ದೆಹಲಿ ಅತ್ಯಾ*ಚಾರ ಪ್ರಕರಣ: ‘ಭಾರತ ಅಫ್ಘಾನಿಸ್ತಾನವಾಗುತ್ತಿದೆ’ ಗಾಯಕಿ ಚಿನ್ಮಯಿ ಶ್ರೀಪಾದ ಆಕ್ರೋಶ! Chinmayi Sripaada

ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripaada) ಅವರು ದೆಹಲಿ ಅತ್ಯಾಚಾರ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತವು ಅಫ್ಘಾನಿಸ್ತಾನವಾಗುತ್ತಿದೆ ಎಂದು ಹೇಳಿದ್ದಾರೆ. ಸಂಪೂರ್ಣ ವರದಿ ಓದಿ.
Singer Chinmayi Sripada has expressed strong outrage on social media regarding the Delhi rape case.
ದೆಹಲಿ ಅತ್ಯಾಚಾರ ಪ್ರಕರಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗಾಯಕಿ ಚಿನ್ಮಯಿ ಶ್ರೀಪಾದ
Published on

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ಕಲ್ಕಾಜಿ ಪ್ರದೇಶ ಕಾಳಿ ಮಂದಿರದ ಬಳಿಯಿರುವ ಪಾರ್ಕ್​ವೊಂದರಲ್ಲಿ ಪೊಲೀಸರಂತೆ ಪೋಸ್​​ ಕೊಟ್ಟು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ ಪ್ರಕರಣ ದೇಶದೆಲ್ಲಡೆ ಚರ್ಚೆಗೆ ವೇದಿಕೆಯಾಗಿದೆ.

ಈ ಘಟನೆ ಬಳಿಕ ದೆಹಲಿಯ ಪ್ರತಿಷ್ಟಿತ ಲೇಡಿ ಶ್ರೀರಾಮ್​ ಕಾಲೇಜ್​​ ಆಡಳಿತ, ವಿದ್ಯಾರ್ಥಿನಿಯರ ಹಿತಕ್ಕಾಗಿ ಆಫ್​​ಲೈನ್​ ತರಗತಿ ಬದಲಿಗೆ ಆನ್​ಲೈನ್​ ಕ್ಲಾಸ್​​ ನಡೆಸುವುದಾಗಿ ಆದೇಶ ಹೊರಡಿಸಿದ್ದು, ಈಗ ಇದು ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದಿರುವ ಈ ಅಮಾನವೀಯ ಘಟನೆಯನ್ನು ಹಾಗೂ ಕಾಲೇಜಿನ ನಿರ್ಧಾರವನ್ನು ಗಾಯಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಚಿನ್ಮಯಿ ಶ್ರೀಪಾದ (Chinmayi Sripaada) ತೀವ್ರವಾಗಿ ಖಂಡಿಸಿದ್ದು, ಭಾರತ ನಿಧಾನಕ್ಕೆ ಅಫ್ಘಾನಿಸ್ತಾನವಾಗಿ ಬದಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read
ನಂದಿನಿ ಹಾಲಿನ ದರ ಹೆಚ್ಚಳ; ಸರ್ಕಾರಕ್ಕೆ ಒಕ್ಕೂಟಗಳ ಮನವಿ: ಸಮಗ್ರ ಮಾಹಿತಿ ಒದಗಿಸಲು ಸಿಎಂ ಡಿ. ಕೆ. ಶಿವಕುಮಾರ್ ಸೂಚನೆ! Hike in Nandini Milk
Singer Chinmayi Sripada has expressed strong outrage on social media regarding the Delhi rape case.

ಭಾರತ ಅಫ್ಘಾನಿಸ್ತಾನವಾಗುತ್ತಿದೆ!

ಈ ಘಟನೆ ಬಗ್ಗೆ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ಗಾಯಕಿ ಚಿನ್ಮಯಿ ಶ್ರೀಪಾದ, ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಇಷ್ಟು ಕೆಳಮಟ್ಟಿಗೆ ಇಳಿದಿದೆ. ದೇಶ 7.8 ಆರ್ಥಿಕ ವೇಗವನ್ನು ತಲುಪಿದೆ ಎನ್ನಲಾಗುತ್ತಿದೆ. ಆದರೆ ಈ ದೇಶದಲ್ಲಿ ಮಹಿಳೆಯರಿಗೆ ಭದ್ರತೆ ಎನ್ನುವುದೇ ಇಲ್ಲದಾಗಿದೆ. ಧರ್ಮದ ಹೆಸರಿನಲ್ಲಿ ಪುರುಷರ ಕರ್ಮಕಾಂಡಗಳನ್ನು ಸಹಿಸಿಕೊಳ್ಳುತ್ತಾರೆ, ಹೆಣ್ಣನ್ನು ದೇವಿ ಎನ್ನುತ್ತಲೇ ನೀಚ ಕೃತ್ಯಗಳನ್ನು ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಇದು ತ್ರಿಪಲ್​ ಇಂಜಿನ್ ಸರ್ಕಾರ ನೀಡುತ್ತಿರುವ ಕೊಡುಗೆಯಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿರುವ ಅತ್ಯಾಚಾರಿಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಭಾರತ ನಿಧಾನವಾಗಿ ತಾಲಿಬಾಲ್​ ಸಂಸ್ಕೃತಿಯಿರುವ ಅಫ್ಘಾನಿಸ್ತಾನವಾಗಿ ಬದಲಾಗುತ್ತಿದೆ ಎಂದು ಆಕ್ರೋಶ ಭರಿತರಾಗಿ ಬರೆದುಕೊಂಡಿದ್ದಾರೆ.

Web

ಘಟನೆ ಹಿನ್ನಲೆ!

ದೆಹಲಿಯ ಕಲ್ಕಾಜಿ ಪ್ರದೇಶ ಕಾಳಿ ಮಂದಿರದ ಪಕ್ಕದಲ್ಲಿರುವ ಪಾರ್ಕ್​ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಹಾಗೂ ಆಕೆಯ ಸ್ನೇಹಿತ ಅಡ್ಡಾಡ್ಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಮೂವರು ಮದ್ಯ ವಯಸ್ಕ ಪುರುಷರು ತಾವು ಪೊಲೀಸರೆಂದು ಹೇಳಿಕೊಂಡು ಮಾತಿಗಿಳಿದಿದ್ದಾರೆ.

ಸ್ಪಲ್ಪ ಸಮಯದ ನಂತರ, ಚಾಕು ಮತ್ತು ಪಿಸ್ತೂಲ್​ನ್ನು ತೋರಿಸಿ ಬೆದರಿಕೆ ಒಡ್ಡಿ ಆ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಮೂವರು ಕಾಮುಕರು ಅತ್ಯಾಚಾರ ಎಸೆಗಿದ್ದು, ಈ ಬಗ್ಗೆ ಮಾಹಿತಿ ನೀಡಿದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ. ನಂತರ ಬಾಲಕಿ ಹಾಗೂ ಆಕೆಯ ಗೆಳೆಯ ಹತ್ತಿರದ ಪೊಲೀಸರಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಾಲಕಿ ಹೇಳಿಕೆಯನ್ನು ಆಧರಿಸಿ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ.

Also Read
ಹೊರ್ಮುಜ್ ಜಲಸಂಧಿ ತೆರೆಯಲು ಸಿದ್ಧ ಎಂದ ಇರಾನ್: ಅಮೆರಿಕದ ಮುಂದಿಟ್ಟ 'ಆ' ಮಹತ್ವದ ಷರತ್ತೇನು? Strait Of Hormuz
Singer Chinmayi Sripada has expressed strong outrage on social media regarding the Delhi rape case.

ಪೊಲೀಸ್ ಎನ್​ಕೌಂಟರ್​; ಕಾಲಿಗೆ ಗುಂಡು!

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು, ವಿಶೇಷ ತಂಡವನ್ನು ನಿರ್ಮಿಸಿ, ಪಾಕ್​ನ ಸಿಸಿಟಿವಿ ಯನ್ನು ಪರೀಕ್ಷಿಸಿದಾಗ ಆರೋಪಿಯೊಬ್ಬನ ಗುರುತು ಪತ್ತೆಯಾಗಿದೆ. ಅಮರ್ ಕಾಲೋನಿಯ ಡಿಎಂ ಆಫೀಸ್ ರಸ್ತೆ ಬಳಿ ಆರೋಪಿ ಇರುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಪೊಲೀಸರು ಅಲ್ಲಿದೆ ದಾವಿಸಿ ಆರೋಪಿ ಬಂಧನಕ್ಕೆ ಮುಂದಾಗಿದ್ದಾರೆ.

ಆದರೆ, ಆರೋಪಿ ಶರಣಾಗುವ ಬದಲಿಗೆ ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದು, ಆತ್ಮ ರಕ್ಷಣೆಗಾಗಿ ಪೊಲೀಸರು ಮೂರು ಸುತ್ತು ಗುಂಡನ್ನು ಹಾರಿಸಿದ್ದು, ಆರೋಪಿ ಆಸಿಫ್​ನ ಕಾಲಿಗೆ ಗುಂಡು ತಗುಲಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸಿಫ್​ನ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವ ಭರವಸೆ ನೀಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net