ದೇವರಾಜ್​ ಕುಮಾರ್​ ಈಗ 'ಕಡಲಮುತ್ತು' ... ಅಕ್ಟೋಬರ್​ನಲ್ಲಿ ಪ್ರಾರಂಭ

Kadala Muttu - Final
Published on

ಬೆಂಗಳೂರು: ಈ ಹಿಂದೆ 'ಡೇಂಜರ್​ ಜೋನ್​', 'ನಿಶ್ಯಬ್ಧ 2' ಮತ್ತು 'ಅನುಷ್ಕಾ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್​ ಕುಮಾರ್​, 'ತಾಜ್​ಮಹಲ್​ 2' ಎಂಬ ಚಿತ್ರದ ಮೂಲಕ ಹೀರೋ ಆಗಿದ್ದು ನೆನಪಿರಬಹುದು. ಮೊದಲ ಲಾಕ್​ಡೌನ್​ ಮುಗಿದ ನಂತರವೂ ಈ ಚಿತ್ರದ ಪತ್ರಿಕಾಗೋಷ್ಠಿಯೊಂದು ನಡೆದಿತ್ತು. 'ತಾಜ್​ಮಹಲ್​ 2' ಮುಗಿಯುವ ಮುನ್ನವೇ ದೇವರಾಜ್​ ಕುಮಾರ್​ ಇದೀಗ ಇನ್ನೊಂದು ಹೊಸ ಚಿತ್ರವನ್ನು ಸದ್ದಿಲ್ಲದೆ ಪ್ರಾರಂಭ ಮಾಡಿದ್ದಾರೆ. ಅದೇ 'ಕಡಲಮುತ್ತು'.

'ಕಡಲಮುತ್ತು' ಎಂಬ ಚಿತ್ರವನ್ನು ದೇವರಾಜ್​ ಸದ್ದಿಲ್ಲದೆ ಶುರು ಮಾಡಿದ್ದು, ಅಕ್ಟೋಬರ್​ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ, ಇತ್ತೀಚೆಗೆ ಚಿತ್ರದ ಸ್ಕ್ರಿಪ್ಟ್​ಪೂಜೆ ನಡೆದಿದೆ. ಈ ಚಿತ್ರವನ್ನು ದೇವರಾಜ್​ ಕುಮಾರ್​ ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಅದರಲ್ಲಿ ನಾಯಕನಾಗಿಯೂ ನಟಿಸುತ್ತಿದ್ದಾರೆ. ಕಥೆ-ಚಿತ್ರಕಥೆಯನ್ನೂ ಅವರೇ ಬರೆದಿದ್ದು, ಈ ಚಿತ್ರವನ್ನು ದೇವರಾಜ್ ಕುಮಾರ ಫಿಲಂಸ್ ಲಾಂಛನದಲ್ಲಿ ಅವರೇ ನಿರ್ಮಿಸುತ್ತಿದ್ದಾರೆ.

ಹೆಸರೇ ಹೇಳುವಂತೆ ಕಡಲತೀರದಲ್ಲಿ ನಡೆಯುವ ಚಿತ್ರವಾಗಿದ್ದು, ಮಂಗಳೂರು, ಕುಂದಾಪುರ, ಉಡುಪಿ, ಕಾರವಾರ ಮುಂತಾದ ಕಡೆ 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ದೇವರಾಜ್​ ಎದುರು ಹೊಸ ನಾಯಕಿಯ ಪರಿಚಯವಾಗಲಿದ್ದು, ಅದಕ್ಕಾಗಿ ಆಡಿಷನ್​ ನಡೆಸಲಾಗುತ್ತಿದೆ. ವೀನಸ್ ಮೂರ್ತಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿಕ್ರಂ ಸೆಲ್ವ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net