೆ. ಈ ದೃಶ್ಯವು ವಿವಾದಕ್ಕೆ ಕಾರಣವಾಗಿದೆ.

ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ದೃವಿಕ ಕಲೆಯಾದ ವೀರಗಾಸೆಗೆ ಅವಮಾನ ಮಾಡಲಾಗಿದೆ, ರೌಡಿಗಳಿಗೆ ವೀರಗಾಸೆ ವೇಷಭೂಷಣಗಳನ್ನು ತೊಡಿಸಿ ಅವರಿಗೆ ಮನಬಂದಂತೆ ಥಳಿಸುವಂತೆ ತೋರಿಸಲಾಗಿದೆ, ಅವರಿಗೆ ಶೂಕಾಲಿನಲ್ಲಿ ಒದೆಯುವಂತ ದೃಶ್ಯಗಳನ್ನು ತೋರಿಸಿ ವೀರಭದ್ರನಿಗೆ ಅವಮಾನ ಮಾಡಲಾಗಿದೆ. ವೀರಗಾಸೆ ವೇಷ-ಭೂಷಣ ತೊಟ್ಟವರು ಸಹ ಶೂ ಧರಿಸಿ ಫೈಟ್​ ಮಾಡುವುದನ್ನು ತೋರಿಸಲಾಗಿದೆ. ವೀರಭದ್ರನ ಹಿನ್ನೆಲೆ ತಿಳಿಯದೆ ಇಂಥ ಕೆಲಸ ಮಾಡಲಾಗಿದ್ದು, ಸಂಸ್ಕೃತಿಯ ಅರಿವಿಲ್ಲದವರು ಇಂಥದ್ದೊಂದು ಅಪಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಕೆಲವರು ಬಹಿರಂಗವಾಗಿ ತಮ್ಮ ನೋವನ್ನು ತೋಡಿಕೊಂಡಿದ್ದು, ಸಾವಿರಾರು ವರ್ಷಗಳ ಇತಿಹಾಸವಿರುವ ವೀರಗಾಸೆ ಕಲೆಗೆ ಕಳಂಕ ತಂದ ಧನಂಜಯ್​ಗೆ  ವೀರಭದ್ರನೇ ತಕ್ಕ ಶಾಸ್ತಿ ಮಾಡುವಂತಾಗಲೀ ಎಂದು ತಮ್ಮ ಆಕ್ರೋಶವನ್ನು ಸೋಷಿಯಲ್​ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net