ಸುಶಾಂತ್​ ಮ್ಯಾನೇಜರ್ ದಿಶಾ ಸತ್ತಿದ್ದು ಹೇಗೆ? ಅವರ ಫ್ರೆಂಡ್ಸ್​ ಹೇಳ್ತಾರೆ ಕೇಳಿ ...

Disha - Sushant
Published on

ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ಹಿಂದಿನ ಮರ್ಮವೇನು ಎಂಬ ಪ್ರಶ್ನೆಗೆ ಹೇಗೆ ಉತ್ತರ ಸಿಗುತ್ತಿಲ್ಲವೋ, ಅವರಿಗೂ ಒಂದು ವಾರ ಮುಂಚೆ ನಿಧನರಾದ ಮ್ಯಾನೇಜರ್​ ದಿಶಾ ಸಾಲಿಯಾನ್​ ಸಾವಿನ ರಹಸ್ಯ ಸಹ ಇನ್ನೂ ಬಗೆಹರಿದಿಲ್ಲ.

ಜೂನ್​ ಎಂಟರಂದು, ದಿಶಾ ಮಲಾಡ್​ನಲ್ಲಿರುವ ಒಂದು ಅಪಾರ್ಟ್​ಮೆಂಟ್​ನ ಎಂಟನೇ ಮಹಡಿಯಿಂದ ಬಿದ್ದು ನಿಧನರಾದರು ಎಂದು ಎಲ್ಲರಿಗೂ ಗೊತ್ತಿದೆಯಾದರೂ, ಅಂದು ರಾತ್ರಿ ಏನಾಗಿತ್ತು ಎಂಬ ವಿಷಯ ಮಾತ್ರ ಇದುವರೆಗೂ ಬೆಳಕಿಗೆ ಬಂದಿಲ್ಲ.

ಅಂದು ಏನಾಯ್ತು ಎಂಬ ವಿಷಯ ಇದೀಗ ಸ್ವಲ್ಪಸ್ವಲ್ಪ ಬೆಳಕಿಗೆ ಬರುತ್ತಿದೆ. ದಿಶಾ ಸಾಲಿಯಾನ್​ ಅವರ ಸ್ನೇಹಿತರೊಬ್ಬರು, ತಮ್ಮ ಸ್ನೇಹಿತರಿಗೆ ಇದೇ ವಿಷಯವಾಗಿ ಒಂದಿಷ್ಟು ವಾಟ್ಸಪ್​ ಮಾಡಿದ್ದಾರೆ. ಈ ಸಂದೇಶಗಳು ಇದೀಗ ಎಲ್ಲೆಡೆ ಸುದ್ದಿ ಮಾಡುತ್ತಿವೆ.

ವಾಟ್ಸಪ್​ ಸಂದೇಶದ ಪ್ರಕಾರ, ಅಂದು ದಿಶಾ ಸಾಲಿಯನ್​ ಸ್ನೇಹಿತರೊಬ್ಬ ಪಾರ್ಟಿಯಲ್ಲಿ ಭಾಗವಹಿಸಿದ್ದರಂತೆ. ಈ ಸಂದರ್ಭದಲ್ಲಿ ದಿಶಾ ಅವರ ಮದುವೆಯಾಗುವ ಹುಡುಗನೂ ಇದ್ದನಂತೆ. ಅಂದು ಜಾಸ್ತಿ ಕುಡಿಡಿದ್ದ ದಿಶಾ, ಒಂದು ಹಂತದಲ್ಲಿ ಡಿಪ್ರೆಶನ್​ಗೆ ಒಳಗಾದರಂತೆ.

ಹೀಗೆ ಡಿಪ್ರೆಶನ್​ಗೆ ಒಳಗಾಗಿದ್ದ ಅವರು, ಸ್ವಲ್ಪ ವಿಚಿತ್ರವಾಗಿ ಆಡುತ್ತಿದ್ದರಂತೆ. ನೀವೆಲ್ಲಾ ನನ್ನನ್ನು ಕಡೆಗಣಿಸುತ್ತಿದ್ದೀರಿ, ನನಗೆ ಅಂತ ಯಾರೂ ಇಲ್ಲ ಎಂದು ಬೇಸರಿಸಿಕೊಂಡಿದ್ದರಂತೆ. ಕೊನೆಗೆ ಸ್ನೇಹಿತರೆಲ್ಲಾ ಸೇರಿ ಸಮಾಧಾನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ದಿಶಾ ಒಂದು ರೂಮಿಗೆ ಹೋಗಿ ಲಾಕ್​ ಹಾಕಿಕೊಂಡಿದ್ದಾರೆ. ಯಾವಾಗ, ಬಹಳ ಸಮಯದ ನಂತರ ಅವರು ಬಾಗಿಲು ತೆಗೆಯಲಿಲ್ಲವೋ, ಸ್ನೇಹಿತರಿಗೆ ಅನುಮಾನ ಬಂದು ಬಾಗಿಲು ಬಡಿದಿದ್ದಾರೆ. ಕೊನೆಗೆ ಬಾಗಿಲು ಮುರಿದು ಒಳ ಹೋದಾಗ, ರೂಮ್​ನಲ್ಲೆಲ್ಲೂ ದಿಶಾ ಕಾಣಲಿಲ್ಲವಂತೆ. ಕೊನೆಗೆ ಬಾಲ್ಕನಿಗೆ ಹೋಗಿ ನೋಡಿದಾಗ, ಅಲ್ಲಿಂದ ಬಿದ್ದು ಸತ್ತಿರುವ ವಿಷಯ ಗೊತ್ತಾಗಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ, ಅಷ್ಟರಲ್ಲಿ ದಿಶಾ ಪ್ರಾಣ ಬಿಟ್ಟಾಗಿತ್ತು.

ಈಗ ಈ ವಾಟ್ಸಪ್​ ಸಂದೇಶಗಳು ದಿಶಾ ಅವರ ಸ್ನೇಹಿತರ ಬಳಗದಲ್ಲಿ ಹರಿದಾಡುತ್ತಿದ್ದು, ಪೊಲೀಸರಿಗೂ ಸಿಕ್ಕಿದೆಯಂತೆ. ಈ ಕುರಿತು ಅವರು ಸೂಕ್ತ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net